ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ದ.ಕ ಜಿಲ್ಲೆಯ ಅಧಿಕಾರೇತರ ಸದಸ್ಯರಾಗಿ ರವೀಂದ್ರ ಹೆಗ್ಡೆ ನೇಮಕ

0

ಪುತ್ತೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಗ್ರಾಹಕರ ಕುಂದು ಕೊರತೆಗಳ ನಿವಾರಣಾ ವೇದಿಕೆ ಮತ್ತು ಒಂಬಡ್ಸ್ಮನ್-ಎರಡನೇ ತಿದ್ದುಪಡಿ) ನಿಯಮಾವಳಿ-2016 ರನ್ವಯ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಇದರ ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕುಂದುಕೊರತೆಗಳ ನಿವಾರಣಾ ವೇದಿಕೆಯ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಮೂರು ವರ್ಷಗಳ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರೇತರ ಸದಸ್ಯರಾಗಿ ಸಾಮೆತ್ತಡ್ಕ ನಿವಾಸಿ ರವೀಂದ್ರ ಹೆಗ್ಡೆ ಕೆ.ರವರು ನೇಮಕಗೊಂಡಿದ್ದಾರೆ.


ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಕುಂದುಕೊರತೆಗಳ ನಿವಾರಣೆಗೆ ವೇದಿಕೆಯ ಅಧಿಕಾರೇತರ ಸದಸ್ಯರ ಕಾರ್ಯಾವಧಿಯು 2023, ಜನವರಿ 29 ರಂದು ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನದ ನೇಮಕದ ಕುರಿತಂತೆ ಮೆಸ್ಕಾಂ ಕಾರ್ಪೋರೇಟರ್ ಕಛೇರಿ ಪತ್ರ ಮುಖೇನ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಲಾಗಿತ್ತು. ಅದರಂತೆ ಮಾನ್ಯ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಮುಂದಿನ ಮೂರು ವರ್ಷದ ಅವಧಿಗೆ ಅಧಿಕಾರೇತರ ಸದಸ್ಯರಾಗಿ ಜಿಲ್ಲಾ ಮಟ್ಟದ ಪುನರ್ ರಚಿತ ವೇದಿಕೆಯಲ್ಲಿ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here