ಮಹಿಳಾ ಮತ್ತು ಪುರುಷರ ಗುಡ್ಡಗಾಡು ಓಟ-ವಿವೇಕಾನಂದ ಕಾನೂನು ಕಾಲೇಜು ಪ್ರಥಮ

0

ಪುತ್ತೂರು: ಸರಕಾರಿ ಕಾನೂನು ಮಹಾವಿದ್ಯಾಲಯದಲ್ಲಿ ಜ.21ರಂದು ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳಾ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ತಂಡವು ಭಾಗವಹಿಸಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜೊತೆಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆರು ವಿದ್ಯಾರ್ಥಿಗಳು ಮುಂದೆ ನಡೆಯಲಿರುವ All India South Zone inter University Cross Country Competitionಗೆ ಅರ್ಹತೆ ಪಡೆದಿದ್ದು, ಇವರು ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯದ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪುರುಷರ ತಂಡದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದಿಸ್ತಾಯಿ ಪಾವ, ಅಭಿಜಿತ್ ಪಿ(5 ಬಿಎ ಎಲ್.ಎಲ್.ಬಿ), ರಂಜಿತ್ ಎನ್ ವಿ, ಮಂಜುನಾಥ್ ಎಸ್ ಜಿ(4 ಬಿಎ ಎಲ್.ಎಲ್.ಬಿ), ಚಿಂತನ್(3 ಬಿಎ ಎಲ್.ಎಲ್.ಬಿ), ವಿಜಯ್ ಶ್ರೀಹರಿ, ಕೌಶಿಕ್ ಜೆ ಮತ್ತು ಮನೀಶ್ ಟಿ(2 ಬಿಎ ಎಲ್.ಎಲ್.ಬಿ) ಹಾಗೂ ಅಶ್ವಿತ್ ಕುಮಾರ್(1 ಬಿಎ ಎಲ್.ಎಲ್.ಬಿ) ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ರೀತಿ ಮಹಿಳಾ ತಂಡದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸ್ವರ್ಣಗೌರಿ(4 ಬಿಎ ಎಲ್.ಎಲ್.ಬಿ), ಪ್ರಜ್ಞಾ(3 ಬಿಎ ಎಲ್.ಎಲ್.ಬಿ), ಯಶ್ವಿತಾ, ವೃಂದಾ, ಮಾರ್ಟಿನಾ ಸಾಂದ್ರ ಹಾಗೂ ಅಮೃತಾಂಬ(1 ಬಿಎ ಎಲ್.ಎಲ್.ಬಿ) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದ್ವಿತೀಯ ವರ್ಷದ ಬಿ.ಎ ಎಲ್‌.ಎಲ್.ಬಿ ವಿದ್ಯಾರ್ಥಿ ಶ್ರೇಯಸ್ ರಾವ್ ಸಹಕರಿಸಿದ್ದಾರೆ. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಕುಮಾರ್ ಎಂ.ಕೆ ಮಾರ್ಗದರ್ಶನ ನೀಡಿದ್ದರು.

ಸೌತ್ ಜೋನ್ ಹಂತಕ್ಕೆ 6 ವಿದ್ಯಾರ್ಥಿಗಳು ಆಯ್ಕೆ

ಅದಲ್ಲದೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪುರುಷರ ತಂಡದ 5ನೇ ವರ್ಷದ ಬಿ.ಎ ಎಲ್‌.ಎಲ್.ಬಿ ವಿದ್ಯಾರ್ಥಿಗಳಾದ ದಿಸ್ತಾಯಿ ಪಾವ, ಅಭಿಜಿತ್ ಪಿ, 3ನೇ ವರ್ಷದ ಬಿ.ಎ ಎಲ್‌.ಎಲ್.ಬಿ ವಿದ್ಯಾರ್ಥಿಗಳಾದ ವಿಜಯ್ ಶ್ರೀಹರಿ ಹಾಗೂ ಮನೀಶ್ ಟಿ ಮತ್ತು ಮಹಿಳಾ ತಂಡದ ತೃತೀಯ ವರ್ಷದ ಬಿ.ಎ ಎಲ್‌.ಎಲ್.ಬಿ ವಿದ್ಯಾರ್ಥಿ ಪ್ರಜ್ಞಾ ಹಾಗೂ ಪ್ರಥಮ ವರ್ಷದ ಬಿ.ಎ ಎಲ್‌.ಎಲ್.ಬಿ ವಿದ್ಯಾರ್ಥಿನಿ ಅಮೃತಾಂಬ ಸೇರಿದಂತೆ ಒಟ್ಟು ಆರು ವಿದ್ಯಾರ್ಥಿಗಳು ಮುಂದೆ ನಡೆಯಲಿರುವ All India South Zone inter University Cross Country Competitionಗೆ ಅರ್ಹತೆ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here