ದ. 31- ಪುಣ್ಚಪ್ಪಾಡಿ ಶಾಲಾ 95ನೇ ವಾರ್ಷಿಕ ಹಬ್ಬ “ಪಂಚನವತಿ ಸಂಭ್ರಮ

0

ಪುತ್ತೂರು : ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 95 ನೇ ವರ್ಷದ ವಾರ್ಷಿಕ ಹಬ್ಬ ಪಂಚನವತಿ ಸಂಭ್ರಮ ಡಿಸೆಂಬರ್ 31ರಂದು ನಡೆಯಲಿದೆ.

ಸಂಜೆ 4 ಕ್ಕೆ ಊರಿನ ಹಿರಿಯರಾದ ಪಿಡಿ ಕೃಷ್ಣಕುಮಾರ್ ರೈರವರ ಅಧ್ಯಕ್ಷತೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ ಗಾಯತ್ರಿ ಓಂತಿಮನೆರವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಬಳಿಕ ಪುಣ್ಚಪ್ಪಾಡಿ ಅಂಗನವಾಡಿ ಮಕ್ಕಳಿಂದ ನೃತ್ಯ ವೈಭವ ನಡೆಯಲಿದೆ.

ಸಂಜೆ 5 ರಿಂದ ಗಂಟೆಗೆ ನಡೆಯುವ ಪ್ರತಿಭಾ ಪುರಸ್ಕಾರ ಕಾರ್‍ಯಕ್ರಮವನ್ನು ಸಚಿವ ಎಸ್ ಅಂಗಾರವರು ಉದ್ಘಾಟಿಸಲಿದ್ದಾರೆ.  ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ಶೆಟ್ಟಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆರವರು ಮಕ್ಕಳ ಹಸ್ತ ಪ್ರತಿ ಬಿಡುಗಡೆ ಮಾಡಲಿದ್ದಾರೆ.

ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯರವರು ಬಹುಮಾನ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ, ಸದಸ್ಯರಾದ ಯಶೋದ ನೂಜಾಜೆ, ಜಯಶ್ರೀ ಕುಚ್ಚೆಜಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸಮನ್ವಯಾಧಿಕಾರಿ ನವೀನ್ ವೇಗಸ್, ಸಿ.ಆರ್.ಪಿ. ಕುಶಾಲಪ್ಪ, ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ದಿನೇಶ್ ಮೆದು ಮುಂತಾದವರು ಭಾಗವಹಿಸಲಿದ್ದಾರೆ.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡ ವೈಭವ ಶಾಸ್ತ್ರೀಯ ನೃತ್ಯ, ಭಾವ ನೃತ್ಯ, ನಾಟಕ ರೂಪಕ, ಇಂಗ್ಲಿಷ್ ನಾಟಕ , ಹಾಸ್ಯ ನಾಟಕ ಯೋಗ ಹೀಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ ಎಂದು ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಗಾಯತ್ರಿ ಓಂತಿಮನೆ ಹಾಗೂ ಮುಖ್ಯಶಿಕ್ಷಕಿ ರಶ್ಮಿತಾ ನರಿಮೊಗರುರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here