ಕಡಬ: ಕಳೆದ ಏಳು ವರುಷಗಳಿಂದ ಪುತ್ತೂರು ಕಲ್ಲಾರೆ ಮುಖ್ಯರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮಿ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘದ ಕಡಬ ಶಾಖೆಯು ಜ. 15 ರಂದು ಕಡಬದ ಭಾಗೀರಥಿ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಕಡಬ ಭಾಗೀರಥಿ ಟವರ್ಸ್ನ ಮಾಲಕ ದಯಾನಂದ ನಾಕ್ ಅವರು ಉದ್ಘಾಟಿಸಿ, ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘವು ಕಡಬದಲ್ಲಿ ಶಾಖೆಯನ್ನು ತೆರೆದಿದೆ, ಸಂಘವು ಇಲ್ಲಿ ಉತ್ತಮ ರೀತಿಯ ಸೇವೆಯನ್ನು ನೀಡಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಾಮೋದರ ಕುಲಾಲ್, ನಿರ್ದೇಶಕರುಗಳಾದ ಶಂಕರನಾರಾಯಣ ಭಟ್, ಭಾಸ್ಕರ, ಶೇಷಪ್ಪ ನಾಯ್ಕ, ಹುಸೈನ್, ವಸಂತ ಮೂಲ್ಯ, ಶಶಿಕಲಾ, ತುಂಗಮ್ಮ, ಹೇಮಾವತಿ, ವಿದ್ಯಾ ಲೆಕ್ಕ ಪರಿಶೋಧಕ ಸುಧೀರ್ ಕುಮಾರ್ ಎನ್.ಕೆ., ವಿಶ್ವನಾಥ ಭಟ್ ಆಲಂಕಾರು, ಶೇಖ್ ಮಹಮ್ಮದ್, ಝಕಾರಿಯ ಮರ್ದಾಳ, ಈಶ್ವರ ಗೌಡ ಏನಡ್ಕ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ನ ಕಂಪೆನಿಯ ಡಿವಿಷನಲ್ ಮ್ಯಾನೆಜರ್ ಈಶ್ವರ ನಾಯ್ಕ, ಹಾಜಿ ಅಬ್ದುಲ್ ರಜಾಕ್ ಪುತ್ತೂರು, ಅಬ್ದುಲ್ ಹಕೀಂ ವಿಟ್ಲ, ಕಡಬ ಬಿಲ್ಲವ ಸಂಘದ ಅಧ್ಯಕ್ಷ ಸುಂದರ ಪೂಜಾರಿ, ನೆಹರುನಗರ ಅಜಾರ ಕನ್ಸ್ಟ್ರಕ್ಷನ್ನ ರವೀಶ್, ದರ್ಬೆ ಕಾರ್ಟೆಕ್ ಮಾಲಕ ನಳಿನಾಕ್ಷ, ಉಡುಪಿಯ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ, ಧರ್ಮಪಾಲ ರೈ ಪಿಜಕ್ಕಳ, ಶಾಖಾ ಪ್ರಬಂಧಕ ಶರತ್ ಕುಮಾರ್ ಎ. ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಗ್ರಾಹಕರ ಸಹಕಾರ ಅತ್ಯಗತ್ಯ-ದಾಮೋದರ ಕುಲಾಲ್: ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಾಮೋದರ ಕುಲಾಲ್ ಅವರು, ಸಂಸ್ಥೆಯು ಸುಮಾರು ೭೫೦ ಸದಸ್ಯರಿಂದ ಪ್ರಾರಂಭವಾಗಿ ಇದೀಗ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸಂಘದಲ್ಲಿ ವಿವಿಧ ರೀತಿಯ ಸಾಲ ವಿತರಣೆ, ಠೇವಣಿ ಸಂಗ್ರಹಣೆ, ವಿಮಾ ಸೌಲಭ್ಯ ಮೊದಲಾದ ಸೌಲಭ್ಯಗಳಿವೆ. ಸಂಸ್ಥೆಯ ಅಭಿವೃದ್ದಿಗೆ ಸಂಘದ ನುರಿತ ನಿರ್ದೇಶಕರ ಕೊಡುಗೆ ಅಪಾರ, ಸಂಘವು ಇನ್ನಷ್ಟು ಕಡೆಗಳಲ್ಲಿ ಶಾಖೆಯನ್ನು ತೆರೆಯಲಿದೆ.ಈಗಾಗಲೇ ೫೦ ಕೋಟಿಯ ವ್ಯವಹಾರವನ್ನು ನಡೆಸಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಸಲುವಾಗಿ ಸಂಘವು ಶ್ರಮಿಸುತ್ತಿದ್ದು ಕಡಬ ಭಾಗದ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು, ಸಂಘದ ಅಭಿವೃದ್ದಿಗೆ ಗ್ರಾಹಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು.