ಪರೀಕ್ಷಾ ತಯಾರಿಯ ಬಗ್ಗೆ ಮಾಹಿತಿ ನೀಡಲು ಇಂದಿನಿಂದ `ಸುದ್ದಿ’ಯಲ್ಲಿ `ಮನೋಯಾನ’

0

ಪುತ್ತೂರು: ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯ ಮತ್ತೆ ಸಮೀಪಿಸುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳು, ಅವರ ಪೋಷಕರು ಜೊತೆಗೆ ಕೆಲವೊಮ್ಮೆ ಶಿಕ್ಷಕರಿಗೂ ಆತಂಕಗಳು ಎದುರಾಗುವ ಸಮಯ ಇದು. ಹೀಗಾಗಿ ಸುಲಲಿತವಾಗಿ ಪರೀಕ್ಷೆಯನ್ನು ಎದುರಿಸಬೇಕು ಎಂದರೆ ಪರೀಕ್ಷೆಯ ಪೂರ್ವಸಿದ್ಧತೆ, ತಯಾರಿ ಚೆನ್ನಾಗಿರಬೇಕು. ಹಾಗಿದ್ದಾಗ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಹೇಗಿರಬೇಕು, ಈ ಅವಧಿಯಲ್ಲಿ ಪೋಷಕರು ಏನು ಮಾಡಬೇಕು, ಯಾವ ರೀತಿ ಇರಬೇಕು ಎನ್ನುವುದು ಮುಖ್ಯವಾಗುತ್ತದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಮಗ್ರ ಮಾಹಿತಿ ನೀಡುವ ಜೊತೆಗೆ ಅವರ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ `ಸುದ್ದಿ’ ಚಾನೆಲ್ ಮತ್ತು ಅಂಬಿಕಾ ವಿದ್ಯಾಸಂಸ್ಥೆಗಳ ಜಂಟಿ ಸಹಯೋಗದಲ್ಲಿ `ಮನೋಯಾನ’ ಎನ್ನುವ ವಿನೂತನ ಕಾರ್ಯಕ್ರಮವು `ಸುದ್ದಿ’ಯಲ್ಲಿ ಮೂಡಿಬರಲಿದೆ. ಮಾನಸಿಕ ತಜ್ಞವೈದ್ಯರ ಜೊತೆಗಿನ ಸಮಾಲೋಚನಾ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ನೇರ ಫೋನ್ ಇನ್ ಮೂಲಕ ತಮ್ಮ ಪ್ರಶ್ನೆಗಳು, ಅನುಮಾನಗಳಿಗೆ ಉತ್ತರ ಕಂಡುಕೊಳ್ಳುವ ಅವಕಾಶ ಲಭಿಸಲಿದೆ.

ಕರೆ ಮಾಡಿ ಮಾತನಾಡಿ

`ಮನೋಯಾನ’ ಸರಣಿ ಕಾರ್ಯಕ್ರಮದ ಪ್ರಥಮ ಸಂಚಿಕೆ ಜ.19ರಂದು ಸಂಜೆ 6 ಗಂಟೆಗೆ ಸುದ್ದಿ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ಮೂಡಿಬರಲಿದ್ದು, `ಪರೀಕ್ಷಾ ತಯಾರಿ’ ವಿಷಯದ ಕುರಿತಾಗಿ ಪ್ರಸಾರಗೊಳ್ಳುವ ಈ ಸಂಚಿಕೆಯಲ್ಲಿ ಸುಳ್ಯದ ಕೌನ್ಸಿಲಿಂಗ್ ಸೈಕಾಲಜಿಸ್ಟ್ ಮೀನಾ ಕುಮಾರಿ ಮತ್ತು ಅಂಬಿಕಾ ಮಹಾವಿದ್ಯಾಲಯದ ಸೈಕಾಲಜಿ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಶ್ನೆಗಳನ್ನು ಕೇಳಲು +91 8088902347, +91 7204977949  ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here