ರಾಷ್ಟ್ರ ಸೇವಿಕ ಸಮಿತಿಯಿಂದ ಮಕರ ಸಂಕ್ರಾಂತಿ ಉತ್ಸವ, ಪಥಸಂಚಲನ

0

ಸ್ವಾರ್ಥವಿಲ್ಲದಾಗ ಭಾರತ ಜಗಜನನಿಯಾಗುವುದರಲ್ಲಿ ಸಂಶಯವಿಲ್ಲ-ಮೀನಾಕ್ಷಿ

ಪುತ್ತೂರು:ಸ್ವಾರ್ಥವಿಟ್ಟುಕೊಳ್ಳದೆ ಸಮಾಜಕ್ಕೆ ಬದುಕು ಸಂಕಲ್ಪ ಮಾಡಿದಾಗ ಭಾರತ ಜಗಜನನಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಕರ್ನಾಟಕ ಹೊಯ್ಸಳ ಪ್ರಾಂತ ಸಂಪರ್ಕ ಪ್ರಮುಖ್ ಮೀನಾಕ್ಷಿ ಅವರು ಹೇಳಿದರು.


ರಾಷ್ಟ್ರ ಸೇವಿಕಾ ಸಮಿತಿಯಿಂದ ಮಕರ ಸಂಕ್ರಾಂತಿ ಅಂಗವಾಗಿ ಜ.14 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಂಚಾಕ್ಷರಿ ಮಂಟಪದಲ್ಲಿ ನಡೆದ ಮಕರ ಸಂಕ್ರಾತಿ ಉತ್ಸವದಲ್ಲಿ ಅವರು ಬೌದ್ಧಿಕ್ ನೀಡಿದರು.ನಾವೆಲ್ಲ ಸ್ವಾರ್ಥವಿಟ್ಟುಕೊಳ್ಳದೆ ಸಮಾಜಕ್ಕೆ ಬದುಕು ಸಂಕಲ್ಪ ಯೋಚನೆ ಮಾಡೋಣ.ಮತ್ತೆ ತಾಯಿ ಭಾರತ ಮಾತೆಯನ್ನು ಉತ್ತುಂಗ ಶಿಖರಕ್ಕೆ ಏರಿಸುವ ಎಂದರು.

ರೇಡಿಯೋ ಪಾಂಚಜನ್ಯದ ಅಧ್ಯಕ್ಷ ಕೃಷ್ಣವೇಣಿ ಮುಳಿಯ ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್ಯಕ್ರಮದ ಬಳಿಕ ಪಥ ಸಂಚಲನ ನಡೆಯಿತು.ಪುತ್ತೂರು ಜಿಲ್ಲಾ ಕಾರ್ಯವಾಹಿಕ ಸುಷ್ಮಾ, ಜಿಲ್ಲಾ ಸಂಚಾಲಿಕ ಸವಿತಾ ಭಟ್, ಮೋಹಿನಿ ದಿವಾಕರ್, ಹರಿಣಿ ಪುತ್ತೂರಾಯ, ವಿದ್ಯಾ ಆರ್ ಗೌರಿ. ಪ್ರೇಮಲತಾ ರಾವ್, ಗೌರಿ ಬನ್ನೂರು ಸಹಿತ ಸುಮಾರು 270ಕ್ಕೂ ಅಧಿಕ ಮಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.ಪಥ ಸಂಚಲನವು ದೇವಳದಿಂದ ಹೊರಟು ಏಳ್ಮುಡಿಗೆ ತೆರೆಳಿ ಅಲ್ಲಿಂದ ಕೋರ್ಟು ರಸ್ತೆಯಾಗಿ ದೇವಸ್ಥಾನಕ್ಕೆ ಆಗಮಿಸಿ ಸಮಾಪನಗೊಂಡಿತ್ತು.

LEAVE A REPLY

Please enter your comment!
Please enter your name here