ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಪಂದ್ಯಾಟ:ವೈ.ಎಸ್.ವಿ. ವಾಮದಪದವು ವಿನ್ನರ್ಸ್ | ಇಲಾಖಾ ಮಟ್ಟದ ಪಂದ್ಯದಲ್ಲಿ ಪೊಲೀಸ್ ಇಲಾಖೆ ಚಾಂಪಿಯನ್

0

ಪುತ್ತೂರು: 12 ನೇ ವರ್ಷದ ಅಮರ್ ಅಕ್ಬರ್ ಅಂತೋನಿ ಸೌಹಾರ್ಧ ಕ್ರಿಕೆಟ್ ಪಂದ್ಯಾಟವು ಡಿ. 20ರಿಂದ 26 ರವರೆಗೆ 6 ದಿನಗಳ ಕಾಲ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಿತು.

ಪಂದ್ಯಾಟದ ರೋಲಿಂಗ್ ಟ್ರೋಫಿಯನ್ನು ವೈ.ಎಸ್.ವಿ. ವಾಮದಪದವು ಪಡೆದುಕೊಳ್ಳುವ ಮೂಲಕ ವಿನ್ನರ್ಸ್ ಆಗಿ ಮೂಡಿ ಬಂದಿತು. ನಮೋ ಬ್ರದರ್ಸ್ ಬೋಳಂಗಡಿ ರನ್ನರ್ಸ್ ಆಗಿ ಗಮನ ಸೆಳೆಯಿತು.


ಕಿಲ್ಲೆ ಕಪ್ ವಿನ್ನರ್ಸ್ ಆಗಿ ಫೈಟರ್ಸ್ ತೋಡಾರ್ ಪ್ರಥಮ, ಜಾನ್ ಜಿಗ್ಗರ್ ಸುಳ್ಯ ದ್ವಿತೀಯ ಸ್ಥಾನ ಗಳಿಸಿತು. ಗ್ರಾಮ ಕಪ್ನ ವಿನ್ನರ್ಸ್ ಆಗಿ ಎಮಿರೇಟ್ಸ್ ನೆಲ್ಯಾಡಿ ಪಡೆದುಕೊಂಡಿತು. ಕರಾವಳಿ ಬನ್ನೂರು ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಡಿ 24 ಶನಿವಾರದಂದು ನಡೆದ ಇಲಾಖಾ ಮಟ್ಟದ ವಿವಿಧ ಇಲಾಖೆಗಳ 12 ತಂಡಗಳ ಕ್ರಿಕೆಟ್ ಪಂದ್ಯಕೂಟದಲ್ಲಿ ಪೊಲೀಸ್ ಇಲಾಖೆ ಚಾಂಪಿಯನ್ ಮತ್ತು ರುನ್ನರ್ಸ್ ಆಗಿ ಪಿ ಇ ಟಿ ಎಲೆವೆನ್ ಪ್ರಶಸ್ತಿ ಪಡೆದುಕೊಂಡಿತ್ತು. ಮ್ಯಾನ್ ಸೀರಿಯಸ್ ಪ್ರಶಸ್ತಿಯನ್ನು ಪೊಲೀಸ್ ತಂಡದ ಶಿವ ಪಡೆದುಕೊಂಡರೆ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಯನ್ನು ಪೊಲೀಸ್ ಇಲಾಖೆಯ ಪ್ರಶಾಂತ್ ತನ್ನದಾಗಿಸಿಕೊಂಡರು.

ಸಿಟಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ಮತ್ತು ಸೌದಿ ಆರೇಬಿಯಾ ಇವುಗಳ ಸಹಯೋಗದಲ್ಲಿ ಪಂದ್ಯಾಟ ನಡೆಯಿತು. ಯುವ ಸಮುದಾಯದಲ್ಲಿ ಶಾಂತಿ ಮತ್ತು ಸೌಹಾರ್ಧತೆ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ.


ಕ್ರಿಕೆಟ್ ಪಂದ್ಯಾಟವು 6 ದಿನಗಳ ಕಾಲ ಅಹೋರಾತ್ರಿ ನಡೆದಿದ್ದು, ಸುಮಾರು 160 ತಂಡಗಳು ಭಾಗವಹಿಸಿತು. `ಅಮರ್ ಅಕ್ಬರ್ ಅಂತೋನಿ’ ಟ್ರೋಫಿ ಪಂದ್ಯಾಟದ ಜೊತೆಗೆ ಈ ಬಾರಿ ವಿಶೇಷವಾಗಿ ದಿ. ಗಣಪತಿ ನಾಯಕ್ ಅವರ ಸ್ಮರಣಾರ್ಥ 14ರಿಂದ 16ವರ್ಷದ ಬಾಲಕರಿಗೆ `ಸ್ಟಿಚ್ ಬಾಲ್’ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಇದರೊಂದಿಗೆ ಎನ್.ಎಸ್. ಕಿಲ್ಲೆ ಅವರ ಸ್ಮರಣಾರ್ಥ `ಕಿಲ್ಲೆ ಕಪ್’ ಪಂದ್ಯಾಟವೂ ನಡೆಯಿತು. ಹಳ್ಳಿಯ ಯುವಕರಿಗೆ ಪ್ರೇರಣೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ `ಹಳ್ಳಿ ಹುಡುಗ್ರು ಪ್ಯಾಟೆ ಕಪ್’ ಮತ್ತು ವಿವಿಧ ಇಲಾಖೆಗಳ ಪಂದ್ಯಾಟ ಗಮನ ಸೆಳೆಯಿತು.


ಡಿ. 22ರಂದು ಸಂಜೆ ನಡೆದ ಸಮಾರಂಭವನ್ನು ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು.
ಭಾರತ್ ಪ್ರಿಂಟ್ ನ ಭರತ್ ಕುಮಾರ್ ಕಲ್ಲಾರೆ, ಕಿಲ್ಲೆ ಪ್ರತಿಷ್ಠಾನದ ಕಡಮಜಲು ಸುಭಾಷ್ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಜಗನ್ನಿವಾಸ್ ರಾವ್, ಪುತ್ತೂರು ಕೇಂದ್ರ ಮಸೀದಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್, ಪುತ್ತೂರು ಮಾಯಿದೇ ದೇವುಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಪದ್ಮಶ್ರೀ ಸೋಲಾರ್ ಸೀತಾರಾಮ ರೈ, ಉಪ್ಪಳ ಸೀತಂಗೋಳಿಯ ಬಿ.ಕೆ. ಬಿಲ್ಡ್ ಮಾರ್ಟ್ನ ಬಿ.ಕೆ. ಮೊಯಿನುದ್ದೀನ್, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು, ರೈ ಎಸ್ಟೇಟಿನ ಅಶೋಕ್ ಕುಮಾರ್ ರೈ, ಆಮ್ ಆದ್ಮಿ ಪಕ್ಷದ ಪುತ್ತೂರು ಅಧ್ಯಕ್ಷ ವಿಷು ಕುಮಾರ್, ನಗರಸಭೆ ಸದಸ್ಯ ರಿಯಾಝ್ ಪರ್ಲಡ್ಕ, ಡಾ. ನಝೀರ್ ಅಹಮದ್ ಕ್ಲಿನಿಕಿನ ಡಾ. ನಝೀರ್ ಅಹಮದ್, ಸಿಝ್ಲರ್ ಪ್ರಸನ್ನ ಕುಮಾರ್ ಶೆಟ್ಟಿ, ಬಾಂಧವ್ಯ ಫ್ರೆಂಡ್ಸ್ ನ ಸ್ಕರಿಯ, ಫಾರೂಕ್, ಪ್ರಶಾಂತ್ ರೈ, ಕ್ಲಾಸಿಕ್ ಫ್ರೆಂಡ್ಸ್ ಉರೈಸ್, 10 ಗೈಸ್ ಅಧ್ಯಕ್ಷ ಮುಸ್ತಫಾ, ಪುತ್ತೂರು ಸಿಟಿ ಫ್ರೆಂಡ್ಸ್ ನ ಅರುಣಾ ಬಪ್ಪಳಿಗೆ, ಸಾಧಿಕ್, ರಜ್ಹಾಕ್, ಪುತ್ತೂರು ತ್ರಿಶೂಲ್ ಫ್ರೆಂಡ್ಸ್ ನ ಧರೆನ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಪುತ್ತೂರಿನ 25 ಮಂದಿ ವಿದ್ಯುತ್ ಲೈನ್ಮೆನ್ಗಳನ್ನು ಹಾಗೂ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ ಯು. ಪಿ ಶಿವಾನಂದ, ಮೆಸ್ಕಾಂಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ರಾಮಚಂದ್ರ ರಾಜೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here