` ಭ್ರಷ್ಟಾಚಾರ ತಪ್ಪಿಸಲು ಕಂದಾಯ ದಾಖಲೆ ಮನೆ ಬಾಗಿಲಿಗೆ ‘ – ಐತ್ತೂರು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಹೇಳಿಕೆ

0
  • ಐತ್ತೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಆಗ್ರಹ
  • ಕೆಎ-ಡಿಸಿಯಿಂದ ಕುಡಿಯುವ ನೀರಿನ ಪೈಪ್‌ಲೈನಿಗೂ ಆಕ್ಷೇಪ
  • ಎನ್‌ಕೂಪ್ ಅಂಗನವಾಡಿ ಕೇಂದ್ರ ದುರಸ್ತಿಗೆ ಬೇಡಿಕೆ
  • ಲಂಚ-ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನಕ್ಕೆ ಬೆಂಬಲ

 

ಕಡಬ:ಸರಕಾರದ ಯೋಜನೆಗಳು ಭ್ರಷ್ಟಾಚಾರ ರಹಿತವಾಗಿ ಜನರಿಗೆ ಮುಟ್ಟಬೇಕು ಎನ್ನುವ ಉದ್ದೇಶದಿಂದ ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯವನ್ನು ಸರಕಾರದಿಂದ ಮಾಡಲಾಗುತ್ತಿದೆ.ಜನಪ್ರತಿನಿಧಿಗಳು ಟೀಕೆ ಮಾಡುವ ಬದಲು ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲ ಸಾರಿಗೆ ಸಚಿವರಾಗಿರುವ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಹೇಳಿದ್ದಾರೆ.

 

ಸುದ್ದಿ ಜನಾಂದೋಲನಕ್ಕೆ ಬೆಂಬಲ-ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿ ಸ್ವೀಕಾರ

ಮಾ.19ರಂದು ಸಂಜೆ ಐತ್ತೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ, ಕಡಬ ತಾಲೂಕು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಕ್ರಮ-ಸಕ್ರಮ ಯೋಜನೆ ಫಲಾನುಭವಿಗಳು, ವಿವಿಧ ಪಿಂಚಣಿ ಮಂಜೂರಾತಿ, ಮಾಜಿ ಸೈನಿಕರಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.ಕೇಂದ್ರ ಸರಕಾರ ದೇಶದ ಶೇ.೮೦ ಜನರಿಗೆ ಜನ್‌ಧನ್ ಯೋಜನೆಯಲ್ಲಿ ಬ್ಯಾಂಕ್ ಖಾತೆ ತೆರಯಲು ಅವಕಾಶ ಮಾಡಿಕೊಟ್ಟಿರುವುದರಿಂದ ಇಂದು ಕಿಸಾನ್ ಸಮ್ಮಾನ್‌ನಂತಹ ಅನೇಕ ಯೋಜನೆಗಳಲ್ಲಿ ಜನರ ಖಾತೆಗೆ ನೇರವಾಗಿ ಹಣ ಜಮಾವಣೆಯಾಗುತ್ತಿದೆ.ಯಾವುದೇ ಯೋಜನೆಗಳನ್ನು ಪಡೆಯಬೇಕಾದರೆ ಅವುಗಳಿಗೆ ಸೂಕ್ತ ದಾಖಲೆಗಳು ನಮ್ಮಲ್ಲಿ ಇರಬೇಕು, ಆದರೆ ಕೆಲವರು ದಾಖಲೆಗಳನ್ನು ಕ್ರೋಢೀಕರಿಸದೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ,ಗ್ರಾಮ ಮಟ್ಟದಲ್ಲಿ ಜನಪ್ರತಿನಿಧಿಗಳು ಸರಕಾರದ ಯೋಜನೆಗಳನ್ನು ಕಟ್ಟ ಕಡೆಯ ಜನರಿಗೆ ತಲುಪಿಸುವಲ್ಲಿ ಪೂರಕ ದಾಖಲೆಗಳನ್ನು ಕೊಡಿಸುವಲ್ಲಿ ಶ್ರಮಿಸಬೇಕು ಎಂದು ಸಚಿವ ಅಂಗಾರ ಕರೆ ನೀಡಿದರು.

ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ, ಉಪಾಧ್ಯಕ್ಷ ರೋಹಿತ್, ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ, ಗ್ರಾ.ಪಂ.ಅಭಿವೃದ್ದಿ ಅಽಕಾರಿ ಸುಜಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಡಬ ತಹಸೀಲ್ದಾರ್ ಅನಂತಶಂಕರ್ ಸ್ವಾಗತಿಸಿದರು.ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ -ಲಾನುಭವಿಗಳ ಪಟ್ಟಿ ವಾಚಿಸಿ, ವಂದಿಸಿದರು.ತಾಲೂಕು ಕಛೇರಿ ಸಿಬ್ಬಂದಿ ಉದಯ ಕುಮಾರ್ ಪಿ.ಆರ್.ಕಾರ್ಯಕ್ರಮ ನಿರ್ವಹಿಸಿದರು.

ಐತ್ತೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲು ಆಗ್ರಹ: ಪೂರ್ವಾಹ್ನ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಈರೇಶ್ ಗೌಡ, ಮನಮೋಹನ ಗೌಡ ಗೋಳ್ಯಾಡಿ, ವಿ.ಯಂ.ಕುರಿಯನ್, ಗಣೇಶ್ ಮೂಜೂರು ಮೊದಲಾದವರು ಮಾತನಾಡಿ, ಐತ್ತೂರು ಗ್ರಾಮವು ಕಡಬಕ್ಕೆ ಐದಾರು ಕಿ.ಮೀ. ದೂರದಲ್ಲಿದೆ,ಆದರೆ ಐತ್ತೂರು ಗ್ರಾಮವನ್ನು ಶಿರಾಡಿ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿಸಿರುವುದು ಇಲ್ಲಿನ ಜನರಿಗೆ ತುಂಬಾ ತೊಂದರೆಯಾಗಿದೆ.ಸುಮಾರು 40 ಕಿ.ಮೀ. ದೂರದ ಶಿರಾಡಿ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿರುವುದು ಇಲ್ಲಿನವರ ದುರ್ಗತಿ,ಯಾರೋ ಎ.ಸಿ.ರೂಮಲ್ಲಿ ಕುಳಿತು,ಜನರಿಗೆ ತೊಂದರೆಯಾಗುವ ರೀತಿಯಲ್ಲಿ ವಿಂಗಡಣೆ ಮಾಡಿದ್ದಾರೆ, ಈ ಗ್ರಾಮ ವಾಸ್ತವ್ಯದಲ್ಲಿಯಾದರೂ ಗ್ರಾಮದ ಇಂತಹ ಗಂಭೀರ ಸಮಸ್ಯೆಗಳು ಬಗೆಹರಿಯಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಉತ್ತರಿಸಿದ ತಾಲೂಕು ಆರೋಗ್ಯಾಽಕಾರಿ ಡಾ.ದೀಪಕ್ ರೈಯವರು, ಇಲ್ಲಿಯ ವ್ಯಾಪ್ತಿಯನ್ನು ಶಿರಾಡಿ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡಿಸಿದ್ದರೂ ಆರೋಗ್ಯ ಸಮಸ್ಯೆಗಳಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬಹುದು,ಗರ್ಭಿಣಿ ಹಾಗೂ ಕೆಲವೊಂದು ವಿಚಾರಗಳಿಗೆ ಸಂಬಂಽಸಿ ಮಾತ್ರ ಶಿರಾಡಿ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿರುವುದು ಎಂದರು.ನಾನು ಈಗಾಗಲೇ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾವನೆಗಳನ್ನು ಕಳುಹಿಸಿದ್ದೇನೆ, ಆದರೆ ಜನಸಂಖ್ಯೆ ಮೊದಲಾದ ಕೆಲವೊಂದು ನಿಯಮಗಳ ಕಾರಣದಿಂದ ಆಗಿಲ್ಲ, ಮುಂದೆ ಕೂಡ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.ಆದರೆ ಈ ಉತ್ತರಕ್ಕೆ ತೃಪ್ತರಾಗದ ಸದಸ್ಯರು ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲೇಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಕೆಲ ಸಮಯ ಚರ್ಚೆ ನಡೆಯಿತು.

ಕೆ.ಎ-.ಡಿ.ಸಿ.ಯವರಿಂದ ಕುಡಿಯುವ ನೀರು ಪೈಪ್ ಲೈನ್‌ಗೂ ಆಕ್ಷೇಪಣೆ: ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ. ಸದಸ್ಯರಾದ ಮನಮೋಹನ ಗೊಳ್ಯಾಡಿ, ವಿ.ಯಂ.ಕುರಿಯನ್ ಅವರು, ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳು ಗ್ರಾ.ಪಂ.ನ ರಸ್ತೆಗಳ ದುರಸ್ತಿ ಕಾರ್ಯಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ,ಅಲ್ಲದೆ ನಿಗಮದ ಕಾರ್ಮಿಕರ ಮನೆಗಳಿಗೆ ನೀರು ಸರಬರಾಜು ಮಾಡಲು ಕೂಡ ಪೈಪ್ ಲೈನ್ ಅಳವಡಿಸಲು ಬಿಡುತ್ತಿಲ್ಲ, ಏನು ಇವರ ಸರ್ವಾಧಿಕಾರಿ ಧೋರಣೆಯೇ ಎಂದು ತಹಸೀಲ್ದಾರ್ ಅವರಿಗೆ ದೂರು ನೀಡಿದರು.ಈ ಬಗ್ಗೆ ನಿಗಮದ ಅಽಕಾರಿ ಉತ್ತರಿಸಿ, ನಾವು ಅರಣ್ಯ ಇಲಾಖೆಯಿಂದ ಲೀಸಿಗೆ ಪಡೆದು ಅರಣ್ಯ ಅಭಿವೃದ್ದಿ ಮಾಡುತ್ತಿದ್ದೇವೆ,ನಿಗಮದ ಜಾಗದಲ್ಲಿ ಏನು ಕಾರ್ಯ ಚಟುವಟಿಕೆ ಮಾಡಬೇಕಿದ್ದರೂ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಲಯಾರಣ್ಯಧಿಕಾರಿ ರಾಘವೇಂದ್ರ ಅವರು ಉತ್ತರಿಸಿ, ನಿಗಮದ ಒಳಗಡೆ ಗ್ರಾಮಸ್ಥರಿಗೆ ನೀರು ಸರಬರಾಜು ಪೈಪ್ ಲೈನ್ ಅಳವಡಿಸಲು ಅವಕಾಶ ಇದೆ, ಆದರೆ ಇದಕ್ಕೆ ಇಲಾಖೆಯ ಅನುಮತಿ ಕಡ್ಡಾಯವಾಗಿರುತ್ತದೆ, ಇದಕ್ಕೆ ನೀವು ಆನ್ ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸದಸ್ಯರು ಅರ್ಜಿ ಎಷ್ಟು ಸಲ ನೀಡುವುದು, ಈ ಬಗ್ಗೆ ಪಂಚಾಯತ್‌ನಿಂದ ನಿರ್ಣಯ ಮಾಡಿ ತಾ.ಪಂ.ಗೆ ಕಳುಹಿಸಲಾಗಿದೆ,ಈಗಾಗಲೇ ಎರಡು ಸಲ ಪೈಪು ಲೈನ್ ಅಳವಡಿಸಲು ಯತ್ನಿಸಿದ್ದರೂ ನಿಗಮದ ಅಧಿಕಾರಿಗಳು ಅನುಮತಿ ನೀಡದಿರುವುದರಿಂದ ಪಂಚಾಯತ್‌ಗೆ ನಷ್ಟವಾಗಿದೆ, ಅಲ್ಲದೆ ರಸ್ತೆಗಳನ್ನು ದುರಸ್ತಿ ಮಾಡುವುದಿಲ್ಲ, ಪಂಚಾಯತ್ ವತಿಯಿಂದ ಮಾಡುವಾಗಲೂ ಅವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು.ಈ ಬಗ್ಗೆ ಕೂಡಲೇ ನಾನು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ, ಪೈಪು ಲೈನ್ ಅಳವಡಿಸಲು ಇಲಾಖಾ ಅನುಮತಿ ದೊರಕಿಸಿಕೊಡುತ್ತೇನೆ ಎಂದು ಅರಣ್ಯಾಧಿಕಾರಿ ರಾಘವೇಂದ್ರ ಭರವಸೆ ನೀಡಿದರು.

ಎನ್ ಕೂಪ್ ಅಂಗನವಾಡಿ ಕೇಂದ್ರ ದುರಸ್ತಿಗೆ ಆಗ್ರಹ: ಗ್ರಾ.ಪಂ. ಸದಸ್ಯ ಈರೇಶ ಅವರು ಅರ್ಜಿ ನೀಡಿ, ಎನ್ ಕೂಪ್‌ನಲ್ಲಿ ಅಂಗನವಾಡಿ ಕೇಂದ್ರವು ನಿಗಮದ ಕಟ್ಟಡದಲ್ಲಿದೆ, ಆದರೆ ಆ ಕಟ್ಟಡ ಇದೀಗ ಶಿಥಿಲಗೊಂಡಿದೆ, ಅಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಜಾಗವಿಲ್ಲ, ಅಲ್ಲಿ ನಿಗಮದ ಕಾರ್ಮಿಕರ ಮಕ್ಕಳೇ ಇದ್ದರೂ ನಿಗಮದವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಕಟ್ಟಡವನ್ನು ದುರಸ್ತಿ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ತಹಸೀಲ್ದಾರ್ ಅವರು ನಿಗಮದ ಅಽಕಾರಿಯವರನ್ನು ಉದ್ದೇಶಿಸಿ ಮಾತನಾಡಿ, ಸಣ್ಣ ಸಣ್ಣ ಕೆಲಸಗಳನ್ನು ನಿಮಗೆ ಮಾಡಿಸಬಹುದಲ್ವಾ?ನಿಗಮದ ವಸತಿಗೃಹಗಳನ್ನು ದುರಸ್ತಿ ಮಾಡುವಾಗ ಈ ಕಟ್ಟಡವನ್ನೂ ದುರಸ್ತಿ ಮಾಡಬಹುದಲ್ಲವೇ? ನಿಗಮದ ಕಾರ್ಮಿಕರ ಮಕ್ಕಳೇ ಇರುವಾಗ ಏನಾದರೂ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ಗ್ರಾಮಸ್ಥರು ನೀಡಿದರು, ತಹಸೀಲ್ದಾರ್ ಈ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖಾ ಅಽಕಾರಿಗಳಿಗೆ ನೀಡಿದರು. ವೇದಿಕೆಯಲ್ಲಿ ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಅವರು ಉಪಸ್ಥಿತರಿದ್ದರು.

ಹಕ್ಕಪತ್ರ -ಲಾನುಭವಿಗಳ ಹೊರತುಪಡಿಸಿ ಗ್ರಾಮಸ್ಥರ ಉಪಸ್ಥಿತಿ ಕಡಿಮೆ!
ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅಗತ್ಯವಾಗಿರುತ್ತದೆ, ಆದರೆ ಐತ್ತೂರು ಗ್ರಾಮ ವಾಸ್ತವ್ಯದಲ್ಲಿ ಹಕ್ಕುಪತ್ರ ಫಲಾನುಭವಿಗಳು, ಗ್ರಾ.ಪಂ. ಸದಸ್ಯರು, ಕೆಲವು ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳನ್ನು ಹೊರತುಪಡಿಸಿದರೆ ಗ್ರಾಮಸ್ಥರ ಉಪಸ್ಥಿತಿ ತೀರಾ ಕಡಿಮೆಯಾಗಿತ್ತು,ಇತರ ಸಭೆಗಳಂತೆ ಇದೂ ಒಂದು ಸಭೆ ಎಂದು, ಸಭೆಯಲ್ಲಿ ಪಾಲ್ಗೊಳ್ಳಲು ಗ್ರಾಮಸ್ಥರಿಗೆ ನಿರಾಸಕ್ತಿಯೋ? ಅಥವಾ ಗ್ರಾಮ ವಾಸ್ತವ್ಯದ ಬಗ್ಗೆ ಪ್ರಚಾರದ ಕೊರತೆಯೋ? ಕಾರಣ ತಿಳಿದು ಬಂದಿಲ್ಲ.

ಸಚಿವ ಅಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ 12 ಜನ ಮಾಜಿ ಸೈನಿಕರಿಗೆ ಮತ್ತು 69 -ಲಾನುಭವಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾದ ಭೂಮಿಯ ಹಕ್ಕು ಪತ್ರ ವಿತರಿಸಲಾಯಿತು. 18 ಪಿಂಚಣಿ ಯೋಜನೆಯ ದಾಖಲೆಗಳನ್ನು ಹಸ್ತಾಂತರಿಸಲಾಯಿತು.ಇನ್ನುಳಿದಂತೆ ವಿವಿಧ ಇಲಾಖೆಗಳಿಗೆ ಸಂಬಂಽಸಿ ಬಂದ ಅರ್ಜಿಗಳನ್ನು ಪಡೆದುಕೊಂಡ ತಹಸಿಲ್ದಾರ್ ಅವರು ಸಂಬಂಧಿಸಿದ ಇಲಾಖೆಗಳಿಗೆ ನೀಡಿ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.

 

ಲಂಚ, ಭ್ರಷ್ಟಾಚಾರದ ವಿರುದ್ದ ನಡೆಯುತ್ತಿರುವ ಸುದ್ದಿ ಜನಾಂದೋಲನಕ್ಕೆ ಗ್ರಾಮ ವಾಸ್ತವ್ಯ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.ತಹಸೀಲ್ದಾರ್ ಅನಂತಶಂಕರ್,ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ, ಉಪಾಧ್ಯಕ್ಷ ರೋಹಿತ್, ಅಭಿವೃದ್ದಿ ಅಧಿಕಾರಿ ಸುಜಾತ ಸೇರಿದಂತೆ ವೇದಿಕೆಯಲ್ಲಿದ್ದವರು ಹಾಗೂ ಸಭೆಯಲ್ಲಿದ್ದ ಎಲ್ಲರೂ ಈ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ, ಲಂಚ-ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ ಪ್ರತಿಜ್ಞೆ ಸ್ವೀಕರಿಸಿದರು.ಅಧಿಕಾರಿಗಳು ಲಂಚ, ಭ್ರಷ್ಟಾಚಾರದ ವಿರುದ್ಧದ ಫಲಕ ಸ್ವೀಕರಿಸಿದರು.

 

LEAVE A REPLY

Please enter your comment!
Please enter your name here