ಪುತ್ತೂರು: ಕರ್ನಾಟಕ ಇಂಟರ್ಗೆಟೆಡ್ ಡೆವಲಪ್ಮೆಂಟ್ ಸೊಸೈಟಿ – ಕಿಡ್ಸ್ ಸಂಸ್ಥೆಯ ನೇತೃತ್ವದಲ್ಲಿ, ಕಾರಿತಾಸ್ ಇಂಡಿಯಾ ಸಂಸ್ಥೆಯ ಸಹಕಾರದಲ್ಲಿ ಫೆ.4ರಂದು ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಬಕ ಅಂಗನವಾಡಿ ಕೆಂದ್ರ ಹಾಗೂ ಕ್ಯಾಂಟವ್ಸ್ ಇನ್ನೋವೇಟಿವ್ಸ್ ಪ್ರಾಜೆಕ್ಟ್, ಫಾದರ್ ಪಾತ್ರವೋ ಹಾಸ್ಪಿಟಲ್‌ನಲ್ಲಿ ಕ್ಯಾನ್ಸರ್ ರೋಗದ ಕುರಿತು ಮಾಹಿತಿ, ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಬಕ ಅಂಗನವಾಡಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಬಕ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಚನಾ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು. ಕ್ಯಾಂಟವ್ಸ್ ಇನ್ನೋವೇಟಿವ್ಸ್ ಪ್ರಾಜೆಕ್ಟ್, ಫಾದರ್ ಪತ್ರಾವೋ ಹಾಸ್ಪಿಟಲ್‌ನಲ್ಲಿ ಶ್ಯಾಮ ಪುಂಜತ್ತೋಡಿರವರು ಮಾಹಿತಿ ಜಾಗೃತಿ ನೀಡುವುದರರ ಜೊತೆಗೆ ಕ್ಯಾನ್ಸರ್ ನಿರ್ಮೂಲನೆಗೆ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಘೋಷವಾಕ್ಯಗಳನ್ನು ಸಾರಲಾಯಿತು.
ವಿಶ್ವ ಕ್ಯಾನ್ಸರ್ ದಿನದ ಕಾರ್ಯಕ್ರಮದಲ್ಲಿ ಕಿಡ್ಸ್ ಸಂಸ್ಥೆಯ ಸ್ಪರ್ಶ ಯೋಜನೆಯ ಸಂಯೋಜಕ ಶ್ಯಾಮರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರಿತಾಸ್ ಇಂಡಿಯಾದ ಸಹಕಾರದಲ್ಲಿ ನಡೆಯುತ್ತಿರುವ ಸ್ಪರ್ಶ – ಕ್ಯಾನ್ಸರ್ ಅಭಿಯಾನದ ಬಗ್ಗೆ ತಿಳಿಸಿದರು. ಅಂಗನವಾಡಿ ಕೇಂದ್ರದ ಸಿಬ್ಬಂದಿ, ಕ್ಯಾಂಟವ್ಸ್ ಇನ್ನೋವೇಟಿವ್ಸ್ ಪ್ರಾಜೆಕ್ಟ್‌ನ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.