ಪಾಲ್ತಾಡಿ ಶಾಲಾ ವಾರ್ಷಿಕೋತ್ಸವ, ಯಕ್ಷ ಸಂಭ್ರಮ, ‘ನಿತ್ಯೆ ಬನ್ನಗ’ ತುಳು ನಾಟಕ ಪ್ರದರ್ಶನ

0

ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿದರೆ ಗುರಿ ಮುಟ್ಟಲು ಸಾಧ್ಯ -ಗಿರೀಶ್ ನಂದನ್

ಸವಣೂರು : ಸರಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ. ಸರಕಾರಿ ಶಾಲೆಯಲ್ಲಿ ಕಲಿತ ನಾನು ಕೆಎಎಸ್ ಮಾಡಿದ್ದೇನೆ. ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿದರೆ ಗುರಿ ಸಾಧಿಸಲು ಸಾಧ್ಯ. ಸರಕಾರಿ ಶಾಲೆಗಳ ಬೆಳವಣಿಗೆ ನಿಟ್ಟಿನಲ್ಲಿ ತನ್ನ ಪ್ರೋತ್ಸಾಹ ಸದಾ ಇರುತ್ತದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹೇಳಿದರು.

ಅವರು ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಿವೃತ ಮುಖ್ಯಗುರು ಈಶ್ವರ ಭಟ್‌ ಎಲ್ಯಡ್ಕ ಅವರು ದೀಪ ಪ್ರಜ್ವಲನೆ ಮಾಡಿದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ನೂತನ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ದೊರಕಲಿದೆ. ಗುರು-ಶಿಷ್ಯರ ಉತ್ತಮ ಸಂಬಂಧ ವ್ಯಕ್ತಿಯನ್ನು ಶಕ್ತಿಯನ್ನಾಗಿ ಮಾಡುತ್ತದೆ ಎಂದರು. ಉಪನ್ಯಾಸ ನೀಡಿದ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ಶಿಕ್ಷಣದ ಜತೆ ಸಾಮಾಜಿಕ ನೈಪುಣ್ಯತೆಯನ್ನು ಬೆಳೆಸಿಕೊಂಡರೆ ಉತ್ತಮ ಭವಿಷ್ಯಕ್ಕೆ ಪೂರಕ ಎಂದರು.

ಅಧ್ಯಕ್ಷತೆಯನ್ನು ನಿವೃತ ಸೇನಾಧಿಕಾರಿ ಸಂಜೀವಗೌಡ ಪಾರ್ಲ ಅವರು ವಹಿಸಿದ್ದರು. ಕಬಡ್ಡಿಆಟಗಾರ ಪ್ರಶಾಂತ್‌ ರೈ ಕೈಕಾರ ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಗೌಡ ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ರೈ ನಡುಕೂಟೇಲು ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಪಾರ್ಲ ವಂದಿಸಿದರು. ಬಾಲಕೃಷ್ಣ ರೈ ಪೋರ್ದಾಲ್‌ ಕಾರ್ಯಕ್ರಮ ನಿರೂಪಿಸಿದರು.

ಗೌರವಾರ್ಪಣೆ: ಈ ಸಂದರ್ಭದಲ್ಲಿ ಶಾಲಾಭಿವೃದ್ದಿಗೆ ಕೊಡುಗೆ ನೀಡಿದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ ನಳೀಲು, ಸ್ಮಾರ್ಟ್‌ಕ್ಲಾಸ್ ದಾನಿಗಳಾದ ಸುಮಾ ಆನಂದ ಗೌಡ ಪಾರ್ಲ, ರಾಜಗೋಪಾಲ ಕೊಯಿಕುಳಿ, ಗ್ರಾ.ಪಂ.ಸದಸ್ಯ ತಾರಾನಾಥ ಸುವರ್ಣ ಬೊಳಿಯಾಲ ಹಾಗೂ ತುಳು ಚಿತ್ರನಟರಾದ ದೀಪಕ್‌ರೈ ಪಾಣಾಜೆ ,ಪ್ರಕಾಶ್ ತೂಮಿನಾಡು, ಸುಬ್ಬು ಸಂಟ್ಯಾರ್‌ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಗುರುವಂದನೆ: ಈ ಸಂದರ್ಭದಲ್ಲಿ ಪಾಲ್ತಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಸುಶೀಲ ಪಿ.ಯು. ವೆಂಕಟ್ರಮಣ ಭಟ್, ಲೀಲಾವತಿ, ಅಂಬಿಕಾ, ಭಾಸ್ಕರ, ಆಶಾಕುಮಾರಿ ಅವರಿಗೆ ಗುರುವಂದನೆ ಮಾಡಲಾಯಿತು. ಮಾಜಿ ಎಸ್.ಡಿ.ಎಂ.ಸಿ, ಅಧ್ಯಕ್ಷರಾದ ಜನಾರ್ಧನ ಗೌಡ ಅಲ್ಯಾಡಿ, ಜಗದೀಶ್‌ಆಚಾರ್ಯ ಪಾರ್ಲ, ವಸಂತ ಪೂಜಾರಿ ನೇರೋಳ್ತಡ್ಕ ಅವರನ್ನುಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರಣಮ್ಯಪಿ.ಜಿ. ಶರಧಿ ಬಿ.ಎಸ್., ಕಿರಣ್, ಧನ್ಯ ಶ್ರೀ ಅವರನ್ನುಅಭಿನಂದಿಸಲಾಯಿತು. ಶಾಲಾಭಿವೃದ್ದಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಭಟ್ , ನಿವೃತ ಅಂಗನವಾಡಿ ಕಾರ್ಯಕರ್ತೆ ಸುನಂದ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರವೀನ್‌ರೈ ನಡುಕೂಟೇಲು ಅವರನ್ನು ಶಾಲಾಭಿವೃದ್ದಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಬೆಳಿಗ್ಗೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶ್ರೀಧರ ಗೌಡ ಅಂಗಡಿಹಿತ್ಲು ಅವರು ಉದ್ಘಾಟಿಸಿದರು. ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಸತೀಶ್‌ ಅಂಗಡಿಮೂಲೆ, ಭರತ್‌ರೈ ಅಲ್ಯಾಡಿ, ತಾರಾನಾಥ ಬೊಳಿಯಾಲ, ಹರೀಶ್‌ ಕಾಯರಗುರಿ, ಚೇತನಾ, ಕೆಯ್ಯೂರು ಸಿ.ಆರ್.ಪಿ. ನಿರಂಜನ್, ಉಳ್ಳಾಕುಲು ಫ್ರೆಂಡ್ಸ್‌ಕ್ಲಬ್‌ ಅಧ್ಯಕ್ಷ ಗುರುಕಿರಣ್ ಬೊಳಿಯಾಲ, ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಅಧ್ಯಕ್ಷ ಉದಯಗೌಡ, ನವೋದಯ ಒಕ್ಕೂಟದ ಅಧ್ಯಕ್ಷ ಮೋಹಿನಿ ಪಾಲ್ತಾಡು, ಸವಣೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ., ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ ರೈ ನಡುಕೂಟೇಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಪಾರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಸುಜಾತರೈ  ಸ್ವಾಗತಿಸಿ, ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿ ಪುಷ್ಪಾ ವಂದಿಸಿದರು. ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಸಂಭ್ರಮ: ಸಂಜೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ತಾಡಿ, ಉಪ್ಪೊಳಿಗೆ ಅಂಗನವಾಡಿ ಕೇಂದ್ರ, ಪಾಲ್ತಾಡಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯ ನಡೆಯಿತು. ಸಂಜೆ 5.30ರಿಂದ ಯಕ್ಷ ಸಂಭ್ರಮದಲ್ಲಿ ಸುಬ್ಬು ಸಂಟ್ಯಾರ್ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸುದರ್ಶನೋಪಖ್ಯಾನ ಯಕ್ಷಗಾನ, ರಾತ್ರಿ 10ರಿಂದ ಶಾರದಾ ಆರ್ಟ್ಸ್‌ ಕಲಾವಿದೆರ್ ಮಂಜೇಶ್ವರ ತಂಡದಿಂದ  ದೀಪಕ್‌ರೈ ಪಾಣಾಜೆ ತಂಡದಿಂದ ಹಾಸ್ಯ ನಾಟಕ ನಿತ್ಯೆ ಬನ್ನಗ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here