ಇಚ್ಲಂಪಾಡಿ: ಹೋಟೆಲ್ ಗುರುಕೃಪಾ ಶುಭಾರಂಭ

0

ನೆಲ್ಯಾಡಿ: ಹೋಟೆಲ್ ಗುರುಕೃಪಾ ನೆಲ್ಯಾಡಿ ಹಾಗೂ ಗುರುಕೃಪಾ ಸ್ಟೋರ್‍ಸ್ ನೆಲ್ಯಾಡಿ ಇದರ ಸಹಸಂಸ್ಥೆ ಶುದ್ಧ ಸಸ್ಯಾಹಾರಿ ಹೋಟೆಲ್ ‘ಗುರುಕೃಪಾ’ ಜ.27 ರಂದು ಬೆಳಿಗ್ಗೆ ಇಚ್ಲಂಪಾಡಿ ನೇರ್ಲ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.


ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಾಕರ ಹೆಗ್ಗಡೆ ಅವರು ದೀಪ ಬೆಳಗಿಸಿ, ಹೋಟೆಲ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು. ನೆಲ್ಯಾಡಿಯ ಉದ್ಯಮಿ ಸತೀಶ್ ಕೆ.ಎಸ್.ದುರ್ಗಾಶ್ರೀ, ನೆಲ್ಯಾಡಿ ಜೈನ್ ಆಯಿಲ್‌ಮಿಲ್‌ನ ಸಂತೋಷ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ನೇರ್ಲ ಸಂಕೀರ್ಣದ ಮಾಲಕ ವಿಶ್ವನಾಥ ಗೌಡ, ಹರೀಶ್ ಗೌಡ, ಯೂನಿಯನ್ ಬ್ಯಾಂಕ್‌ನ ವಾಮನ, ಪ್ರಮುಖರಾದ ರಾಧಾಕೃಷ್ಣ ಗೌಡ ಕೆರ್ನಡ್ಕ, ಸುಂದರ ಆಳ್ವ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.

ಹೋಟೆಲ್ ಮಾಲಕ ಕುಶಾಲಪ್ಪ ಕೋಟ್ಯಾನ್‌ರವರು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಶುದ್ಧ ಸಸ್ಯಾಹಾರಿ ಊಟ ಹಾಗೂ ಉಪಹಾರದ ವ್ಯವಸ್ಥೆ ಇದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿ ಸಹಕಾರ ಕೋರಿದರು. ಉಷಾಕುಮಾರಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here