ವಿಟ್ಲ : ಕಾಣಿಕೆ ಡಬ್ಬಿಗೆ ಕನ್ನ ಹಾಕಿದ ಕಳ್ಳರು

0

ವಿಟ್ಲ : ದೈವಸ್ಥಾನದ ಬೀಗ ಮುರಿದು ಕಾಣಿಕೆ ಡಬ್ಬಿಯನ್ನು ಕಳವುಗೈದ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲ ಮೇಗಿನ ಪೇಟೆಯ ಶ್ರೀ ಮಹಮ್ಮಾಯಿ ಅಮ್ಮನ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನೆ ಕಳವುಗೈದಿದ್ದಾರೆ. ಪ್ರತಿನಿತ್ಯ ದೈವಸ್ಥಾನಕ್ಕೆ ದೀಪ ಬೆಳಗಲು ಹೊನ್ನಪ್ಪ ಎಂಬವರು ಬಂದಿದ್ದು ಈ ವೇಳೆ ಕಾಣೆಕೆ ಡಬ್ಬಿ ಕಳುವಾಗಿರುವುದು ಗಮನಕ್ಕೆ ಬಂದಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 26ರಿಂದ 27ರ ವರೆಗೆ ಇದೇ ದೈವಸ್ಥಾನದಲ್ಲಿ ವಾರ್ಷಿಕ ಪೂಜೆ ನಡೆದಿತ್ತು.

LEAVE A REPLY

Please enter your comment!
Please enter your name here