ಪುತ್ತೂರು: ಬದುಕು ಸಮಾಜಕ್ಕಾಗಿ ಪ್ರಾಣ ದೇಶಕ್ಕಾಗಿ ಎಂಬ ಸಂದೇಶದೊಂದಿಗೆ ಕೇಂದ್ರ ಗೃಹಮಂತ್ರಿ ಅಮಿತ್ ಶಾರವರಿಂದ ಲೋಕಾರ್ಪಣೆಗೊಂಡಿರುವ ಅಮರಗಿರಿಯ ಲೆ.ಅರುಣ್ ಖೇತರ್ ಪಾಲ್ ವೇದಿಕೆಯಲ್ಲಿ ಹನುಮಗಿರಿ ಶ್ರೀಗಜಾನನ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶ್ರೀಗಜಾನನ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ ಶಾಮಣ್ಣ ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಂಸ್ಥಾನದ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಪರಮವೀರ ಚಕ್ರ ಪುರಸ್ಕೃತ ಖೇತರ್ ಪಾಲ್ ಸಾಧನೆ ದೇಶವೇ ಗೌರವಿಸುವಂತದ್ದು. ಹಾಗೇಯೇ ಇಲ್ಲಿ ಬೆಳಗುವ ಪ್ರತಿಭೆಗಳಿಗೆ ಅವರ ಸಾಧನೆಗಳಿಗೆ ಅನುಗುಣವಾಗಿ ಪುರಸ್ಕಾರಗಳು ಹರಿದು ಬರಲಿ ಎಂದು ಹಾರೈಸಿದರು.
ಶಿವರಾಮ ಪಿ, ನಿವೃತ್ತ ಮುಖ್ಯಗುರು ಶಿವರಾಮ ಶರ್ಮಾ ಉಪಸ್ಥಿತರಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಟ್ಟಾಭಿರಾಮ್ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಶಿಕ್ಷಕಿ ಸೌಮ್ಯ ಎ. ಹಾಗೂ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.