ಈಶ್ವರಮಂಗಲ ಪಾಳ್ಯತ್ತಡ್ಕದಲ್ಲಿ ಶಂಸುಲ್ ಉಲಮಾ ಅನುಸ್ಮರಣಾ ಸಮ್ಮೇಳನ, ಧಾರ್ಮಿಕ ಮತ ಪ್ರಭಾಷಣ
ಪವಾಡವೇ ಪಂಡಿತ ಶ್ರೇಷ್ಠರ ಮಾನದಂಡವಲ್ಲ-ಜಿಫ್ರಿ ತಂಙಳ್

0

ಚಿತ್ರ: ಯೂಸುಫ್ ರೆಂಜಲಾಡಿ

ಪುತ್ತೂರು: ಶಂಸುಲ್ ಉಲಮಾ ಅವರು ಮಹಾನ್ ಪಂಡಿತರಾಗಿದ್ದು ಅವರ ಜೀವನ ವಿಧಾನ ಮತ್ತು ಸಂದೇಶಗಳು ನಮಗೆಲ್ಲಾ ಆದರ್ಶ. ಅವರ ಪಾಂಡಿತ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ಮಾದರಿ ಪಂಡಿತರ ಹೆಸರಿನಲ್ಲಿ ಅನುಸ್ಮರಣೆ ನಡೆಸುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ, ಶಂಸುಲ್ ಉಲಮಾ ಯೂತ್ ವಿಂಗ್ ಪಾಳ್ಯತ್ತಡ್ಕ ಈಶ್ವರಮಂಗಲ ಇದರ ಆಶ್ರಯದಲ್ಲಿ ಶಂಸುಲ್ ಉಲಮಾ ಅನುಸ್ಮರಣಾ ಮಹಾ ಸಮ್ಮೇಳನ, ಮೌಲಿದ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ದಿನವಾದ ಫೆ.15ರಂದು ದುವಾಶೀರ್ವಚನ ನೀಡಿದರು.
ಪವಾಡ ಇದ್ದವರು ಮಾತ್ರ ಔಲಿಯಾಗಳಲ್ಲ. ಪವಾಡ ತೋರಿಸದ ಔಲಿಯಾಗಳೂ ಇದ್ದಾರೆ. ಔಲಿಯಾ ಅಲ್ಲದವರೂ ಪವಾಡ ತೋರಿಸುವವರು ಇಂದಿನ ಕಾಲಘಟ್ಟದಲ್ಲಿ ಇರಬಹುದು. ಹಾಗಾಗಿ ಪವಾಡಗಳ ಆಧಾರದಲ್ಲಿ ಪಂಡಿತರನ್ನು, ಔಲಿಯಾಗಳನ್ನು ಅಳೆಯಬಾರದು. ಪವಾಡವೇ ಪಂಡಿತ ಶ್ರೇಷ್ಠರ ಮಾನದಂಡವಲ್ಲ ಎಂದು ಜಿಫ್ರಿ ತಂಙಳ್ ಹೇಳಿದರು.

ಶಂಸುಲ್ ಉಲಮಾರ ಚರಿತ್ರೆ ತಿಳಿದುಕೊಳ್ಳಬೇಕು-ಉಸ್ಮಾನುಲ್ ಫೈಝಿ
ದುವಾ ನೆರವೇರಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ಮಾತನಾಡಿ ಶಂಸುಲ್ ಉಲಮಾರಂತಹ ಮಹಾನುಭಾವರನ್ನು ಅನುಸ್ಮರಣೆ ಮಾಡುವುದೆಂದರೆ ಅವರ ಚರಿತ್ರೆ ತಿಳಿದು ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಿದರೆ ಅದು ದೊಡ್ಡ ಸಾರ್ಥಕತೆ ಕಾಣಲಿದೆ ಎಂದು ಹೇಳಿದರು.

ಧಾರ್ಮಿಕ ಕೇಂದ್ರಗಳಿಗೆ ಸಹಾಯ ಪುಣ್ಯದ ಕಾರ್ಯ-ಬಂಬ್ರಾಣ
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ ಮಾತನಾಡಿ ಮಸೀದಿ, ಮದ್ರಸ, ಧಾರ್ಮಿಕ ಕೇಂದ್ರಗಳಿಗೆ ಸಹಾಯ ಮಾಡುವುದು ಪುಣ್ಯದ ಕಾರ್ಯವಾಗಿದ್ದು ಅಲ್ಲಾಹು ಇಷ್ಟಪಡುವ ಕಾರ್ಯವೂ ಆಗಿದೆ. ಹಾಗಾಗಿ ಅಂತಹ ಅವಕಾಶಗಳನ್ನು ಯಾರೂ ಕಳೆದುಕೊಳ್ಳಬಾರದು ಎಂದು ಹೇಳಿದರು.

ಷಡ್ಯಂತ್ರಗಳನ್ನು ಸೋಲಿಸಬೇಕಿದೆ-ಹನೀಫ್ ಹುದವಿ
ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ಒಂದು ಸಮುದಾಯದ ಉನ್ನತೀಕರಣವನ್ನು ವಿವಿಧ ಕ್ಷೇತ್ರಗಳಲ್ಲಿ ತಡೆಯುವ ಪ್ರಯತ್ನಗಳು ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಪ್ರಜ್ಞಾವಂತ ಜನತೆ ಜಾಗ್ರತೆ ವಹಿಸುವ ಮೂಲಕ ಅಂತಹ ಷಡ್ಯಂತ್ರಗಳನ್ನು ಸೋಲಿಸಲು ಒಗ್ಗಟ್ಟಿನ ಚಿಂತನೆ ನಡೆಸಬೇಕಿದೆ. ಶಂಸುಲ್ ಉಲಮಾರವರ ಜೀವನ ನಮಗೆಲ್ಲಾ ಸಂದೇಶವಾಗಿದೆ ಎಂದವರು ಹೇಳಿದರು.

ಸಮಸ್ತದೊಂದಿಗೆ ಸೇರಿದರೆ ಮಕ್ಕಳು ದಾರಿ ತಪ್ಪಲ್ಲ-ಅನೀಸ್ ಕೌಸರಿ
ಕುಂಬ್ರ ಕೆಐಸಿ ವಿದ್ಯಾಸಂಸ್ಥೆಯ ಪ್ರೊ.ಅನೀಸ್ ಕೌಸರಿ ಮಾತನಾಡಿ ಶಂಸುಲ್ ಉಲಮಾ ನಮ್ಮ ಕೈಗೆ ಕೊಟ್ಟು ಹೋಗಿರುವ ಈ ಸಮಸ್ತದ ಯಾವುದೇ ಪೋಷಕ ಘಟಕದೊಂದಿಗೆ ನಿಮ್ಮ ಮಕ್ಕಳನ್ನು ಸೇರಿಸಿದರೆ ಅವರು ದಾರಿ ತಪ್ಪಲಾರರು. ಸಾಮಾಜಿಕವಾಗಿ ಧಾರ್ಮಿಕವಾಗಿ, ಅಲ್ಲಾಹನ ದೀನ್‌ಗೆ ಬೇಕಾಗಿ ಕೆಲಸ ನಿವಹಿಸುವ ಈ ದೇಶದ ಕಾನೂನನ್ನು ಗೌರವಿಸುವ ವ್ಯಕ್ತಿಗಳಾಗಿ ಅವರು ಹೊರ ಹೊಮ್ಮಲಿದ್ದಾರೆ ಎಂದು ಅವರು ಹೇಳಿದರು.

ಮದರಸ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ-ನಝೀರ್ ಅಝ್‌ಹರಿ
ಸ್ಥಳೀಯ ಖತೀಬ್ ನಝೀರ್ ಅಝ್‌ಹರಿ ಬೊಳ್ಮಿನಾರ್ ಮಾತನಾಡಿ ಇಲ್ಲಿ ಸುಂದರವಾದ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಉದ್ದೇಶಿಸಿದ್ದು ಸಮಸ್ತ ಅಧೀನದ ಅಲ್ ಬಿರ್ರ್, ಪ್ಲಸ್ ಒನ್, ಪ್ಲಸ್ ಟು, ಡಿಗ್ರಿ ಅದಲ್ಲದೇ ಒಂದನೇ ತರಗತಿಯಿಂದ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಾರಂಭಿಸುವ ಮಹತ್ವದ ಉದ್ದೇಶ ನಮಗಿದೆ. ಅದಕ್ಕೆ ಈಗಾಗಲೇ ಹಲವರು ಉತ್ತಮ ಸಹಕಾರ ನೀಡಿದ್ದು ಮುಂದಕ್ಕೆ ತಮ್ಮೆಲ್ಲರ ಸಹಕಾರ ಬಯಸುತ್ತಿದ್ದೇವೆ ಎಂದು ಹೇಳಿದರು.

ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ ಜಿಲ್ಲಾಧ್ಯಕ್ಷ ಶಂಸುದ್ದೀನ್ ದಾರಿಮಿ ಪಡುಮಲೆ ಶುಭ ಹಾರೈಸಿದರು.

ಶಂಸುಲ್ ಉಲಮಾರ ಪಾಂಡಿತ್ಯವನ್ನು ವರ್ಣಿಸಲು ಸಾಧ್ಯವಿಲ್ಲ-ಓಣಂಪಿಳ್ಳಿ
ಮುಖ್ಯ ಪ್ರಭಾಷಣ ನಡೆಸಿದ ಅಡ್ವೊಕೇಟ್ ಓಣಂಪಿಳ್ಳಿ ಮುಹಮ್ಮದ್ ಫೈಝಿಯವರು ಶಂಸುಲ್ ಉಲಮಾ ಪ್ರತಿಯೊಂದು ವಿಚಾರವನ್ನು ಆಳವಾಗಿ ತಿಳಿದುಕೊಂಡಿದ್ದ ಮಹಾನ್ ಪಂಡಿತರಾಗಿದ್ದು ಅವರ ಆಗಾಧ ಪಾಂಡಿತ್ಯತ ಬಗ್ಗೆ ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಶಂಸುಲ್ ಉಲಮಾ, ಕಣ್ಣಿಯತ್ ಉಸ್ತಾದ್ ಮೊದಲಾದವರ ಜೀವನ ವಿಧಾನವನ್ನು ತಿಳಿಯುವುದು ಅವಶ್ಯಕವಾಗಿದ್ದು ಭೌತಿಕ ಆಡಂಬರಗಳಿಗೆ ಕಣ್ಣೆತ್ತಿಯೂ ನೋಡದ ಅಂತಹ ಮಹಾನ್ ಸಾತ್ವಿಕರ ಆದರ್ಶಮಯ ಬದುಕು ನಮಗೆ ಮಾದರಿಯಾಗಿದೆ ಎಂದು ಹೇಳಿದರು.

ಸನ್ಮಾನ:
ಸಮಸ್ತ ಅಧ್ಯಕ್ಷ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್, ಸಮಸ್ತ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ, ಬಂಬ್ರಾಣ ಉಸ್ತಾದ್, ಅಡ್ವೊಕೇಟ್ ತ್ವಾಹಾ ಖಲೀಲ್ ಮುಂಡೋಳೆ, ಇಂಜಿನಿಯರ್ ನವಾಝ್, ಡಾ.ಮುಹಮ್ಮದ್ ಅಶ್ರಫ್ ಮೊದಲಾದವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸ್ವಾಗತ ಸಮಿತಿ ಚೇರ್‌ಮೆನ್ ಹಿರಾ ಅಬ್ದುಲ್ ಖಾದರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪಾಳ್ಯತ್ತಡ್ಕ ಮಸೀದಿ ಅಧ್ಯಕ್ಷ ಎನ್.ಎಸ್ ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಕೆ.ಎ ಸಿದ್ದೀಕ್, ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಪುತ್ತೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಮಾಡನ್ನೂರು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ, ಪ್ರಮುಖರಾದ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಮಂಗಳ ಅಬೂಬಕ್ಕರ್ ಹಾಜಿ ಬೆಳ್ಳಾರೆ, ಮಹಮ್ಮದ್ ಹಾಜಿ ಫೋರಿನ್, ಅಬ್ದುಲ್ ಅಝೀಝ್ ಹಾಜಿ ಮಾಡನ್ನೂರು, ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ, ಫಕ್ರುದ್ದೀನ್ ಹಾಜಿ ಕೊಯ್ಲ, ಅಬ್ದುಲ್ ಹಮೀದ್ ಫ್ಯಾಮಿಲಿ, ಹಮೀದ್ ಹಾಜಿ ಕನಕಮಜಲು, ಇಬ್ರಾಹಿಂ ಹಾಜಿ ಮಂಡೆಕೋಲ್, ಉಮರ್ ಹಾಜಿ ಉಪ್ಪಿನಂಗಡಿ, ಯೂಸುಫ್ ಹಾಜಿ ಕೊಟ್ಯಾಡಿ, ಆಲಿಕುಂಞಿ ಪಿಳಿಪ್ಪುಡೆ, ಆದಂ ದಾರಿಮಿ ಗಾಳಿಮುಖ, ಹಸೈನಾರ್ ಫೈಝಿ ಮರತ್ತೋಡ್, ಮಹಮ್ಮದ್ ಬಡಗನ್ನೂರು, ಹಸೈನಾರ್ ತೈವಳಪ್ಪ್, ಯೂಸುಫ್ ಪಾಟ್ರೋಡಿ, ನಿಝಾರ್ ಹಾಜಿ, ಪಿ.ಎ ಅಶ್ರಫ್ ಹಾಜಿ, ಲತೀಫ್ ಕೆ.ಎ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಬ್ದುಲ್ ರಹ್ಮಾನ್ ಫೈಝಿ ಮಾಡನ್ನೂರು, ಸಿಕೆ ಮಹಮ್ಮದ್ ದಾರಿಮಿ, ಮಹಮ್ಮದ್ ಫೈಝಿ ಊಜಂಪಾಡಿ, ಉಮರ್ ದಾರಿಮಿ ಸಾಲ್ಮರ, ಖಾದರ್ ಮುಸ್ಲಿಯಾರ್ ಮಂಡೆಕೋಲ್, ಹಾಶೀಂ ಅನ್ಸಾರಿ ಕಾವು, ಇಬ್ರಾಹಿಂ ದಾರಿಮಿ ಗಾಳಿಮುಖ, ಟಿ.ಎ ಅಬ್ದುಲ್ ಖಾದರ್ ಹಾಜಿ, ಕೆ.ಎಚ್ ಇಬ್ರಾಹಿಂ ಕುಕ್ಕಾಜೆ, ಅಬ್ದುಲ್ ರಹ್ಮಾನ್ ಹಾಜಿ ಮುಂಡೋಳೆ, ಅಬ್ದುಲ್ಲ ಮೌಲವಿ ಈಶ್ವರಮಂಗಲ, ಇಸ್ಮಾಯಿಲ್ ಹಾಜಿ ಕೊಂಕೆ, ಶಂಸುದ್ದೀನ್ ಈಂದುಮೂಲೆ, ಸಲಾಹುದ್ದೀನ್ ಪದಡ್ಕ, ಯೂಸುಫ್ ಮುಂಡೋಳೆ, ಇಬ್ರಾಹಿಂ ಬಿ.ಸಿ, ಅಝೀಝ್ ಮುಂಚಿಕಾನ, ನಾಸಿರ್ ದೇಲಂಪಾಡಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಕನ್ವೀನರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿದರು.

ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಬುರ್ಹಾನ್ ಅಲೀ ತಂಙಳ್ ಅಲ್ ಬುಖಾರಿ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲೀದ್ ಮಜ್ಲಿಸ್ ನಡೆಯಿತು.

ಉದ್ಘಾಟನಾ ಸಮಾರಂಭ:
ಫೆ.13ರಂದು ಸಂಜೆ ಧ್ವಜಾರೋಹಣವನ್ನು ಪಾಳ್ಯತ್ತಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಎನ್.ಎಸ್ ಅಬ್ದುಲ್ಲ ಹಾಜಿ ನೆರವೇರಿಸಿದರು.
ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಅವರು ದುವಾ ಮತ್ತು ಉದ್ಘಾಟನೆ ನೆರವೇರಿಸಿದರು. ಪಾಳ್ಯತ್ತಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಎನ್.ಎಸ್ ಅಬ್ದುಲ್ಲ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಮುಖ್ಯ ಪ್ರಭಾಷಣ ನಡೆಸಿದರು. ಪಾಳ್ಯತ್ತಡ್ಕ ಮಸೀದಿಯ ಪ್ರ.ಕಾರ್ಯದರ್ಶಿ ಕೆ.ಎ ಸಿದ್ದೀಕ್ ಸ್ವಾಗತಿಸಿದರು. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.

ಫೆ.14ರಂದು ದುವಾ ಮತ್ತು ಉದ್ಘಾಟನೆಯನ್ನು ಸಯ್ಯದ್ ಎನ್‌ಪಿಎಂ ಫಳುಲ್ ಹಾಮಿದ್ ಕೋಯಮ್ಮ ತಂಙಳ್ ಕುನ್ನುಂಗೈ ನೆರವೇರಿಸಿದರು. ಪಾಳ್ಯತ್ತಡ್ಕ ಶಂಸುಲ್ ಉಲಮಾ ಯೂತ್ ವಿಂಗ್‌ನ ಅಧ್ಯಕ್ಷ ಕೆ.ಎಚ್ ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಯು.ಕೆ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ನಡೆಸಿದರು. ಸ್ವಾಗತ ಸಮಿತಿಯ ವೈಸ್ ಕನ್ವೀನರ್ ಅಬ್ದುಲ್ ರಹ್ಮಾನ್ ಹೈತಮಿ ಸ್ವಾಗತಿಸಿದರು. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.

ಸೌಹಾರ್ದತೆಯ ಕೇಂದ್ರ:
ಈಶ್ವರಮಂಗಲ ಪಾಳ್ಯತ್ತಡ್ಕ ಸೌಹಾರ್ದತೆಯ ಊರಾಗಿದ್ದು ಶಾಂತಿ, ಸೌಹಾರ್ದತೆ ನೆಲೆ ನಿಲ್ಲಲು ಇಲ್ಲಿನ ಮಸೀದಿ, ಮದ್ರಸ ಶ್ರಮಿಸುತ್ತಿದೆ. ಎಲ್ಲಾ ಜಾತಿ, ಧರ್ಮದವರು ವಾಸಿಸುವ ಗಡಿ ನಾಡಿನ ಪ್ರದೇಶವಾಗಿರುವ ಇಲ್ಲಿ ಸುಸಜ್ಜಿತ ಮದರಸ ಕಟ್ಟಡ ನಿರ್ಮಾಣಗೊಳ್ಳಲಿದ್ದು ಅದು ಊರಿನ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ.
-ಎನ್.ಎಸ್ ಅಬ್ದುಲ್ಲ ಹಾಜಿ, ಅಧ್ಯಕ್ಷರು ಜೆ.ಎಂ ಪಾಳ್ಯತ್ತಡ್ಕ
-ಸಿದ್ದೀಕ್ ಕೆ.ಎ ಪ್ರ.ಕಾರ್ಯದರ್ಶಿ, ಜೆ.ಎಂ ಪಾಳ್ಯತ್ತಡ್ಕ

ರೂ.1 ಕೋಟಿ ವೆಚ್ಚದ ಮದರಸ ಕಟ್ಟಡ:
ನಾಗರಿಕತೆ ಬೆಳೆಸುವಲ್ಲಿ, ಸಂಸ್ಕಾರಯುತವಾಗಿ ಜೀವನ ನಡೆಸುವುದಕ್ಕೆ ಮತ್ತು ಸೌಹಾರ್ದತೆಯನ್ನು ಕಲಿಸಿಕೊಡುವ ಕೇಂದ್ರವಾಗಿದೆ ಮದರಸ. ಮದರಸದಲ್ಲಿ ಕಲಿತವರು ಧಾರ್ಮಿಕ ವಿದ್ಯೆಯನ್ನು ಪಡೆಯುವುದಲ್ಲದೇ ಉತ್ತಮ ನಾಗರಿಕನಾಗಿ ಜೀವನ ಸಾಗಿಸುವುದಕ್ಕೆ ಕಾರಣವಾಗುತ್ತದೆ. ಪಾಳ್ಯತ್ತಡ್ಕದಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯವಿರುವ ಸುವ್ಯವಸ್ಥಿತ ಮದರಸ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಎಲ್ಲರೂ ಸಹಕಾರ ನೀಡಬೇಕಾಗಿ ವಿನಂತಿ.
-ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಕನ್ವೀನರ್ ಸ್ವಾಗತ ಸಮಿತಿ

LEAVE A REPLY

Please enter your comment!
Please enter your name here