ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಎರಡನೇ ಧಾರ್ಮಿಕ ಸಭೆ

0
  • ಅಂತರಂಗ ಶುದ್ದವಾಗಿದ್ದರೆ ದೇವರು ನಮಗೆ ಹತ್ತಿರವಾಗುತ್ತಾನೆ: ಶ್ರೀ ಧರ್ಮಪಾಲನಾಥ ಸ್ವಾಮೀಜಿ

 


ಪುತ್ತೂರು; ಭಾರತದ ಪರಂಪರೆ ಪ್ರಾಚೀನ ಪರಂಪರೆ, ನಮ್ಮ ದೇಶದಲ್ಲಿ ಧರ್ಮ, ದೇವರನ್ನು ಬಿಟ್ಟು ಯಾವುದೇ ಕಾರ್ಯ ನಡೆಯುವುದಿಲ್ಲ, ನಡೆಸುವುದೂ ಇಲ್ಲ, ಎಲ್ಲದರಲ್ಲೂ ದೇವರನ್ನು ಕಾಣುವ ನಮ್ಮ ಸನಾತನ ನಂಬಿಕೆ ಅದು ಎಂದಿಗೂ ಶಾಸ್ವತವಗಿರುತ್ತದೆ, ನಮ್ಮ ಅಂತರಂಗ ಶುದ್ದವಾಗಿದ್ದರೆ ಮಾತ್ರ ನಮಗೆ ದೇವರು ಹತ್ತಿರವಾಗುತ್ತಾನೆ ಎಂದು ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

 


ಅವರು ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಎರಡನೇ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.


ದೇವರ ಕರುಣೆಯಿಲ್ಲದೆ ಇಲ್ಲಿ ಯಾವುದೂ ನಡೆಯುವುದಿಲ್ಲ, ನಮಗೆ ಸಂಪತ್ತು, ಐಶ್ವರ್ಯವನ್ನು, ಆರೋಗ್ಯವನ್ನು ಕರುಣಿಸಿವನು ಅವನೇ ಆದರೆ ನಮಗೆ ದೇವರನ್ನು ಆರಾಧಿಸಲು ಸಮಯವಿಲ್ಲದಂತಾಗಿದೆ.ಅವನಿಂದ ಎಲ್ಲವನ್ನೂ ಪಡೆದುಕೊಂಡ ನಾವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದನ್ನೂ ಮರೆಯುತ್ತೇವೆ ಇದು ಸಲ್ಲದು. ನಮ್ಮ ಮನಸ್ಸು ಯಾವಾಗಲೂ ಶುದ್ದವಾಗಿರಬೇಕು, ಅನ್ಯರಿಗೆ ಕೇಡು ಬಯಸುವುದು ನಮ್ಮ ಹೃದಯ ಅಶುದ್ದಿಗೆ ಕಾರಣವಾಗುತ್ತದೆ, ಶುದ್ದ ಅಂತಕರಣದಿಂದ ನಾವು ದೇವರನ್ನು ಒಲಿಸಿಕೊಳ್ಳಲು ಸಾಧ್ಯವಗುತ್ತದೆ. ನಾವು ದೇವರ ಮುಂದೆ ಚಿಕ್ಕವರಾಗಬೇಕು. ಅಂಹಕಾರಿಗಳನ್ನು ದೇವರು ಇಷ್ಟಪಡುವುದಿಲ್ಲ. ಆಸ್ತಿ , ಅಂತಸ್ತು ನೋಡಿ ನಮ್ಮನ್ನು ದೆವರು ಪ್ರೀತಿಸಲ್ಲ ನಮ್ಮ ಅಂತರಂಗ ನಿಷ್ಕಲ್ಮಶವಾಗಿದ್ದರೆ ನಮ್ಮನ್ನು ಶಿವನು ಎಂದಿಗೂ ಕೈಬಿಡುವುದಿಲ್ಲ. ಸಂತೋಷ ನೆಮ್ಮದಿ ಅದೆಲ್ಲವೂ ನಮ್ಮಲ್ಲೇ ಇದೆ ಅದನ್ನು ಪಡೆಯಬೇಕಾದರೆ ದೇವರ ಅನುಗ್ರಹ ಬೇಕು ಇದಕ್ಕಾಗಿ ದೇವಾಲಯಕ್ಕೆ ಬಂದು ದೇವರಿಗೆ ಶರಣಾಗಬೇಕು ಎಂದು ಹೇಳಿದರು.

ಒಂದು ಕೋಟಿರೂ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿ: ಕಾವು ಹೇಮನಾಥ ಶೆಟ್ಟಿ
ಆಲಡ್ಕದಲ್ಲಿ ಇಂಥಹದೊಂದು ದೇವಸ್ಥಾನವಿದೆ, ಜಿಲ್ಲೆಯಲ್ಲೇ ಅತಿ ಎತ್ತರದ ಶಿವಲಿಂಗವಿದೆ, ಗ್ರಾಮೀಣ ಭಾಗದಲ್ಲಿ ೯೦೦ ವರ್ಷಗಳ ಇತಿಹಾಸವಿರುವ ದೇವಸ್ಥಾನವಿದೆ ಎಂಬ ವಿಚಾರ ಬಹುತೇಕರಿಗೆ ಗೊತ್ತಿರಲಿಲ್ಲ ಈಗ ಎಲ್ಲರಿಗೂ ಪರಿಚಯವಾಗುವಂತಾಗಿದೆ ಇದು ಸಂತೋಷದ ವಿಚಾರವಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ೧ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯ ನಡೆದಿದೆ, ಪುತ್ತೂರು ಶಾಸಕರಾದ ಸಂಜೀವ ಮಠಂದೂರು ೩೦ ಲಕ್ಷ ರೂ ಅನುದಾನ ನೀಡಿದ್ದಾರೆ. ಇನ್ನೂ ಕೆಲವು ಕಾಮಗಾರಿಗಳು ಬಾಕಿ ಇದೆ. ದೃಡ ಕಲಶಕ್ಕೆ ಮುಂಚಿತವಾಗಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಹೇಳಿದರು. ೨೧ ಗ್ರಾಮಗಳ ಆರಾಧನಾ ಕೇಂದ್ರವಾದ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ ಭಕ್ತರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ. ಅಕ್ಕಪಕ್ಕದ ಮೂರು ದೇವಸ್ಥಾನಗಳಲ್ಲಿ ಒಂದೇ ತಿಂಗಳಲ್ಲಿ ಬ್ರಹ್ಮಕಲಶ ನಡೆಯುತ್ತಿರುವುದು ವಿಶೇಷವಾಗಿದೆ. ಭಕ್ತರ, ದಾನಿಗಳ ಸಹಕಾರವಿದ್ದಲ್ಲಿ ಏನು ಬೇಕಾದರು ಮಾಡಬಹುದು ಎಂಬುದಕ್ಕೆ ಕ್ಷೇತ್ರದ ಅಭಿವೃದ್ದಿಯೇ ಸಾಕ್ಷಿಯಾಗಿದೆ ಎಂದು ಹೇಳಿದರು.

ದೇವಸ್ಥಾನಗಳು ಧರ್ಮ, ಸಂಸ್ಕಾರ ಉಳಿಸುವ ಕೇಂದ್ರವಾಗಬೇಕು: ಮುರಳೀಕೃಷ್ಣ ಹಸಂತಡ್ಕ
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ ಊರಿನ ಪ್ರತೀಯೊಂದು ದೇವಸ್ಥಾನ, ದೈವಸ್ಥಾನಗಳು ಧರ್ಮ, ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರವನ್ನು ಉಳಿಸುವ ಕೇಂದ್ರವಾಗಿ ರೂಪುಗೊಳ್ಳಬೇಕು. ಎಲ್ಲದರಲ್ಲೂ ಭಗವಂತನನ್ನು ಕಾನುವ ಹಿಂದೂ ಧರ್ಮದಲ್ಲಿ ಯಾವುದೇ ಬೇದಬಾವವಿಲ್ಲದೆ ಎಲ್ಲರೂ ಒಟ್ಟಾಗಿ ದೇವರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ಪ್ರತೀ ಗ್ರಾಮ ಗ್ರಾಮದಲ್ಲೂ ಬ್ರಹ್ಮಕಲಶ ಕಾರ್ಯಕ್ರಮಗಳು ನಡೆಯುವ ಮೂಲಕ ನಮ್ಮ ನಂಬಿಕೆಯನ್ನು ಉಳಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ದೇವಳಗಳು ಧರ್ಮದ ಆಧಾರ ಸ್ತಂಬಳಿದ್ದಂತೆ ಅವುಗಳ ಜೊತೆ ನಾವು ನಿಕಟ ಸಂಪರ್ಕವನ್ನು ಇಟ್ಟುಕೊಳ್ಳುವ ಮನಸ್ಸು ಉಳ್ಳವರಾಗಬೇಕು. ವಾರಕ್ಕೊಂದು ಬಾರಿಯಾದರೂ ನಮ್ಮ ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡುವ ಚರ್ಯೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕಿದೆ.ಹಿಂದೂ ಧರ್ಮದ ಮೇಲಿನ ಅಕ್ರಮಣದಿಂದಾಗಿ ಕೆಲವೊಂದು ಸನಾತನ ಸಂಸ್ಕೃತಿ ನಾಶವಾಗಿದೆ. ಅಕ್ರಮಣಗಳು ಧರ್ಮದ ಮೇಲೆ ನಿರಂತರವಾಗಿ ನಡೆಯುತ್ತಲೇ ಇದ್ದರೆ ಇಂದು ನಂಬಿಕೆಯ ಮೇಲೆ ಹಿಂದೂ ಧರ್ಮ ಉಳಿದಿದೆ ಎಂದು ಹೇಳಿದ ಅವರು ಜಗತ್ತಿಗೆ ಮಾರ್ಗದರ್ಶನ ನೀಡುವ ಸಂಸ್ಕೃತಿ ಹಿಂದೂ ಸಂಸ್ಕೃತಿಯಾಗಿದೆ. ಇಂದು ವಿಶ್ವದಲ್ಲೇ ಹಿಂದೂ ಧರ್ಮಕ್ಕೆ ಅಪಾರ ಗೌರವ ಇದೆ, ಜಗತ್ತಿನ ಪ್ರತೀಯೊಂದು ಕಡೆಗಳಲ್ಲೂ ಹಿಂದೂ ಧರ್ಮವಿದೆ, ಹಿಂದೂ ಧಮಿಯರಿದ್ದಾರೆ ಇದು ಸನಾತನ ಧರ್ಮದ ವಿಶೇಷತೆಯಾಗಿದೆ. ಹಡೀಲು ಬಿದ್ದ ಗದ್ದೆಗಳಲ್ಲಿ ಪುತ್ತೂರು ತಾಲೂಕಿನಲ್ಲಿ ೨೫ ದೇವಸ್ಥಾನಗಳ ಆಡಳಿತ ಮಂಡಳಿ ಈ ಬಾರಿ ಭತ್ತ ಬೇಸಾಯ ಮಾಡಿದೆ ಇದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದ ಅವರು ಧರ್ಮ, ದೇವರ ಕಾರ್ಯದಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.


ಮಕ್ಕಳಿಗೆ ಧರ್ಮದ ಸಂಸ್ಕಾರ ಕಲಿಸಬೇಕು: ಮುರಳೀಮೋಹನ ಶೆಟ್ಟಿ
ನಾವು ನಮ್ಮ ಮಕ್ಕಳಿಗೆ ಹಿಂದೂ ಸಂಸ್ಕಾರ, ಆಚಾರ , ವಿಚಾರಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕು, ಅವರು ದೊಡ್ಡವರಾದ ಬಳಿಕ ನಮ್ಮ ಸನಾತನ ಸಂಸ್ಕೃತಿ ಮುಂದುವರೆಸಬೇಕಿದೆ. ಊರಿನ ಎಲ್ಲಾ ದೇವಸ್ಥಾನಗಳು ಅಭಿವೃದ್ದಿಯಾದರೆ ಜನರಲ್ಲಿ ಧಾರ್ಮಿಕ ಜಾಗೃತಿಮೂಡುತ್ತದೆ. ಮೂಢನಂಬಿಕೆ ಯಾವುದು, ಮೂಲನಂಬಿಕೆ ಯಾವುದು ಎಂಬುದರ ಬಗ್ಗೆ ನಾವು ಮಕ್ಕಳಿಗೆ ತಿಳಿಹೇಳಬೇಕಾಗಿದೆ ಇಲ್ಲವಾದರೆ ಮೂಲ ನಂಬಿಕೆಯನ್ನೇ ಅವರು ಮೂಢನಂಬಿಕೆ ಎಂದು ಹೇಳುವ ಸಾದ್ಯತೆ ಇದ್ದು ಹೀಗಾಗದಂತೆ ನಾವು ಪ್ರತೀಯೊಬ್ಬರೂ ಎಚ್ಚರವಹಿಸಬೇಕು ಎಂದು ಗೋವ ಆ ಬಂಟರ ಸಂಘದ ಅಧ್ಯಕ್ಷ ಮುರಳೀಮೋಹನ ಶೆಟ್ಟಿ ಹೇಳಿದರು.


ಉತ್ತಮ ಕಾರ್ಯಗಳನ್ನು ಮಾಡಿಹೆಸರುಗಳಿಸಿ: ನಡುಬೈಲು
ನಾವು ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆಗಳನ್ನು ನೀಡಬೇಕು, ಉತ್ತಮ ಕೆಲಸಗಳನ್ನು ಮಾಡುವ ಮೂಲಕ ನಾವು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ನಾವುಮಾಡಿಟ್ಟ ಸಂಪತ್ತು, ಕೂಡಿಟ್ಟ ಸಂಪತ್ತು ಅದು ನಮಗೆ ಪ್ರಯೋಜನಕ್ಕೆ ಬರುವುದಿಲ್ಲ, ನಾವು ಸಾಯುವಾಗ ಇಲ್ಲಿ ಪಡೆದದ್ದೆಲ್ಲವನ್ನೂ ಇಲ್ಲೇ ಬಿಟ್ಟು ಹೋಗುವವರಾಗಿದ್ದೇವೆ. ದಾನ, ಧರ್ಮವನ್ನು ಹೆಚ್ಚಿಸುವ ಮೂಲಕ ದೇವರ ಸಂಪ್ರೀತಿಗೆ ಪಾತ್ರರಾಗಬೇಕು. ಪ್ರತೀಯೊಬ್ಬರೂ ತಮ್ಮ ಊರಿನ ದೇವಸ್ಥಾನದ ಜೊತೆ ನಿರಂತರ ಸಂಪರ್ಕ ಇರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ, ಅಭಿವೃದ್ದಿಯಲ್ಲಿ ಪಾಲುದಾರರಾಗಿ ಎಂದು ಉದ್ಯಮಿ ಜಯಂತ್‌ ನಡುಬೈಲು ಹೇಳಿದರು.

ಧಾರ್ಮಿಕ ಸಭೆಗಳು ಸಮಾಜದಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ: ಮಿತ್ರಂಪಾಡಿ ಜಯರಾಮ ರೈ
ಇಂದಿನ ಕಾಲಘಟ್ಟದಲ್ಲಿ ಧಾರ್ಮಿಕ ಸಭೆಗಳು ಅತೀ ಅಗತ್ಯವಾಗಿದೆ. ನಮ್ಮ ಧರ್ಮದ ಆಚಾರ, ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ. ದೇವಳದಲ್ಲಿ ನಡೆಯುವ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಗಳನ್ನು ನಡೆಸಲಾಗುತ್ತದೆ ಆದರೆ ಈ ಸಭೆಗೆ ಭಕ್ತರು ಬರುವುದು ಕಡಿಮೆಯಾಗಿದೆ ಎಂದು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಹೇಳಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಗತ್ತಿನ ಯಾವುದೇ ದೇಶದಲ್ಲಿ ಭಾರತದ ಸಂಸ್ಕೃತಿ, ಸಂಸ್ಕಾರ ಕಾಣಲು ಸಾಧ್ಯವಿಲ್ಲ ಎಂಬುದು ಪ್ರತೀಯೊಬ್ಬರೂ ಹೆಮ್ಮೆಪಡುವ ವಿಚಾರವಾಗಿದೆ. ನಮ್ಮ ದೇಶಕ್ಕೆ ದೇವರ ಅಪಾರ ಅನುಗ್ರಹವಿದೆ ಎಂದು ಹೇಳಿದರು.

ಆರ್ಥಿಕ ಸಮಸ್ಯೆಯ ಕಾರಣಕ್ಕೆ ಯಾವ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಅಡ್ಡಿಯಾಗಿಲ್ಲ, ಎಲ್ಲಾ ದೇವಳಗಳ ಕಾರ್ಯಗಳು ಅಯಾ ಕಾಲಕ್ಕೆ ಸುಸೂತ್ರವಾಗಿ ನಡೆಯುತ್ತಿರುವುದು ದೇವರ ಮಹಿಮೆಯಾಗಿದೆ. ಮೋಸದಿಂದ ಪಡೆದ ಸಂಪತ್ತಿನಿಂದ ದೇವರಿಗೆ ಖರ್ಚು ಮಾಡಬಾರದು ಅದು ದೇವರಿಗೆ ಇಷ್ಟವಿಲ್ಲದ ವಿಚಾರವಾಗಿದೆ. ದೇವಳಗಳಲ್ಲಿ ಪೂಜಾ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುವಂತಾದರೆ ಆ ಊರಿಗೆ ಅದುವೇ ದೊಡ್ಡ ವರದಾನವಾಗಿದೆ ಎಂದು ಹೇಳಿದರು. ಆಲಡ್ಕದಲ್ಲಿ ನಡೆದ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಪ್ರತೀಯೊಬ್ಬರೂ ಸಹಕಾರ ನೀಡಿದ್ದಾರೆ, ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದ ಕಾರಣ ಕಾರ್ಯಕ್ರಮ ಯಸ್ವಿಯಾಗಿದೆ ಎಂದು ಹೇಳಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.


ವೇದಿಕೆಯಲ್ಲಿ ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ, ಪುತ್ತೂರು ತಾಲೂಕು ಬಂಟರ ಯಾನೆ ನಾಡವರ ಮಾತೃಸಂಘಳೂರು ಇದರ ಸಂಚಾಲಕ ದಯಾನಂದ ರೈ ಮನವಳಿಕೆ, ಎಪಿಎಂಸಿ ಸದಸ್ಯೆ ತ್ರಿವೇಣಿ ಪೆರ್‍ವೋಡಿ, ಗೋವಾ ಬಂಟರ ಸಂಘದ ಉಪಾಧ್ಯಕ್ಷ ಶಶಿಧರ್ ರೈ ಕೊಡೆಂಕಿರಿ, ಉದ್ಯಮಿ ಉಮೇಶ್ ನಾಡಾಜೆ, ಎಲಿಯ ಶ್ರೀ ವಿಷ್ಣಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಪ್ರಗತಿಪರ ಕೃಷಿಕ ಹೆಗ್ಗಪ್ಪ ಪೊನೋಣಿ, ಹರ್ಷಕುಮಾರ್ ರೈ ಮಾಡಾವು, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಅರುಣಕುಮಾರ ಆಳ್ವ ಬೋಳೋಡಿಗುತ್ತು,ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಭಾಸ್ಕರ ರೈ ಕೆದಂಬಾಡಿಗುತ್ತು, ಕೋಶಾಧಿಕಾರಿ ರತನ್ ರೈ ಕುಂಬ್ರ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಬಿ ವಿ ಶಗ್ರಿತ್ತಾಯ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಕಣ್ಣಾರಾಯ, ಪ್ರಗತಿಪರ ಕೃಷಿಕ ಸಂತೋಷ್‌ಕುಮಾರ್ ರಐ ಇಳಂತಜೆ, ಉದ್ಯಮಿ ಶರತ್ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರುಕ್ಮನಾಯ್ಕ ಮಜಲಮೂಲೆ, ಪದ್ಮಾವತಿ ಶೀನಪ್ಪ ರೈ ಕೊಡೆಂಕಿರಿ, ಜಯಲಕ್ಷ್ಮಿ ಬಾಳಾಯ, ಸದಾಶಿವ ರೈ ಪೊಟ್ಟಮುಲೆ,ಪ್ರಕಾಶ್ ಪುತ್ತೂರಾಯ ಆಲಡ್ಕ, ಭಾಸ್ಕರ ರೈ ಕೆದಂಬಾಡಿ ಗಉತ್ತು, ವಿಶ್ವನಾಥ ರೈ ಕುಕ್ಕುಮಜೋಡು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರಕ್ಕೆ ನೆರವು ನೀಡಿದ ದಾನಿಗಳನ್ನು ಸ್ವಾಮೀಜಿಗಳು ಫಲಪುಷ್ಪ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಅನ್ನು ತಿಂಗಳಾಡಿ ಪ್ರಾರ್ಥಿಸಿದರು. ಮುಂಡಾಳ ಮೋಹನ್ ಆಳ್ವ ವಂದಿಸಿದರು. ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಮದ ಬಳಿಕ ಓಂ ನಮ ಶಿವಾಯ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here