





ಪುತ್ತೂರು: ಚೆಕ್ ಅಮಾನ್ಯ ಪ್ರಕರಣದ ಅಪರಾಧಿಯೋರ್ವನಿಗೆ ಶಿಕ್ಷೆ ವಿಧಿಸಿ ಪುತ್ತೂರು ನ್ಯಾಯಾಲಯ ಫೆ.13ರಂದು ತೀರ್ಪು ನೀಡಿದೆ.
ನವಚೇತನ ಚಿಟ್ಸ್ ಕಂಪನಿಯ ಮೂಲಕ ಅದರ ಗ್ರಾಹಕ ಸುಳ್ಯ ತಾಲೂಕಿನ ಆರಂತೋಡು ನಿವಾಸಿ ವೆಂಕಟ್ರಮಣ ಬಿ. ಎಂಬವರು 2012ನೇ ಇಸವಿಯಲ್ಲಿ ಬಿಡ್ ಮೂಲಕ ಪಡೆದಿದ್ದ ಸಾಲದ ಪೈಕಿ ಉಳಿಕೆಯ 36,490 ರೂ ಸಾಲದ ಮರು ಪಾವತಿಗಾಗಿ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಕುರಿತು 2014ರಲ್ಲಿ ಕೇಸು ದಾಖಲಾಗಿ ವಿಚಾರಣೆ ಆರಂಭಗೊಂಡಿತ್ತು. ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಫೆ.13ರಂದು ತೀರ್ಪು ಪ್ರಕಟಿಸಿದೆ. ಆರೋಪಿ ವೆಂಕಟ್ರಮಣ ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಧೀಶರು ವೆಂಕಟ್ರಮಣ ಅವರಿಗೆ ರೂ 41, 490 ರೂ ದಂಡ ವಿಧಿಸಿದ್ದು ಇದರಲ್ಲಿ 36,490 ರೂಪಾಯಿ ನವಚೇತನ ಚಿಟ್ ಕಂಪನಿಗೆ ಪಾವತಿಸಬೇಕು. ಉಳಿದ 5 ಸಾವಿರ ರೂ ಹಣವನ್ನು ಸರಕಾರಕ್ಕೆ ಪಾವತಿ ಮಾಡಬೇಕು. ಇಲ್ಲದೇ ಇದ್ದಲ್ಲಿ ಒಂದು ವರ್ಷ ಸಾಮಾನ್ಯ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ. ನವಚೇತನ ಚಿಟ್ಸ್ ಕಂಪನಿಯ ಪರವಾಗಿ ಖ್ಯಾತ ವಕೀಲರಾದ ಕಜೆ ಲಾ ಛೇಂಬರ್ಸ್ ಮುಖ್ಯಸ್ಥ ಮಹೇಶ್ ಕಜೆ ವಾದಿಸಿದ್ದರು.











