ಪುತ್ತೂರು :ಕಬಕದ ಅಡ್ಯಾರಗೋಳಿಯಲ್ಲಿ ದ.28 ರಂದು ಅಡ್ಯಲಾಯ ಮತ್ತು ಪರಿವಾರದೈವಗಳ ನೇಮೋತ್ಸವದ ಸಡಗರ ಆರಂಭ ಗೊಂಡಿದೆ.
ದ 21. ರಂದು ಗೊನೆಮುಹೂರ್ತ ನಡೆದಿದ್ದು. ದ.27 ರ ಸಂಜೆ ಊರ ಹತ್ತು ಸಮಸ್ತರಿಂದ ಕಬಕ ಶ್ರೀ ಮಹಾದೇವೀ ದೇವಸ್ಥಾನ ದಿಂದ ದೈವಸ್ಥಾನ ದವರೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ದ.28 ರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ಹವನ, ಶುದ್ಧಿ ಕಲಶ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ಅಡ್ಯಲಾಯ ವೈದ್ಯನಾಥ, ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ವ್ಯಾಘ್ರ ಚಾಮುಂಡಿ ದೈವಗಳಿಗೆ ನೇಮ ನಡೆಯಲಿದೆ. ದ.29 ರ ಬೆಳಿಗ್ಗೆ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆಯಲಿದೆ.
ವೇದಮೂರ್ತಿ ಮಿತ್ತೂರು ಸದಾಶಿವ ಭಟ್ ಮತ್ತು ಶ್ರೀಧರ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಅಡ್ಯಲಾಯ ಸೇವಾಸಮಿತಿ ಯ ಗೌರವಾಧ್ಯಕ್ಷ ವಿಶ್ವನಾಥ ಭಟ್ ಕೊಳಚಪ್ಪೆ, ಅಜಿತ್ ಕುಮಾರ್ ಜೈನ್ ಕಲ್ಲೇಗ, ಅಧ್ಯಕ್ಷ ಸತೀಶ್ ರೈ ಡಿಂಬ್ರಿ ಗುತ್ತು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಕೋಶಾಧಿಕಾರಿ ರಮೇಶ್ ಆಚಾರ್ಯ ಕೆದಿಮಾರ್, ಉಪಾಧ್ಯಕ್ಷರು ಗಳಾದ ವಿಶ್ವನಾಥ ಭಟ್ ವಡ್ಯ, ವ ಗೋಪಾಲ ಕೃಷ್ಣ ರೈ ಪುತ್ತೂರು ಟಯರ್ಸ್ ಕಬಕ, ಜಿನ್ನಪ್ಪ ಪೂಜಾರಿ ಮುರ, ಜೊತೆ ಕಾರ್ಯದರ್ಶಿ ಗಳಾದ ರವಿ ಮುಂಗ್ಲಿಮನೆ, ರವೀಂದ್ರ ನಾಥ ಮೇಲಾ0ಟ ಕಲ್ಲಂದಡ್ಕ, ಸದಸ್ಯರುಗಳಾದ ದಿನೇಶ್ ಶ್ರೀ ಶಾಂತಿ, ಕೃಷ್ಣಪ್ಪ ಗೌಡ ಅಡ್ಯಾಲು, ಜನಾರ್ಧನ ಪ್ರಕಾಶ್ ವಡ್ಯ, ರವೀಂದ್ರ ಪೋಳ್ಯ, ಮಹಾದೇವೀ ಧರ್ಮ ಸೇವಾ ವಿಶ್ವಸ್ಥ ಮಂಡಳಿ, ಮಹಾದೇವೀ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ, ಮಹಿಳಾ ಭಜನಾ ಮಂಡಳಿ, ಸಹಾಯ ಸಂಜೀವಿನಿ ವಾಟ್ಸಾಪ್ ಗ್ರೂಪ್, ಅಯ್ಯಪ್ಪ ಭಕ್ತ ವೃಂದ, ವೀರಾಂಜನೇಯ ಫ್ರೆಂಡ್ಸ್ ಪದೆಂಜಾರ್, ಚಾಮುಂಡೇಶ್ವರಿ ಯುವ ಬಳಗ ವಿದ್ಯಾಪುರ, ನಾಗ ಮತ್ತು ಪಂಚ ದೈವಗಳ ಸೇವಾಸಮಿತಿ ವಿದ್ಯಾಪುರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಬಕ ಕುಳ, ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಹಾಗೂ ಭಕ್ತರು ಭಾಗವಹಿಸಿದ್ದರು.