ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

0

ಪುತ್ತೂರು:ಸುಮಾರು 300 ವರ್ಷ ಇತಿಹಾಸವಿರುವ ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿಯ ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ.1 ರಂದು ಜರುಗಿತು.


ಡಿ.31 ರಂದು ಸಂಜೆ ಕ್ಷೇತ್ರದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಬಳಿಕ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ದಿಕ್ಪಾಲಬಲಿ, ಬಿಂಬಾಧಿವಾಸ, ರಾತ್ರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಜ.1 ರಂದು ಬೆಳಿಗ್ಗೆ ಗಣಹೋಮ, ಕಲಶಪೂಜೆ, ವಿಷ್ಣುಮೂರ್ತಿ ದೈವ, ಮುಳ್ಳುಗುಳಿಗ ದೈವದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ, ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ , ಅನಿಲ್ ಕುಮಾರ್ ಕಣ್ಣಾರ್ನೂಜಿ. ಗೌರವ ಸಲಹೆಗಾರರಾದ ಮುರಳೀಧರ ಭಟ್ ಬಂಗಾರಡ್ಕ, ಪ್ರಸನ್ನ ಭಟ್ ಪಂಚವಟಿ, ಉದ್ಯಮಿ ಜಯಂತ ನಡುಬೈಲು, ರಘುನಾಥ ಶೆಟ್ಟಿ ಪೊನೋನಿ, ವಸಂತ ಶೆಟ್ಟಿ ಶಿಬರ, ಶೀನಪ್ಪ ಪೂಜಾರಿ ಮುಲಾರು, ರವೀಂದ್ರ ರೈ ಬಳ್ಳಮಜಲುರವರನ್ನು, ಸದಸ್ಯರಾದ ಬಾಲಕೃಷ್ಣ ರೈ ಪಂಜಳ, ಹರೀಶ ಉದಯಗಿರಿ, ರಾಮ ದಂಡ್ಯಾನಕುಕ್ಕು, ಸೀತಾರಾಮ ಗೌಡ ಅಂಬಟ, ಉಮೇಶ್ ಗೌಡ ಗುತ್ತಿನಪಾಲು, ದೈವಸ್ಥಾನದ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಕೋಶಾಧಿಕಾರಿ ಹುಕ್ರ ಮಾಸ್ಟರ್, ಸದಸ್ಯರಾದ ಈಶ್ವರ ನಾಯ್ಕ ಅಜಲಾಡಿ ಪಾದೆ, ಸೀತಾರಾಮ ಶೆಟ್ಟಿ ಪೊನೋನಿ, ಸೇಸಪ್ಪ ಶೆಟ್ಟಿ ಪೊನೋನಿ, ಬಾಲಕೃಷ್ಣ ಶೆಟ್ಟಿ ಪಂಜಳ, ರಘುನಾಥ ಶೆಟ್ಟಿ ಪೊನೋನಿ ಸೇರಿದಂತೆ ಸಾವಿರಾರು ಮಂದಿ ಊರ, ಪರವೂರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸಂಜೆ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ
ಕ್ಷೇತ್ರದಲ್ಲಿ ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಜಿಲ್ಲೆಯ ಪ್ರತಿಷ್ಠಿತ ಕಲಾವಿದರಿಂದ ಸಾಂಸ್ಕೃತಿಕ ವೈಭವ ಜರುಗಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here