ಪುತ್ತೂರು: ತೆಗ್ಗು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ವಯಂಚಾಲಿತ ಗಣಕ ಯಂತ್ರದ ಉದ್ಘಾಟನೆ ಮತ್ತು ಹೈನುಗಾರಿಕೆ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಫೆ.7 ರಂದು ಬೆಳಿಗ್ಗೆ ತೆಗ್ಗು ಹಾ.ಉ.ಸ.ಸಂಘದ ವಠಾರದಲ್ಲಿ ನಡೆಯಲಿದೆ.
ಸ್ವಯಂಚಾಲಿತ ಗಣಕಯಂತ್ರವನ್ನು ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ, ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕರುಗಳಾದ ಡಾ.ನಿತ್ಯಾನಂದ ಭಕ್ತ ಮತ್ತು ಡಾ.ಸತೀಶ್ ಕೆ, ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾ.ಅನುದೀಪ್, ವಿಸ್ತರಣಾಧಿಕಾರಿ ಕೆ.ನಾಗೇಶ್ ಭಾಗವಹಿಸಲಿದ್ದಾರೆ. ತೆಗ್ಗು ಹಾ.ಉ.ಸ.ಸಂಘದ ಅಧ್ಯಕ್ಷ ಶುಭಪ್ರಕಾಶ್ ಎರಬೈಲು ಸಭಾಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷವಾಗಿ ಎಸ್.ಬಿ.ಜಯರಾಮ ರೈ ಬಳಜ್ಜ ಮತ್ತು ಡಾ.ನಿತ್ಯಾನಂದ ಭಕ್ತರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಘದ ಸದಸ್ಯರುಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷ ಶುಭಪ್ರಕಾಶ್ ಎ, ಉಪಾಧ್ಯಕ್ಷ ರಮಾನಾಥ ರೈ, ಕಾರ್ಯದರ್ಶಿ ಅರ್ಪಣಾ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದ ಪ್ರಕಟಣೆ ತಿಳಿಸಿದೆ.