ಮುಂಡೂರು ಜಾಗದ ವಿಚಾರದಲ್ಲಿ ಹಲ್ಲೆ :10 ಮಂದಿ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು:ಮುಂಡೂರು ಗ್ರಾಮದ ಪಟ್ಟೆ ಎಂಬಲ್ಲಿ ಫೆ.2ರಂದು ಸಂಜೆ ಜಾಗದ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ನಡೆದ ಹಲ್ಲೆಗೆ ಸಂಬಂಧಿಸಿ 10 ಮಂದಿ ಆರೋಪಿಗಳ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುಂಡೂರು ಗ್ರಾಮದ ಪಟ್ಟೆ ನಿವಾಸಿ ಅಶ್ರಫ್ (36ವ)ರವರು ಹಲ್ಲೆಗೊಳಗಾದವರು.ಅಶ್ರಫ್ ಅವರ ಜಾಗಕ್ಕೆ, ಸದ್ರಿ ಜಾಗದ ವಿಚಾರದಲ್ಲಿ ತಕರಾರು ಇರುವ ಹಿನ್ನೆಲೆಯಲ್ಲಿ ಇಬ್ರಾಹಿಂ ಸಂತೋಷ್, ಮತ್ತು ಮಕ್ಕಳಾದ ಉಸ್ಮಾನ್ ಸಂತೋಷ್, ಹಸೈನಾರ್ ಸಂತೋಷ್, ಮುಸ್ತಾಫ್ ಸಂತೋಷ್, ಇಬ್ರಾಹಿಂ ಮುಲಾರ, ಅಶ್ರಫ್ ಮುಲಾರ್,ಸುಲೈಮಾನ್ ಮುಲಾರ್, ಮುತ್ತಬ್ಬ ಯಾನೆ ಮುಸ್ತಫ್, ಅಶೀಫ್ ಅಜಲಾಡಿ,ರೌವುಫ್ ಅಜ್ಜಿಕಟ್ಟೆ ಎಂಬವರು ಅಕ್ರಮವಾಗಿ ಪ್ರವೇಶ ಮಾಡಿ, ಅಶ್ರಫ್ ಅವರು ಹಾಕಿದ್ದ ಬೇಲಿಯನ್ನು ತೆಗೆದು ನಾಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.ಹಲ್ಲೆಗೊಳಗಾದ ಅಶ್ರಫ್ ಅವರನ್ನು ಪತ್ನಿ ಮತ್ತು ಇತರರು ಸೇರಿಕೊಂಡು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.ಗಾಯಾಳು ಅಶ್ರಫ್ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಕಲಂ
143,147,148,447,427,504,323,324,506,149ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here