ಪುತ್ತೂರು: ಹನುಮಗಿರಿಯ ಅಮರಗಿರಿಯಲ್ಲಿ ಶ್ರೀ ಭಾರತೀ ಭಾರತ ಮಾತಾ ಮಂದಿರ ಲೋಕಾರ್ಪಣೆಯು ಫೆ.11 ರಂದು ನಡೆಯಿತು. ಅಮರಗಿರಿಯ ಕೆಲಸ ಕಾರ್ಯಗಳು ಕಳೆದ 3 ವರ್ಷಗಳಿಂದ ನಡೆದಿದ್ದು ಇದರ ಕೆಲಸ ಕಾರ್ಯಗಳಿಗೆ ಶ್ರಮಿಸಿದ ಕೆಲಸಗಾರರಿಗೆ ಕೃತಜ್ಞತಾ ಸಭೆಯು ಹನುಮಗಿರಿಯಲ್ಲಿ ನಡೆಯಿತು.
ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸಚಿವರಾದ ಅಮಿತ್ ಶಾರವರಿಂದ ಲೋಕಾರ್ಪಣೆಗೊಂಡ ಈ ಅಮರಜ್ಯೋತಿ ಮಂದಿರಕ್ಕೆ ದೇಶ ವಿದೇಶಗಳಲ್ಲಿ ಹೆಸರು ಬಂದಿದೆ. ಟ್ರಸ್ಟಿಗಳಿಗೆ ಮಾತ್ರವಲ್ಲ ಕೆಲಸ ಮಾಡಿದ ಕಾರ್ಮಿಕರು ಹಾಗೂ ಕಾರ್ಯಕರ್ತರಿಗೆ, ಸ್ವಯಂಸೇವಕರಿಗೆ ಗೌರವ ಸಿಕ್ಕಿದೆ. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ ಫಲವೆ ಇದಾಗಿದೆ ಎಂದು ಹೇಳಿ, ಸಹಕರಿಸಿದ ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮದವರು ಸೇರಿದಂತೆ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಕೆ.ಎಸ್. ಆರೆಂಜರ್ಸ್ ಸುಧೀರ್, ಸೆಂಟ್ರಿಂಗ್ನ ಗಫೂರ್, ರಾಮ ಮೇನಾಲ ಮೇಸ್ತ್ರಿ, ನಿಸರ್ಗ ಗಾರ್ಡನ್ನ ಶಿವ ಎಸ್ ಪೂಜಾರಿ, ಮಾಡಿನ ಕೆಲಸ ಪ್ರಶಾಂತ್ ಮತ್ತು ಅವರ ತಂಡ, ಶ್ರೀಧರ, ಚನಿಯ, ಯೋಗೀಶ, ಅಚ್ಚುತ, ಸಂತೋಷ್ ಅವರ ತಂಡ, ಸಂಜೀವ ಗೌಡ ಚಾಕೋಟೆ, ಶ್ರೀಧರ ಪೂಜಾರಿ, ತಾರನಾಥ ಆಚಾರ್ಯ, ದೀಕ್ಷಿತ್, ಜಯರಾಮ, ಜಿತೇಶ್ ಹಾಗೂ ಇನ್ನಿತರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಧರ್ಮದರ್ಶಿ ಶಿವರಾಮ್ ಪಿ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಧರ್ಮದರ್ಶಿ ಶಿವರಾಂ ಶರ್ಮ ವಂದಿಸಿದರು. ಧರ್ಮಶ್ರೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ್ ನಡುವಡ್ಕ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ರಾಕೇಶ್, ಸುನೀಲ್ ಸಹಕರಿಸಿದರು.