“ಪಠಾಣ್” ಬದಲಾವಣೆಗೆ ಸೆನ್ಸಾರ್‌ ಮಂಡಳಿ ಸೂಚನೆ

0

ಮುಂಬೈ : ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಆಭಿನಯದ ಪಠಾಣ್ ಚಿತ್ರದ ಹಾಡು ಸೇರಿದಂತೆ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ಬದಲಾಯಿಸಿ ಪರಿಷ್ಕೃತ ಆವೃತ್ತಿಯನ್ನು ಸೆನ್ಸಾರ್‌ಗಾಗಿ ಸಲ್ಲಿಸುವಂತೆ ಕೇಂದ್ರ ಚಲನಚಿತ್ರ ಪ್ರಾಮಾಣಿಕರಣಮಂಡಳಿಯ ಅಧ್ಯಕ್ಷ ಪ್ರಸೂನ್‌ ಜೋಷಿ ತಿಳಿಸಿದ್ದಾರೆ.‌

ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಪಠಾನ್‌ ಚಲನಚತ್ರವು ಜನವರಿಯಲ್ಲಿ ತೆರೆಗೆ ಬರಲಿದ್ದು ಹಿಂದಿ ತಮಿಳು ಮತ್ತು ತೆಲುಗು ಅವತರಣಿಕೆಯಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಭೇಷರಮ್‌ ರಂಗ್‌ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ದರಿಸಿ ಮಾಡಿರುವ ನೃತ್ಯ ವಿವಾದಕ್ಕೆ ಕಾರಣವಾಗಿತ್ತು.

LEAVE A REPLY

Please enter your comment!
Please enter your name here