ನೆಲ್ಯಾಡಿ: ನೆಲ್ಯಾಡಿ ದುರ್ಗಾಶ್ರೀ ಟವರ‍್ಸ್‌ನಲ್ಲಿರುವ ಮುಳಿಯ ಸಿಲ್ವರಿಯಾ ಮಳಿಗೆಯಲ್ಲಿ ಫೆ.18ರಿಂದ 25ರ ತನಕ ನಡೆಯಲಿರುವ ’ಗೋಲ್ಡ್ ಚೈನ್ ಆಂಡ್ ಬ್ಯಾಂಗಲ್ ’ ಫೆಸ್ಟ್‌ಗೆ ಫೆ.18ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ನೆಲ್ಯಾಡಿ ರಾಮನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಆಶಾ ಜೋಗಿತ್ತಾಯ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆಶಾ ಜೋಗಿತ್ತಾಯ ಅವರು, ಚಿನ್ನಾಭರಣ ಮಾರಾಟದಲ್ಲಿ ಹೆಸರು ಪಡೆದಿರುವ ಮುಳಿಯ ಜ್ಯುವೆಲ್ಸ್‌ನವರ ಮಳಿಗೆ ನೆಲ್ಯಾಡಿಯಲ್ಲಿಯೂ ಆರಂಭಗೊಂಡಿರುವುದು ಬಹಳಷ್ಟು ಸಂತಸ ತಂದಿದೆ. ಹಿಂದೆ ಈ ಮಳಿಗೆಯಲ್ಲಿ ನಡೆದ ಕರಿಮಣಿ ಉತ್ಸವ ಗ್ರಾಹಕರನ್ನು ಬಹಳಷ್ಟು ಆಕರ್ಷಿಸಿತ್ತು. ಗ್ರಾಹಕರಿಗೆ ಹೊಸ ಹೊಸ ಕೊಡುಗೆ ನೀಡಬೇಕೆಂಬ ಹಿತದೃಷ್ಟಿಯಲ್ಲಿ ಈಗ ’ ಗೋಲ್ಡ್ ಚೈನ್ ಆಂಡ್ ಬ್ಯಾಂಗಲ್ ಫೆಸ್ಟ್ ’ ಆರಂಭಗೊಂಡಿರುವುದು ಈ ಭಾಗದ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮುಳಿಯ ಸಂಸ್ಥೆ ಕೇವಲ ವ್ಯವಹಾರ ಮಾತ್ರವಲ್ಲ. ಹಲವಾರು ಸಮಾಜಮುಖಿ ಕಾರ್ಯಕ್ರಮವೂ ಆಯೋಜಿಸುತ್ತಿದೆ. ಇಂತಹ ಸಂಸ್ಥೆ ಇನ್ನಷ್ಟೂ ಎತ್ತರಕ್ಕೆ ಏರಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೆಲ್ಯಾಡಿ ಜೇಸಿಐನ ಅಧ್ಯಕ್ಷರೂ ಆದ ಎಂ.ದಯಾಕರ ರೈ ಅವರು ಮಾತನಾಡಿ, ಮುಳಿಯ ಸಿಲ್ವರಿಯಾ ಮಳಿಗೆ ಬೆಳೆಯುತ್ತಿರುವ ನೆಲ್ಯಾಡಿಗೆ ಗರಿಮೆ ತಂದುಕೊಟ್ಟಿದೆ. ಮುಳಿಯ ಜ್ಯುವೆಲ್ಸ್‌ನ ಶಾಖೆಗಳೂ ಹೊರ ಜಿಲ್ಲೆಗೂ ವ್ಯಾಪಿಸಿರುವುದು ಈ ಊರಿಗೆ ಹೆಮ್ಮೆ ತಂದಿದೆ. ಈ ಸಂಸ್ಥೆ ವ್ಯವಹಾರದಲ್ಲಿ ಬಂದ ಲಾಭವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೂ ಬಳಕೆ ಮಾಡುತ್ತಿದೆ. ಆದ್ದರಿಂದ ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡುವವರನ್ನು ಪ್ರೋತ್ಸಾಹಿಸುವ ಬದಲು ನಮ್ಮ ಸಂಸ್ಥೆ ಎಂಬ ದೃಷ್ಟಿಯಿಂದ ಮುಳಿಯ ಜ್ಯುವೆಲ್ಸ್‌ನ ಜೊತೆ ವ್ಯವಹರಿಸುವುದರಿಂದ ಆ ಸಂಸ್ಥೆಗೆ ಮಾತ್ರವಲ್ಲ. ಈ ಊರಿಗೂ, ಇಲ್ಲಿನ ಜನರಿಗೂ ಪ್ರಯೋಜನ ಸಿಗಲಿದೆ ಎಂದರು.
ಮುಳಿಯ ಜ್ಯುವೆಲ್ಸ್‌ನ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ, ಇತಿಹಾಸದಲ್ಲಿ ಚಿನ್ನ ಹಾಗೂ ಬೆಳ್ಳಿಗೆ ವಿಶೇಷ ಸ್ಥಾನವಿದೆ. ಸಂಸ್ಕೃತಿ, ಸಂಪ್ರದಾಯದಲ್ಲೂ ಚಿನ್ನಕ್ಕೆ ಬೆಲೆ ಕೊಡುತ್ತೇವೆ. ಚಿನ್ನವನ್ನು ಲಕ್ಷ್ಮೀ ಎಂದೇ ಪೂಜಿಸುತ್ತೇವೆ. ಚಿನ್ನ ದಿನನಿತ್ಯ ಜೀವನದಲ್ಲಿಯೂ ಬಳಕೆಯಾಗುವ ವಿಶಿಷ್ಠ ಲೋಹ ಆಗಿದೆ. ಗ್ರಾಹಕರ ಬೇಡಿಕೆಯಂತೆ ನೆಲ್ಯಾಡಿಯಲ್ಲಿ 10 ತಿಂಗಳ ಹಿಂದೆ ಸಿಲ್ವರಿಯಾ ಮಳಿಗೆ ಆರಂಭಿಸಿದ್ದು ಇದಕ್ಕೆ ಇಲ್ಲಿನ ಜನತೆಯಿಂದ ಒಳ್ಳೆಯ ರೀತಿಯ ಪ್ರೋತ್ಸಾಹ ಸಿಕ್ಕಿದೆ. ಇಲ್ಲಿನ ಜನತೆಗೆ ಹೊಸತನ ನೀಡಬೇಕೆಂಬ ನಿಟ್ಟಿನಲ್ಲಿ ಪ್ರತಿಸಲವೂ ವಿನೂತನ ಶೈಲಿಯ ಆಭರಣ ಅನಾವರಣಗೊಳಿಸಿ ಪ್ರದರ್ಶನ ನೀಡುತ್ತಿದೆ. ಇದೀಗ ಬಳೆ ಹಾಗೂ ಚೈನ್ ಉತ್ಸವಕ್ಕೆ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿಯೇ ಚಾಲನೆ ನೀಡಲಾಗಿದೆ. ಇಲ್ಲಿ 48 ಗಂಟೆಯೊಳಗೆ ಆಭರಣ ಡಿಸೈನ್ ಮಾಡಿಕೊಡುವ ವ್ಯವಸ್ಥೆಯೂ ಇದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಚಿನ್ನದ ವ್ಯಾಲ್ಯೂ ಹೆಚ್ಚುತ್ತಲೇ ಇದೆ. 2000ನೇ ಇಸವಿಯಲ್ಲಿ 1 ಗ್ರಾಂ. ಚಿನ್ನಕ್ಕೆ 1200 ರೂ.ಇತ್ತು. 2020ನೇ ಇಸವಿಗೆ ಚಿನ್ನದ ಬೆಲೆ ನಾಲ್ಕು ಪಟ್ಟ ಏರಿಕೆಯಾಗಿದೆ. 203೦ರಲ್ಲಿ 1 ಗ್ರಾಂ.ಗೆ 9 ಸಾವಿರ ರೂ.ಆಗಲೂಬಹುದು. ಚಿನ್ನ ಮೌಲ್ಯವರ್ಧನೆ ಆಗುತ್ತಲೇ ಇದೆ. ಮುಳಿಯದಲ್ಲಿ ಗ್ರಾಹಕರಿಗೆ ಉತ್ತಮ ಸರ್ವೀಸ್, ವಿಶ್ವಾಸಭರಿತ ಸೇವೆ ನೀಡುತ್ತಿದ್ದೇವೆ. ಗ್ರಾಹಕರ ಪ್ರೋತ್ಸಾಹವನ್ನು ಎಂದಿಗೂ ಬಯಸುತ್ತೇವೆ ಎಂದರು.
ಮುಳಿಯ ಪುತ್ತೂರು ಮಳಿಗೆಯ ವ್ಯವಸ್ಥಾಪಕ ನಾಮ್‌ದೇವ್ ಮಲ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 10 ವರ್ಷದ ಹಿಂದೆ ನೆಲ್ಯಾಡಿಯಲ್ಲಿ ಆಭರಣ ಸಂಗ್ರಹ ಯೋಜನೆಯ ಕಂತುಪಾವತಿ ಕೇಂದ್ರ ಆರಂಭಿಸಿದ್ದೇವು. ಆ ಬಳಿಕ ಗ್ರಾಹಕರಿಂದ ಬಂದ ಬೇಡಿಕೆಯಂತೆ 10 ತಿಂಗಳ ಹಿಂದೆ ಸಿಲ್ವರಿಯಾ ಮಳಿಗೆ ಆರಂಭಿಸಿದ್ದೇವೆ. ಈ ಮಳಿಗೆಯಲ್ಲಿ ಆಯೋಜಿಸಿದ್ದ ಕರಿಮಣಿ ಉತ್ಸವಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಗೋಲ್ಡ್ ಚೈನ್ ಆಂಡ್ ಬ್ಯಾಂಗಲ್ ಉತ್ಸವ ಆರಂಭಿಸಿದ್ದು ಫೆ.25ರ ತನಕ ನಡೆಯಲಿದೆ. ಈ ಉತ್ಸವದಲ್ಲಿ 1 ಗ್ರಾಂ.ನಿಂದ ಆರಂಭಗೊಂಡು 80ಗ್ರಾಂ.ನ ತನಕದ 300ಕ್ಕೂ ಹೆಚ್ಚು ಡಿಸೈನ್‌ಗಳ ಚೈನ್ ಲಭ್ಯವಿದೆ. ಅಲ್ಲದೇ ನಿತ್ಯ ಬಳಕೆಗೆ ಬಳೆಗಳನ್ನು 18 ಕ್ಯಾರೆಟ್‌ನಲ್ಲಿ ಮಾಡಿಕೊಡುತ್ತೇವೆ. ಕೆಲವೊಂದು ಡಿಸೈನ್‌ಗಳನ್ನು 48 ಗಂಟೆಯೊಳಗೆ ಮಾಡಿಕೊಡುತ್ತೇವೆ. ಗ್ರಾಹಕರು ಈ ಪ್ರದರ್ಶನ ಮತ್ತು ಮಾರಾಟವನ್ನು ಯಶಸ್ವಿಗೊಳಿಸುವಂತೆ ಹೇಳಿದರು.
ನೆಲ್ಯಾಡಿಯ ಮುಳಿಯ ಸಿಲ್ವರಿಯಾ ಮಳಿಗೆಯ ವ್ಯವಸ್ಥಾಪಕ ಅಶೋಕ್ ಸ್ವಾಗತಿಸಿ, ಗಿರಿಯಪ್ಪ ವಂದಿಸಿದರು. ಹರಿಣಾಕ್ಷಿ ಪ್ರಾರ್ಥಿಸಿದರು. ಮುಳಿಯ ಜ್ಯುವೆಲ್ಸ್‌ನ ಮಾರ್ಕೆಟಿಂಗ್ ಮೇನೇಜರ್ ಸಂಜೀವ ಕೆ., ಸಿಬ್ಬಂದಿಗಳಾದ ಮುರಳಿ, ರಾಜೇಶ್, ದೀಪಕ್ ಸಹಕರಿಸಿದರು.
’ಗೋಲ್ಡ್ ಚೈನ್ ಆಂಡ್ ಬ್ಯಾಂಗಲ್’ ಫೆಸ್ಟ್‌ನಲ್ಲಿ ಗ್ರಾಹಕರು ವಿನಿಮಯ ಮಾಡಿಕೊಳ್ಳುವ ಆಭರಣಗಳಿಗೆ ಅತ್ಯುತ್ತಮ ಬೆಲೆ ನೀಡಲಾಗುತ್ತದೆ. ಬಳೆಗಳ ಮೇಲೆ ವಾ.ಶೇ.8ರಿಂದ ಹಾಗೂ ಚೆನ್‌ಗಳ ಮೇಲೆ ವಾ.ಶೇ.6ರಿಂದ ಪ್ರಾರಂಭವಾಗುತ್ತದೆ. ವೆರೈಟಿ ವಿನ್ಯಾಸದ ಆಕರ್ಷಕ ಚೈನ್‌ಗಳು ಮತ್ತು ನಿತ್ಯ ಬಳಕೆಯ 18 ಕ್ಯಾರೆಟ್ ಬಳೆಗಳ ಅತ್ಯುತ್ತಮ ಸಂಗ್ರಹವೂ ಇದೆ. ಗ್ರಾಹಕರ ನೆಚ್ಚಿನ ನಿತ್ಯ ಬಳಕೆಯ ಆಭರಣಗಳನ್ನು 48 ಗಂಟೆಗಳಲ್ಲಿ ತಯಾರಿಸಿ ಕೊಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ 9945032916 ಗೆ ಸಂಪರ್ಕಿಸಬಹುದಾಗಿದೆ.