ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ 9 ನಿರ್ದೇಶಕರ ಆಯ್ಕೆ

0
  • 4 ಅವಿರೋಧ- 5 ಸ್ಥಾನಗಳಿಗೆ ಚುನಾವಣೆ:3 ಸ್ಥಾನ ಖಾಲಿ

ಪುತ್ತೂರು: ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ 12 ನಿರ್ದೇಶಕರ ಪೈಕಿ 9ಮಂದಿ ಆಯ್ಕೆಯಾಗಿದ್ದು ಮೂರು ಸ್ಥಾನಗಳಿಗೆ ಉಮೇದುವಾರಿಕೆ ಅರ್ಜಿ ಸ್ವೀಕೃತವಾಗದೇ ಇರುವುದರಿಂದ ನಿರ್ದೇಶಕರ ಆಯ್ಕೆಯಾಗಿಲ್ಲ.ಆಯ್ಕೆಯಾದ 9ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 13 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.

 

4 ಸ್ಥಾನಗಳಿಗೆ ಅವಿರೋಧ ಆಯ್ಕೆ: ಸಂಘದ 12 ಸ್ಥಾನಗಳ ಪೈಕಿ ಮೂರ್ತೆದಾರರ ಮೀಸಲು ಪ್ರವರ್ಗ ಕ್ಷೇತ್ರದಿಂದ ಗೋಳಿತ್ತೊಟ್ಟು ಪಟೇರಿ ಮನೆ ಕೆ.ಸಿ.ನಾರಾಯಣರವರ ಮಗ ಶಶಿಧರ, ಹಿರೇಬಂಡಾಡಿ ಆರಿಜಾಲು ಶಿವಪ್ಪ ಪೂಜಾರಿಯವರ ಮಗ ಮಾಧವ ಪೂಜಾರಿ, ಗೋಳಿತ್ತೊಟ್ಟು ಗ್ರಾಮದ ಕೊಚ್ಚಿಲ ಮನೆ ಕಾಂತಪ್ಪ ಪೂಜಾರಿಯವರ ಮಗ ಚೆನ್ನಪ್ಪ ಪೂಜಾರಿ ಮತ್ತು ಕೊಣಾಜೆ ಗ್ರಾಮದ ಹೂವಿನಮಜಲು ಲಿಂಗಪ್ಪ ಪೂಜಾರಿಯವರ ಮಗ ಶೀನಪ್ಪ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

5 ಸ್ಥಾನಗಳಿಗೆ ಚುನಾವಣೆ: ಉಳಿದಂತೆ 5ಸ್ಥಾನಗಳಿಗೆ ಚುನಾವಣೆ ನಡೆದಿತ್ತು.ಸಾಮಾನ್ಯ ಮೀಸಲು ಕ್ಷೇತ್ರದ 2 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪ್ಪಿನಂಗಡಿ ರಾಮನಗರ ಗಿರಿಜಾರಾಮ ನಿವಾಸ ಬಾಬು ಪೂಜಾರಿಯ ಮಗ ರಾಜಾರಾಮ್ ಕೆ.ಬಿ.(೧೮೫ ಮತಗಳು) ಮತ್ತು ಗೋಳಿತ್ತೊಟ್ಟು ಗ್ರಾಮದ ಪಾಲೇರಿ ಮನೆ ನೇಮಣ್ಣ ಪೂಜಾರಿಯವರ ಮಗ ಅಜಿತ್ ಕುಮಾರ್(191 ಮತಗಳು) ಚುನಾಯಿತರಾಗಿದ್ದಾರೆ.ಈ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಕೊಣಾಜೆ ಗ್ರಾಮದ ಕೊಡಪೊಟ್ಯ ಶೀನಪ್ಪ ಪೂಜಾರಿಯವರ ಮಗ ಮಾಧವ ಪೂಜಾರಿ(೮೮ ಮತಗಳು) ಮತ್ತು ಬಜತ್ತೂರು ಗ್ರಾಮದ ಶಿಬಾರ್ಲ ಹೊನ್ನಪ್ಪ ಪೂಜಾರಿಯವರ ಮಗ ಶೇಖರ ಪೂಜಾರಿ(91 ಮತಗಳು)ಪರಾಜಿತರಾಗಿದ್ದಾರೆ.24 ಮತ ಅಸಿಂಧುವಾಗಿತ್ತು.

ಮಹಿಳಾ ಮೀಸಲು ಸ್ಥಾನದಿಂದ ಹಿರೇಬಂಡಾಡಿ ದಾಸರಮೂಲೆ ದಿ.ಸದಾನಂದ ದಾಸರಮೂಲೆ ಅವರ ಪತ್ನಿ ಚಂದ್ರಕಲಾ(೨೦೪ ಮತಗಳು) ಮತ್ತು ಬಜತ್ತೂರು ಗ್ರಾಮದ ಕೊಡಿಪಾನ ಸೋಮಸುಂದರ ಅವರ ಪತ್ನಿ ಸುನೀತಾ ಸೋಮಸುಂದರ(196 ಮತಗಳು )ಅವರು ಚುನಾಯಿತರಾಗಿದ್ದಾರೆ.ಗೋಳಿತ್ತೊಟ್ಟು ಗ್ರಾಮದ ಅನಾಲುಪಳಿಕೆ ದಾಮೋದರ ಪೂಜಾರಿಯವರ ಪತ್ನಿ ರತಿ ಡಿ.(105 ಮತಗಳು)ಪರಾಜಿತರಾಗಿದ್ದಾರೆ.೧೨ ಮತ ಅಸಿಂಧುವಾಗಿದೆ.

೧ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಕೌಕ್ರಾಡಿ ಗ್ರಾಮದ ಬಾಣಜಾಲು ಲಿಂಗಪ್ಪ ಪೂಜಾರಿಯವರ ಮಗ ಚಂದ್ರಶೇಖರ ಬಿ.(೧೯೫ ಮತಗಳು)ಚುನಾಯಿತರಾಗಿದ್ದಾರೆ.ನೆಲ್ಯಾಡಿ ಬಾಣಜಾಲು ಕೃಷ್ಣಪ್ಪ ಪೂಜಾರಿಯವರ ಮಗ ಜನಾರ್ದನ ಬಿ.(೮೯ ಮತಗಳು)ಪರಾಜಿತರಾಗಿದ್ದಾರೆ.೨೬ ಮತ ಅಸಿಂಧುವಾಗಿದೆ.

೩ ಸ್ಥಾನ ಖಾಲಿ: ಹಿಂದುಳಿದ ವರ್ಗ ಬಿ.,ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಪ್ರವರ್ಗದಿಂದ ಯಾವುದೇ ಉಮೇದುವಾರಿಕೆ ಅರ್ಜಿ ಸಲ್ಲಿಕೆಯಾಗದೇ ಇರುವುದರಿಂದ ಈ ಮೂರೂ ಸ್ಥಾನಗಳು ಖಾಲಿಯಾಗಿವೆ.ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಽಕ್ಷಕ ಬಿ.ನಾಗೇಂದ್ರ ಅವರು ಚುನಾವಣಾಽಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು.

LEAVE A REPLY

Please enter your comment!
Please enter your name here