ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಸ್ಟೀಲ್ ಉದ್ಯಮದಲ್ಲಿ ಮನೆಮಾತಾಗಿರುವ ಕ್ರಿಶಲ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆಯಾಗಿ ಸ್ಟೇನ್‌ಲೆಸ್ ಸ್ಟೀಲ್, ಪಾತ್ರೆಗಳು ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಕರು ಹಾಗೂ ವಿತರಕ ಸಂಸ್ಥೆ ‘ಕ್ರಿಶಲ್ ಸ್ಟೀಲ್ಸ್’ ಸಂಸ್ಥೆಯು ಫೆ.16ರಂದು ಬೊಳುವಾರು ಸೂರ್ಯಪ್ರಭಾ ಕಾಂಪ್ಲೆಕ್ಸ್‌ನ ಎದುರುಗಡೆಯ ತಾಜ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ಮಾಲಕ ಕಿರಣ್ ಡಿ’ಸೋಜ ನೀರ್ಪಾಜೆರವರ ತಾಯಿ ಹಿಲ್ಡಾ ಡಿ’ಸೋಜ, ಮಕ್ಕಳಾದ ಆಂಟು, ಕ್ರಿಶಲ್ ತಾನಿಯಾರವರು ಜೊತೆಗೂಡಿ ರಿಬ್ಬನ್ ಕತ್ತರಿಸಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು, ಪ್ರಸ್ತುತ ಬೆಂಗಳೂರಿನ ಸೈಂಟ್ ಆಂಟನಿ ಫ್ರಾಯರಿ ಚರ್ಚ್‌ಗೆ ವರ್ಗಾವಣೆಗೊಳ್ಳಲಿರುವ ಪ್ರಶಾಂತ್ ಫೆರ್ನಾಂಡೀಸ್ ಹಾಗೂ ಬನ್ನೂರು ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ಆಗಮಿಸಲಿರುವ ಬಾಲ್ತಜಾರ್ ಪಿಂಟೋರವರು ನೂತನ ಸಂಸ್ಥೆಗೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚನಗೈಯ್ದರು.
ಬಳಿಕ ಮಾತನಾಡಿದ ಬನ್ನೂರು ಚರ್ಚ್‌ನ ನಿರ್ಗಮಿತ ಧರ್ಮಗುರು ಪ್ರಶಾಂತ್ ಫೆರ್ನಾಂಡೀಸ್‌ರವರು, ಕಿರಣ್‌ರವರು ಅನೇಕ ಚಿಂತನೆಗಳೊಂದಿಗೆ, ಕನಸುಗಳೊಂದಿಗೆ ನೂತನ ಸಂಸ್ಥೆಯನ್ನು ಆರಂಭಿಸಿರುತ್ತಾರೆ. ಯಾವುದೇ ಕಾರ್ಯವನ್ನು ದೇವರ ಹೆಸರಿನಲ್ಲಿ ಆರಂಭಿಸಿದರೆ ಅದು ಉತ್ತಮವಾಗಿ ನೆರವೇರಲ್ಪಡುವುದು ಮತ್ತು ಮುಂದಕ್ಕೆ ಕೊಂಡೊಯ್ಯಬಲ್ಲುದು. ಯಾವುದೇ ಉದ್ಯಮ ಆರಂಭ ಮಾಡಿದಾಗ ‘ರಿಸ್ಕ್’ ತೆಗೆದುಕೊಳ್ಳಬೇಕಂತೆ. ರಿಸ್ಕ್ ತೆಗೆದುಕೊಂಡಾಗ ಮಾತ್ರ ಏನಾದರೂ ಮಾಡಲು ಸಾಧ್ಯವಾಗುತ್ತದೆ. ನಾಳೆ ನೋಡೋಣ ಎಂದು ಕಾದರೆ ಏನೂ ಮಾಡಲು ಸಾಧ್ಯವಾಗದು. ಯಾವುದೇ ಕೆಲಸವಿರಲಿ, ತಾನು ಮಾಡಬಲ್ಲೆ ಎಂಬ ಧೈರ್ಯ ನಮ್ಮಲ್ಲಿದ್ದಾಗ ಯಶಸ್ಸು ನಿಶ್ಚಿತ. ಪ್ರತಿಭೆ ಎನ್ನುವುದು ದೇವರ ವರ. ನಮ್ಮಲ್ಲಿದ್ದ ಪ್ರತಿಭೆಯನ್ನು ತೋರ್ಪಡಿಸುವ ಮೂಲಕ ಸಾಧನೆ ಮಾಡಬೇಕಾಗುತ್ತದೆ ಎಂದು ಹೇಳಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ನಗರಸಭೆ ಸದಸ್ಯೆ ಗೌರಿ ಬನ್ನೂರು, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್, ಮನೋಹರ್ ರೈ, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಪ್ರೀಮಾ ಮೆಟಲ್ ಮಾರ್ಟ್‌ನ ಲ್ಯಾನ್ಸಿ ಮಸ್ಕರೇನ್ಹಸ್, ಸೋಜಾ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್, ನಿವೃತ್ತ ಸೈನಿಕ ಜ್ಯೋ ಡಿ’ಸೋಜ, ಬನ್ನೂರು ಸಂತ ಅಂತೋನಿ ಚರ್ಚ್‌ನ 21 ಆಯೋಗಗಳ ಸಂಚಾಲಕ ಹಾಗೂ ಮಾಜಿ ಉಪಾಧ್ಯಕ್ಷ ಜೆರಿ ಪಾಯಿಸ್, ಸೇಡಿಯಾಪು ಕೋಸ್ಟಲ್ ಕೊಕನೆಟ್ ಇಂಡಸ್ಟ್ರೀನ ಡೆನ್ನಿಸ್ ಮಸ್ಕರೇನ್ಹಸ್, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಆಂಬ್ರೋಸ್ ಮಸ್ಕರೇನ್ಹಸ್ ಚೆನ್ನಿಗಾರು, ಉಪ್ಪಿನಂಗಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ನಾಗಾರಾಜು, ಅನಿಲ್ ಪಾಯಿಸ್ ಸಾಮೆತ್ತಡ್ಕ, ಬೊಳುವಾರು ನ್ಯೂ ಕ್ರಿಶಲ್ ಚಿಕನ್ಸ್‌ನ ಲಿಯೋ ಕ್ರಾಸ್ತಾ, ಆಲ್ವಿನ್(ಅಲ್ಲು) ಗೊನ್ಸಾಲ್ವಿಸ್ ಬನ್ನೂರು, ವಿಜಿತ್ ಕ್ರಿಶಲ್, ಬೊಳುವಾರು ಆರ್.ಎಚ್ ಸೆಂಟರ್‌ನ ಗೋಪಾಲ್ ಎಂ.ಯು, ಚಿರಾಗ್ ವೇರ್ ಆಂಡ್ ಕೇರ್‌ನ ದಿಲೀಪ್, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಅಲೆಕ್ಸ್ ಗೊನ್ಸಾಲ್ವಿಸ್ ಕೃಷ್ಣನಗರ, ವಾಲ್ಟರ್ ಡಿ’ಸೋಜ ಸಿದ್ಯಾಲ, ಮೆಲ್ವಿನ್ ಪಾಯಿಸ್ ನೂಜಿ, ಸುದೇಶ್ ಪರ್ಲಡ್ಕ, ಆಂಬುಲೆನ್ಸ್ ಚಾಲಕ ಸಿರಾಜ್, ಗಂಗಾಧರ್ ಎಲಿಕ, ಅಮರನಾಥ ಗೌಡ, ಇಸಾಕ್ ಸಾಲ್ಮರ, ನಮ್ಮ ಸ್ಟುಡಿಯೋದ ತೋಮಸ್ ಗೊನ್ಸಾಲ್ವಿಸ್ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದ್ದಾರೆ.
ನೂತನ ಸಂಸ್ಥೆ ಕ್ರಿಶಲ್ ಸ್ಟೀಲ್ಸ್ ಮಾಲಕ ಕಿರಣ್ ಡಿ’ಸೋಜ ಹಾಗೂ ಸ್ಟೆಫಿ ಕಿರಣ್‌ರವರು ಸ್ವಾಗತಿಸಿ, ಗ್ರಾಹಕರ ಸಹಕಾರ ಕೋರಿದರು. ಕಿರಣ್ ಡಿ’ಸೋಜರವರ ಸಹೋದರ ಮರಿಯಾ ಅಲ್ಯೂಮಿನಿಯಂನ ಸಂತೋಷ್ ಡಿ’ಸೋಜರವರ ಪತ್ನಿ ಜೆಸಿಂತಾ ಡಿ’ಸೋಜರವರು ಕಾರ್ಯಕ್ರಮ ನಿರ್ವಹಿಸಿದರು.