ಪೆರ್ನೆ ಮಾಡತ್ತಾರು ಸಪರಿವಾರ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಚಾಲನೆ

0

ಪುತ್ತೂರು: ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಪೆರ್ನೆ ಗ್ರಾಮದ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವಗಳ ಸಂಭ್ರಮಕ್ಕೆ ಫೆ.21ರಂದು ಅದ್ಧೂರಿ ಚಾಲನೆ ದೊರೆತಿದೆ.

ಬೆಳಿಗ್ಗೆ ಗೊನೆ ಮುರ್ಹೂತ ನಡೆದ ಬಳಿಕ ಉಗ್ರಾಣ ಮುಹೂರ್ತ ಹಾಗೂ ದೈವಸ್ಥಾನದ ಕಾರ್ಯಾಲಯದ ಉದ್ಘಾಟನೆಯೊಂದಿಗೆ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಚಾಲನೆ ದೊರೆಯಿತು. ಮೆಲ್ಕಾರ್ ವೈಭವ್ ಜ್ಯುವೆಲ್ಲರ್‍ಸ್‌ನ ಮ್ಹಾಲಕ ಯೋಗೀಶ್ ನಾಯಕ್ ಉಗ್ರಾಣ ಮುಹೂರ್ತ ನೆರವೇರಿಸಿದರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಕಾರ್ಯಾಲಯವನ್ನು ಉದ್ಘಾಟಿಸಿದರು. ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಸ್ವಾಮಿಜಿಯವರು ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹರಿದು ಬಂದ ಹಸಿರು, ಹೊರೆಕಾಣಿಕೆ:
ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ನಡೆದ ಹೊರೆಕಾಣಿಕೆ ಸಮರ್ಪಣೆಯಲ್ಲಿ ಊರ, ಪರವೂರ ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆಯ ಮಹಾಪೂರವೇ ಹರಿದುಬಂದಿದೆ. ವಿವಿಧ ರೀತಿಯ ಜಿನಸು ಸಾಮಾಗ್ರಿಗಳು, ಸೀಯಾಳ, ಬಾಳೆಗೊನೆ, ತೆಂಗಿನಕಾಯಿ, ವಿವಿಧ ತರಕಾರಿಗಳು, ಅಡಿಕೆ ಗೊನೆ ಸೇರಿದಂತೆ ವಿವಿಧ ವಸ್ತುಗಳು ಹರಿದು ಬಂದಿದೆ. ಗ್ರಾಮ ವಿವಿಧ ಮೂಲೆಗಳಿಂದ ಸಂಗ್ರಹಣೆಗೊಂಡ ಹೊರೆಕಾಣಿಕೆ ಪೆರ್ನೆ, ಕಡಂಬು ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ದೈವಸ್ಥಾನಕ್ಕೆ ಆಗಮಿಸಿದೆ. ದೈವಸ್ಥಾನದಲ್ಲಿ ಆರತಿ ಬೆಳಗಿ ಹೊರೆಕಾಣಿಕೆಯನ್ನು ಸ್ವಾಗತಿಸಲಾಯಿತು. ನೂರಾರು ವಾಹನಗಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗಿ ಬಂದವು. ಹೊರೆಕಾಣಿಕೆ ಸಮರ್ಪಣೆಯ ಬಳಿಕ ಲಘು ಉಪಹಾರ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ದೈವಸ್ಥಾನದ ಟ್ರಸ್ಟ್‌ನ ಗೌರವಾಧ್ಯಕ್ಷ ಈಶ್ವರಪ್ರಸನ್ನ ಪೆರ್ನೆಕೋಡಿ, ಅಧ್ಯಕ್ಷ ಕಿರಣ್ ಶೆಟ್ಟಿ ಮುಂಡೋವಿನಕೋಡಿ, ಕಾರ್ಯದರ್ಶಿ ಶಿವಪ್ಪ ನಾಯ್ಕ ಪರ್ನೆ, ಕಾರ್ಲ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here