








ಪುತ್ತೂರು: ತುಕಾರಾಮ ಬಾಯಾರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ ಮೊದಲ ಕಿರುಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯ ನಿರ್ದೇಶಕ ಯಶವಂತ ಪಾಂಡು ಹಾಗೂ ಕಲರ್ಸ್ ಕನ್ನಡ ವಾಹಿನಿಯ ಕ್ರೈಂ ಸ್ಟೋರಿ ಶಾಂತಂ ಪಾಪಂನ ನಿರ್ದೇಶಕ ವಿಜಯಕೃಷ್ಣ ಉಪಸ್ಥಿತರಿದ್ದರು.














