ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ನಾಲ್ಕು ಮಂದಿ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸುವ ವಿಜ್ಞಾನ ಪ್ರಾಜೆಕ್ಟ್ ಸಂಬಂಧಿ ಸ್ಪರ್ಧೆಯಲ್ಲಿ ಆಯ್ಕೆಯಾಗಿ Inspire Award – Manak ಗೆ ಭಾಜನರಾಗಿದ್ದಾರೆ.
ಪುತ್ತೂರಿನ ದಾರಂದಕುಕ್ಕು ನಿವಾಸಿ ಎಂ.ರವಿಕುಮಾರ್ ಹಾಗೂ ಆರ್.ಪದ್ಮಪ್ರಿಯಾ ದಂಪತಿ ಪುತ್ರ ಎಂಟನೆಯ ತರಗತಿ ವಿದ್ಯಾರ್ಥಿ ಸಮರ್ಥ ಆರ್, ಪುತ್ತೂರಿನ ಪರ್ಲಡ್ಕ ನಿವಾಸಿಗಳಾದ ಪ್ರವೀಣ್ ರಾವ್ ಯು ಹಾಗೂ ಸುಗಂಧಿನಿ ದಂಪತಿ ಪುತ್ರ, ಏಳನೆಯ ತರಗತಿ ವಿದ್ಯಾರ್ಥಿ ಪ್ರಿಯಾಂಶು ರಾವ್ ಯು, ಪುತ್ತೂರಿನ ನಿರಂಜನ್ ಪೋಳ್ಯ ಹಾಗೂ ವೀನಾ ಕೆ.ಎಸ್ ದಂಪತಿ ಪುತ್ರ ಇಶಾನ್ ಎಸ್ ಭಟ್ ಹಾಗೂ ಪುತ್ತೂರಿನ ಕೆಯ್ಯೂರು ನಿವಾಸಿಗಳಾದ ವೆಂಕಟಕೃಷ್ಣ ಶರ್ಮ ಎಂ ಹಾಗೂ ಸಾವಿತ್ರಿ ಎಂ ದಂಪತಿ ಪುತ್ರ ಎಂ.ಅವನೀಶ ಕೃಷ್ಣ ಅವರಿಗೆ ಈ ಪ್ರಶಸ್ತಿ ಲಭ್ಯವಾಗಿದೆ.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವ ನೆಲೆಯಲ್ಲಿ ಆಯೋಜಿಸಲಾಗುವ ಈ ಸ್ಪರ್ಧೆಯ ಮೊದಲ ಹಂತದಲ್ಲಿ ಆಯ್ಕೆಯಾದ ಈ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಾಜೆಕ್ಟ್ ರೂಪಿಸಲು ತಲಾ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹಧನವನ್ನು ಈ ಪ್ರಶಸ್ತಿ ಒಳಗೊಂಡಿದೆ.