ಕುಕ್ಕಾಜೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಹಿನ್ನೆಲೆ ಪೂರ್ವಭಾವಿ ಸಭೆ

0

ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಎಲ್ಲರ ಶ್ರಮ ಅಗತ್ಯ: ಶ್ರೀ ಶ್ರೀಕೃಷ್ಣ ಗುರೂಜಿ

ನಮ್ಮ ಪಾಲಿಗೆ ಬಂದ ಯೋಗವನ್ನು ಶ್ರದ್ಧೆಯಿಂದ ಮಾಡೋಣ: ಯಶೋಧರ ಬಂಗೇರ

ವಿಟ್ಲ: ಇನ್ನುಳಿದಿರುವ ಅತ್ಯಲ್ಪ ಸಮಯದಲ್ಲಿ ನಾವು ಬಹಳಷ್ಟು ಕೆಲಸಕಾರ್ಯಗಳನ್ನು ಮಾಡಿಮುಗಿಸಬೇಕಾಗಿದೆ. ಮುಂದಿ‌ನ ದಿನಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಇಂದಿನಿಂದಲೇ ಪ್ರತಿಯೋರ್ವರು ಪ್ರತಿ ದಿನ ಶ್ರಮವಹಿಸಿ ಕೆಲಸ ಮಾಡುವ ಅಗತ್ಯ ಇದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಿ ದೇವರ ಕೃಪೆಗೆ ಪಾತ್ರರಾಗಿ ಎಂದು ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರಿಕೃಷ್ಣ ಗುರೂಜಿ ಹೇಳಿದರು.

ಅವರು ಕ್ಷೇತ್ರದಲ್ಲಿ ಮಾ.5ರಿಂದ ಮಾ.9ರ ವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಆಶೀರ್ವಚನ ನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಗೀತಪ್ರಕಾಶ್ ವಿಟ್ಲ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮ ಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಯಶೋಧರ ಬಂಗೇರ ಅಳಿಕೆರವರು ಮಾತನಾಡಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿ ತಮ್ಮ ಸೇವೆ ಮಾಡಲು ಪೂರ್ವ ಜನ್ಮದ ಪುಣ್ಯ ಪಡೆದಿರಬೇಕು. ಆ ಯೋಗ ನಮ್ಮ ಪಾಲಿಗೆ ಒದಗಿ ಬಂದಿದೆ. ಅದನ್ನು ನಾವು ಶ್ರದ್ಧೆಯಿಂದ ಮಾಡಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ.ಕುಕ್ಕಾಜೆ, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾರಜೆ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲು , ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷರುಗಳಾದ ಯತೀಶ್ ಆಳ್ವ ಏಳ್ನಾಡು ಗುತ್ತು, ಪದ್ಮನಾಭ ಪೂಜಾರಿ ಸಣ್ಣ ಗುತ್ತು, ವಿವಿಧ ಸಮಿತಿಯ ಪದಾಧಿಕಾರಿಗಳಾದ ಅಶೋಕ ಶೆಟ್ಟಿ ಬಿರ್ಕಪು, ವಿಷ್ಣು ಭಟ್ ಕೊಮ್ಮುಂಜೆ , ಚಂದ್ರಶೇಖರ್ ಪಕಳಕುಂಜ,ಉದಯ ಶೆಟ್ಟಿ ಸಾಯ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸಣ್ಣ ಗುತ್ತುರವರು ಸ್ವಾಗತಿಸಿ ವಂದಿಸಿದರು. ರವಿ ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here