ಬಾಕಿಲಗುತ್ತುವಿನಲ್ಲಿ ಹೊಸಮ್ಮ , ಜಾನು ಬೈದ್ಯ ಕೋಲ, ವೈದ್ಯನಾಥ ನೇಮ

0

ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ, ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಜ.30ರಂದು ಫೆ.3ರ ವರೆಗೆ ನಡೆಯಲಿರುವ ಪ್ರತಿಷ್ಠಾದಿನಾಚರಣೆ ಹಾಗೂ ನೇಮೋತ್ಸವದ ಎರಡನೇ ದಿನವಾದ ಜ.31ರಂದು ಬೆಳಗ್ಗೆ ಹರಿಸೇವೆ, ಮಧ್ಯಾಹ್ನ ಮಹಾಪೂಜೆ, ಹೊಸಮ್ಮ ಭಂಡಾರ ಇಳಿಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಟುಂಬಸ್ಥರ ಮಕ್ಕಳಿಗೆ ವಿದ್ಯಾನಿಧಿ ಧನ ಸಹಾಯ ವಿತರಣೆ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಸಾಯಂಕಾಲ ಸೆಲ್ಲೆದಿಕೋಲ, ಹೊಸಮ್ಮ ನೇಮ, ಜಾನು ಬೈದ್ಯ ಕೋಲ, ವೈದ್ಯನಾಥ ನೇಮ ನಡೆಯಿತು.


ಬಾಕಿಲ ಗುತ್ತು ಆಡಳಿತ ಟ್ರಸ್ಟ್ ನ ಅಧ್ಯಕ್ಷರಾದ ವಸಂತ ಪೂಜಾರಿ ಎ. ಮಂಗಳೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮಂಗಳೂರು, ಕೋಶಾಧಿಕಾರಿ ಲಕ್ಷ್ಮಣ ಪೂಜಾರಿ ಬಾಕಿಲಗುತ್ತು, ಜತೆಕಾರ್ಯದರ್ಶಿ ಸಂಕಪ್ಪ ಪೂಜಾರಿ ಮಾಡಾವು, ಸಂಬಂಧಿಕರಾದ ವಸಂತ ಸುವರ್ಣ ಲಾಯಿಲ, ಟ್ರಸ್ಟಿಗಳಾದ ಜನಾರ್ದನ ಪೂಜಾರಿ ಬಾಕಿಲಗುತ್ತು, ಸುರೇಶ್ ಸಾಲ್ಯಾನ್ ಬಾಕಿಲಗುತ್ತು, ಶೈಲೇಶ್ ಕುಮಾರ್ ಅಗತ್ತಾಡಿ, ಚಂದ್ರಶೇಖರ ಗೋಳಿಕಟ್ಟೆ, ಪುಷ್ಪ ಬಾಕಿಲಗುತ್ತು, ಕೃಷ್ಣ ಶಾಂತಿ ಪಾಣೆರಮಜಲು, ವಾರಿಜ ವಸಂತ ಸುವರ್ಣ ಕೆಂಗುಡೆಲು, ಕುಟುಂಬಸ್ಥರು ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ಇಂದು ದೈವಸ್ಥಾನದಲ್ಲಿ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಕೋಲ
ಫೆ.1ರಂದು ಬೆಳಗ್ಗೆ ಹೋಮ ಪಂಚಕಜ್ಜಾಯ ನಡೆಯಲಿದೆ. ಸಾಯಂಕಾಲ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ಭಂಡಾರ ಇಳಿಯಲಿದೆ. ಸಾಯಂಕಾಲ ಅಣ್ಣಪ್ಪ ಪಂಜುರ್ಲಿ ಕೋಲ ನಡೆಯಲಿದೆ. ರಾತ್ರಿ ಕಲ್ಲುರ್ಟಿ ಪಂಜುರ್ಲಿ ಕೋಲ ನಡೆಯಲಿದೆ.

LEAVE A REPLY

Please enter your comment!
Please enter your name here