ಎಪ್ರಿಲ್ 10 ರಿಂದ ಮೇ.15ರವರೆಗೆ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಬೇಸಿಗೆ ರಜೆ

0

  • ಮೇ.16ಕ್ಕೆ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ

ಪುತ್ತೂರು : ರಾಜ್ಯದಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಎಪ್ರಿಲ್ 10 ರಿಂದ ಮೇ. 15ರವರೆಗೆ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.2021-22ನೇ ಸಾಲಿನ ಶೈಕ್ಷಣಿಕ ವರ್ಷ ಏಪ್ರಿಲ್ 9ಕ್ಕೆ ಮುಕ್ತಾಯಗೊಳ್ಳಲಿದೆ. ಮೇ 16ರಿಂದ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕೋವಿಡ್ ಕಾರಣ 2019-20, 2020-21 ಮತ್ತು2021-22 ಈ ಮೂರೂ ಶೈಕಣಿಕ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸಲು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಚೇತರಿಕೆ (ಸೇತುಬಂಧ) ಕಾರ್ಯಕ್ರಮ ಆಯೋಜಿಸಲು ಇಲಾಖೆ ನಿರ್ಧರಿಸಿದೆ. ಮೇ.16ರಿಂದ ಸೇತುಬಂಧ ಆರಂಭವಾಗಲಿದೆ. ಏಪ್ರಿಲ್ ೯ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳಲಿರುವುದರಿಂದ 1-5, 1-7 ಮತ್ತು 8ನೇ ತರಗತಿ ಇರುವ ಪ್ರಾಥಮಿಕ ಶಾಲೆಗಳಲ್ಲಿ ಮಾರ್ಚ್ 24ರಿಂದ ಏಪ್ರಿಲ್ ೪ರವರೆಗೆ ವಾರ್ಷಿಕ ಪರೀಕ್ಷೆ ನಡೆಸಿ, ಏ.9ರಂದು ಫಲಿತಾಂಶ ಪ್ರಕಟಿಸಬೇಕು. 8-9 ತರಗತಿಗಳಿರುವ ಪ್ರೌಢಶಾಲೆಗಳಲ್ಲಿ ಮಾರ್ಚ್ 21 ರಿಂದ ಮಾರ್ಚ್26ರವರೆಗೆ ವಿಷಯವಾರು ಪರೀಕ್ಷೆ, ಮಾರ್ಚ್29ರಂದು ಭಾಗ-2 (ದೈಹಿಕ ಶಿಕ್ಷಣ, ಇತರ) ಪರೀಕ್ಷೆ ನಡೆಸಿ, ಏಪ್ರಿಲ್ 7ರಂದು ಫಲಿತಾಂಶ ಪ್ರಕಟಿಸಬೇಕು ಎಂದು ಇಲಾಖೆ ಸೂಚಿಸಿದೆ.

LEAVE A REPLY

Please enter your comment!
Please enter your name here