ಗುಜರಾತಿ ಚಿತ್ರ ” ಛೆಲ್ಲೋ ಶೋ ” ಆಸ್ಕರ್‌ ಅಂಗಳಕ್ಕೆ

0

ಮಂಗಳೂರು : ಸಿನಿಮಾ ಜಗತ್ತಿನ ಪ್ರತಿಷ್ಟಿತ ಆಸ್ಕರ್‌ ಪ್ರಶಸ್ತಿ ಪಟ್ಟಿಗೆ ಗುಜರಾತಿ ಚಿತ್ರ ಫೆಲ್ಲೋ ಶೋ ಆಯ್ಕೆಯಅಗಿದೆ. ಲಗಾನ್‌ ಬಳಿಕ ಆಯ್ಕೆಯಾದ ಮೊದಲ ಭಾರತೀಯ ಸಿನೆಮಾ ಇದಾಗಿದೆ. ಜನವರಿ 24 ರಂದು ಆಯ್ಕೆಯಾದ ಚಿತ್ರಗಳ ಪಟ್ಟಿ ಹೊರ ಬೀಳಲಿದ್ದು ಮಾರ್ಚ್‌ 12ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಈ ಚಿತ್ರದ ವಿಶೇಷತೆಯೆಂದರೆ ಸಂಕಲನ. ಇದನ್ನು ಮಾಡಿರುವವರು ಬಂಟ್ವಾಳ ತಾಲೂಕು ದಿವಂಗತ ನೀರ್ಕಜೆ ಭೀಮ ಭಟ್ಟರ ಮೊಮ್ಮಗ (ಮಗಳ ಮಗ) ಪವನ್‌ ಭಟ್‌.  ಸಾಪ್ಟ್‌ ವೇರ್‌ ಇಂಜಿನಿಯರ್‌ ಆಗಿರುವ ಪವನ್‌ ಭಟ್‌ ಈಗಾಗಲೇ 22 ಸಿನಿಮಾಗಳನ್ನು ಎಡಿಟ್‌ ಮಾಡಿದ್ದಾರೆ.

ನ್ಯೂಜಿಲ್ಯಾಂಡ್ ನಲ್ಲಿರುವ ಶ್ರೇಯಸ್‌ ಎಂಬವರು ಈ ಚಿತ್ರದ ಎಡಿಟಿಂಗ್‌ ವಿಭಾಗದಲ್ಲಿ ಮಾಡಿದ್ಧಾರೆ. ಬೆಸ್ಟ್‌ ಇಂಟರ್‌ ನ್ಯಾಷನಲ್‌ ಪೀಚರ್‌ ಫಿಲ್ಮ್‌ ವಿಭಾಗದಲ್ಲಿ ದುಡಿದಿದ್ದಾರೆ. ಬೆಸ್ಟ್‌ ಇಂಟರ್‌ ನ್ಯಾಷನಲ್‌ ಪೀಚರ್‌ ಫಿಲ್ಮ್‌ ವಿಭಾಗದಲ್ಲಿ 92 ಚಿತ್ರಗಳು ಆಯ್ಕೆಯಾಗಿದ್ದು, ನಂತರದ 15ರ ಪಟ್ಟಿಯಲ್ಲಿಯೂ ಸ್ಥಾನ ಪಡೆದುಕೊಂಡಿದೆ. ಮದರ್‌ ಇಂಡಿಯಾ, ಸಲಾಂ ಬಾಂಬ, ಲಗಾನ್‌ ಬಳಿಕ ” ಛೆಲ್ಲೋ ಶೋ ” ಅಸ್ಕರ್‌ ಹಾದಿಯಲ್ಲಿದ್ದು ಕೊನೆಯ 5ರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆಯೇ ಕಾದು ನೋಡಬೇಕು. ಅಂದ ಹಾಗೆ … ಛೆಲ್ಲೋ ಶೋ ಅಂದರೆ ಲಾಸ್ಟ್‌ ಶೋ ಎಂಧರ್ಥ.

LEAVE A REPLY

Please enter your comment!
Please enter your name here