ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಕಾಣಿಯೂರಿನ ಸುಶೀಲ ಪೆರ್ಲೋಡಿ ರಾಷ್ಟ್ರ ಮಟ್ಟಕ್ಕೆ

0

ಕಾಣಿಯೂರು : ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಕೋಲಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಫೆ.11 ಮತ್ತು 12ರಂದು ನಡೆದ ರಾಜ್ಯಮಟ್ಟದ 41ನೇ ಸಾಲಿನ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಕಾಣಿಯೂರು ಪೆರ್ಲೋಡಿ ಸುಶೀಲರವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 70ರ ವಯೋಮಾನದ 3ಕಿ.ಮೀ ವೇಗದ ನಡಿಗೆಯಲ್ಲಿ ಪ್ರಥಮ, 400ಮೀ ಓಟದಲ್ಲಿ ಪ್ರಥಮ ಹಾಗೂ 65ವಯೋಮಾನದ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿಕೊಂಡು ಬರುತ್ತಿರುವ ಸುಶೀಲರವರು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here