ಹಾಡಹಗಲೇ ಬೈಕ್‌ ಅಬೇಸ್‌ ಮಾಡಿದ ಕಳ್ಳ

0

ಪುತ್ತೂರು: ದರ್ಬೆಯಲ್ಲಿ ನಿಲ್ಲಿಸಿದ್ದ ಬೈಕ್‌ವೊಂದನ್ನು ಹಾಡಹಗಲೇ ಸಲೀಸಾಗಿ ಕಳ್ಳನೊಬ್ಬ ಅಬೇಸ್‌ ಮಾಡಿದ್ದಾನೆ. ಬೈಕ್‌ ಮಾಲೀಕ ಬೈಕ್‌ ಕಾಣದೆ ಹುಡುಕಾಡಿ ಬಳಿಕ ಪಕ್ಕದ ಸಿಸಿ ಟಿವಿಯಲ್ಲಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಬೈಕ್‌ ಕೊಂಡೊಯ್ದಿರುವುದು ಕಂಡುಬಂದಿದೆ. ಈ ಘಟನೆ ಇಂದು ಜ.18ರಂದು ದರ್ಬೆಯಲ್ಲಿ ನಡೆದಿದೆ. ಹಾಡುಹಗಲು ಜನನಿಬಿಡ ಪ್ರದೇಶದಿಂದ ಬೈಕ್‌ ಕಳ್ಳತನ ಆಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ಕಳ್ಳರ ಕೈಚಳಕ ಜಾಸ್ತಿಯಾಗುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here