ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾರತೀಯ ಲೆಕ್ಕ ಪರಿಶೋಧನಾ ಮಂಡಳಿಯು (ಐಸಿಎಐ) ನಡೆಸಿದ ಸಿ.ಎ. ಇಂಟರ್ ಗ್ರೂಪ್ ಪರೀಕ್ಷೆಯ ಗ್ರೂಪ್ 1 ವಿಭಾಗದ ಪರೀಕ್ಷೆ ಹಾಗೂ ಸಿ.ಎ ಫೌಂಡೇಶನ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಅಂಬಿಕಾ ಮಹಾವಿದ್ಯಾಲಯದ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸ್ವರ್ಣಾ ಶೆಣೈ ಇಂಟರ್ ಗ್ರೂಪ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗಳು ಹಾಗೂ ಶೆಣೈ ಬ್ರದರ‍್ಸ್ ಸಂಸ್ಥೆಯ ಮಾಲಕ ವಿ. ಜೀವನ್ ಶೆಣೈ ಹಾಗೂ ಜಯಶ್ರೀ ಶೆಣೈ ದಂಪತಿ ಪುತ್ರಿ. ಪುತ್ತೂರಿನ ಉದ್ಯಮಿ ಆನಂದ ಭಟ್ ಹಾಗೂ ಸೌಮ್ಯಾ ಭಟ್ ದಂಪತಿ ಪುತ್ರ, ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಅನ್ಮಯ್ ಭಟ್, ಪುತ್ತೂರಿನ ಸೀತಾರಾಮ ಎಂ ಹಾಗೂ ಸರೋಜಾ ಕೆ ದಂಪತಿ ಪುತ್ರಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸಿಂಚನಾ, ಬಂಟ್ವಾಳದ ನಾರಾಯಣ ಮೂಲ್ಯ ಹಾಗೂ ಹೇಮಾವತಿ ದಂಪತಿ ಪುತ್ರಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ತೇಜಸ್ವಿನಿ, ಪುತ್ತೂರಿನ ನಿಡ್ಪಳ್ಳಿಯ ಸತೀಶ್ ಬೋರ್ಕರ್ ಹಾಗೂ ಅರುಣಾ ಎಂ ದಂಪತಿ ಪುತ್ರಿ, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ರಂಜಿತಾ ಸಿ.ಎ ಫೌಂಡೇಶನ್ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅಂಬಿಕಾ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯಗಳಲ್ಲಿ ಸಿಎ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಸಿ.ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ದೊರೆಯುತ್ತಿದೆ.