ಪುತ್ತೂರು:2023ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಮಾರ್ಗಸೂಚಿ ಅನುಸಾರ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಉಪನಿರೀಕ್ಷಕರನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಚಂದ್ರಗುಪ್ತ ಆದೇಶಿಸಿದ್ದಾರೆ.
ವರ್ಗಾವಣೆಗೊಳಿಸಿ ಆದೇಶಿಸಲಾದ ಅಧಿಕಾರಿಗಳು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಂದ ಕೂಡಲೇ ಬಿಡುಗಡೆಗೊಳಿಸಿ ವರ್ಗಾಯಿಸಲಾದ ಸ್ಥಳಗಳಲ್ಲಿ ಸೇರುವಿಕೆಗೆ ಯಾವುದೇ ಕಾಲಾವಕಾಶವನ್ನು ಉಪಯೋಗಿಸಿಕೊಳ್ಳದೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಉಪ್ಪಿನಂಗಡಿಯ ಕೆ.ಚಂದ್ರಶೇಖರ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಠಾಣೆ, ಬಂಟ್ವಾಳ ನಗರ ಠಾಣೆಯ ಕಲೈಮಾರ್ ಉಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣೆ, ಬಂಟ್ವಾಳ ಗ್ರಾಮಾಂತರ ಠಾಣೆಯ ಭಾರತಿ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣೆ, ವಿಟ್ಲ ಠಾಣಾ ರುಕ್ಮ ನಾಯ್ಕ್ ಉಡುಪಿ ಜಿಲ್ಲೆಯ ಮಣಿಪಾಲ ಠಾಣೆ, ಪುತ್ತೂರು ನಗರ ಠಾಣಾ ರಾಮ ನಾಯ್ಕ್ ಜಿ.ಉಡುಪಿ ಸಂಚಾರಿ ಠಾಣೆ, ಪುತ್ತೂರು ಸಂಚಾರಿ ಠಾಣಾ ಕುಟ್ಟಿ ಮೇರ ಚಿಕ್ಕಮಗಳೂರು ಜಿಲ್ಲೆಯ ಕಡೂರು ಠಾಣೆ, ಪುತ್ತೂರು ಮಹಿಳಾ ಠಾಣಾ ಎಸ್‌ಐ ಸೇಸಮ್ಮ ಕೆ.ಎಸ್ ಚಿಕ್ಕಮಗಳೂರು ಮಹಿಳಾ ಠಾಣೆ, ಉಪ್ಪಿನಂಗಡಿ ಠಾಣಾ ಎನ್.ಕೆ ಓಮನ ಚಿಕ್ಕಮಗಳೂರು ಜಿಲ್ಲೆಯ ಸಿಂಗಟಗೆರೆ ಠಾಣೆ, ಸುಳ್ಯ ಠಾಣೆಯ ರತ್ನಕುಮಾರ್ ಎಂ ಚಿಕ್ಕಮಗಳೂರು ಗ್ರಾಮಾಂತರ ಠಾಣೆ, ಕಡಬದ ಆಂಜನೇಯ ರೆಡ್ಡಿ ಪುಂಜಾಲಕಟ್ಟೆ ಠಾಣೆ, ಬಂಟ್ವಾಳ ಗ್ರಾಮಾಂತರ ಠಾಣಾ ಸಂಜೀವ ಕೆ. ಪುತ್ತೂರು ಸಂಚಾರಿ ಠಾಣೆ, ಪುತ್ತೂರು ಸಂಚಾರಿ ಠಾಣಾ ಉದಯರವಿ ವೈ.ಎಂ. ಬಂಟ್ವಾಳ ಗ್ರಾಮಾಂತರ ಠಾಣೆ, ಮಣಿಪಾಲದ ಸುಧಾಕರ ತೋನ್ಸೆ ಉಪ್ಪಿನಂಗಡಿ ಠಾಣೆ, ಬ್ರಹ್ಮಾವರದ ರಾಜಶೇಖರ ವಂದಲಿ ಪುತ್ತೂರು ಸಂಚಾರ ಠಾಣೆ, ಭಟ್ಕಳ ನಗರ ಠಾಣಾ ವೀಣಾ ರಾಮಚಂದ್ರ ಚಿತ್ರಾಪುರ ಉಪ್ಪಿನಂಗಡಿ ಠಾಣೆ, ಕುಮಟ ಠಾಣೆಯ ಪದ್ಮ ದೇವಳಿ ವಿಟ್ಲ ಠಾಣೆ, ಕುಮಟದ ಚಂದ್ರಮತಿ ಪಟಗಾರ ಬಂಟ್ವಾಳ ಸಂಚಾರ ಠಾಣೆ, ಉತ್ತರ ಕನ್ನಡದ ಅಂಬಿಕಾ ನಗರದ ಮಂಜುಳಾ ರಾವೋಜಿ ಬಂಟ್ವಾಳ ಗ್ರಾಮಾಂತರ ಠಾಣೆ, ಕಾರವಾರ ಗ್ರಾಮಾಂತರ ಠಾಣೆಯ ಸೋಮನಾಥ ರಾಮ ನಾಯ್ಕ ಪುತ್ತೂರು ನಗರ ಠಾಣೆ, ಚಿಕ್ಕಮಗಳೂರು ಬಸವನಹಳ್ಳಿ ಠಾಣಾ ಡಿ.ರೇಣುಕಮ್ಮ ಧರ್ಮಸ್ಥಳ ಠಾಣೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಯು.ಪಿ ನಾಗರಾಜ ಪುಂಜಾಲಕಟ್ಟೆ ಠಾಣೆ, ಚಿಕ್ಕಮಗಳೂರು ಮಹಿಳಾ ಠಾಣಾ ನಂದಿನಿ ಎಸ್ ಬಂಟ್ವಾಳ ನಗರ ಠಾಣೆ, ಚಿಕ್ಕಮಗಳೂರು ಕಡೂರು ಠಾಣೆಯ ಗೋವಿಂದ ನಾಯ್ಕ್ ಬಿ ಬಂಟ್ವಾಳ ಗ್ರಾಮಾಂತರ ಠಾಣೆ, ಚಿಕ್ಕಮಗಳೂರು ಕಡೂರು ಠಾಣೆಯ ಹರೀಶ್ ಆರ್ ಅವರನ್ನು ಕಡಬ ಠಾಣೆಗೆ ವರ್ಗಾವಣೆಗೊಳಿಸಿ ಪೊಲೀಸ್ ಉಪ ಮಹಾ ನಿರೀಕ್ಷಕರು ಆದೇಶಿಸಿದ್ದಾರೆ.