ವಿಟ್ಲ ಜಾತ್ರಾ ಸ್ಟಾಲ್‌ಗಳಲ್ಲಿ ಸ್ವಚ್ಚತೆಗೆ ಆದ್ಯತೆ – ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ – ಮುಖ್ಯಾಧಿಕಾರಿ ಗೋಪಾಲ ನಾಯ್ಕ್

0

ವಿಟ್ಲ: ಇಲ್ಲಿನ ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಪ್ರಯುಕ್ತ ಎಲ್ಲೆಡೆಯೂ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಸ್ಟಾಲ್‌ನವರಿಗೆ ಸೂಚಿಸಲಾಗಿದೆ. ಪ್ರತೀ ಸ್ಟಾಲ್‌ಗಳಲ್ಲಿ ಹಸಿ ಕಸ ಹಾಗೂ ಒಣ ಕಸ ಸಂಗ್ರಹಕ್ಕೆ ಪ್ರತ್ಯೇಕ ಬುಟ್ಟಿಯನ್ನು ಇಡುವಂತೆ ಸೂಚಿಸಲಾಗಿದೆ. ನಮ್ಮ ಸ್ವಚ್ಚತಾ ಸಿಬ್ಬಂದಿಗಳು ಪ್ರತೀ ದಿನ ತೆರಳಿ ಸ್ಟಾಲ್‌ನವರು ಸಂಗ್ರಹಿಸಿದ ಕಸವನ್ನು ತೆಗೆದುಕೊಂಡು ಬರುತ್ತಿದ್ದಾರೆ. ಉಳಿದಂತೆ ದೇವಾಲಯದ ಹೊರಭಾಗ, ಜಾತ್ರಾ ಗದ್ದೆಯ ಇಕ್ಕೆಲಗಳ ಸಹಿತ ವಿವಿಧೆಡೆ ಧೂಳಿನಿಂದ ರಕ್ಷಣೆಗಾಗಿ ದಿನದಲ್ಲಿ ಎರಡು ಬಾರಿ ನೀರು ಹಾಕುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಜಾತ್ರೆಯಲ್ಲಿರುವ ಸ್ಟಾಲ್ ಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಅನ್ನು ಬಳಕೆ ಮಾಡದಂತೆ ಇದೀಗಾಗಲೇ ಮಾಹಿತಿ ನೀಡಲಾಗಿದೆ. ಒಂದು ವೇಳೆ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here