ಪುತ್ತೂರು: ಪುತ್ತೂರಿನ ದರ್ಬೆ ನಿವಾಸಿ, ಪ್ರಸ್ತುತ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಪ್ರಕಾಶ್ ಡಿ’ಸೋಜರವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ಪ್ರಕಾಶ್ ಡಿ’ಸೋಜರವರು ಮಂಡಿಸಿದ ‘ಆನ್ ಇನ್ವೆಸ್ಟಿಗೇಶನ್ ಇಂಟು ದಿ ಪಾಸ್ಟ್ ಆಂಡ್ ಕರೆಂಟ್ ಸ್ಪೋರ್ಟ್ಸ್ ಮ್ಯಾನೇಜೆರಿಯಲ್ ಪ್ರ್ಯಾಕ್ಟೀಸಸ್ ಲೀಡಿಂಗ್ ಟು ಎಕ್ಸಿಸ್ಟೆಂಟ್ ಸ್ಪೋರ್ಟ್ಸ್ ಪರ್ಫಾಮೆನ್ಸಸ್ ಇನ್ ಸೆಲೆಕ್ಟೆಡ್ ಕಾಲೇಜಸ್ ಆಫ್ ದಕ್ಷಿಣ ಕನ್ನಡ ಆಂಡ್ ಉಡುಪಿ ಡಿಸ್ಟ್ರಿಕ್ಟ್’ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್(ಪಿ.ಎಚ್.ಡಿ) ಪದವಿ ನೀಡಿ ಗೌರವಿಸಿದೆ.
ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು, ಅಧ್ಯಕ್ಷರು ಹಾಗೂ ಶಿಕ್ಷಣ ನಿಕಾಯದ ಡೀನ್ ಆಗಿರುವ ಡಾ|ಜೆರಾಲ್ಡ್ ಸಂತೋಷ್ ಡಿ’ಸೋಜರವರು ಮಾರ್ಗದರ್ಶನ ನೀಡಿರುತ್ತಾರೆ.
ದಿ|ಸೆಬಾಸ್ಟಿಯನ್ ಹಾಗೂ ಐರಿನ್ ದಂಪತಿ ಪುತ್ರರಾಗಿರುವ ಡಾ|ಪ್ರಕಾಶ್ ಡಿ’ಸೋಜರವರು ಮಾಯಿದೆ ದೇವುಸ್ ಚರ್ಚ್ ಅಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸದಸ್ಯರಾಗಿದ್ದು, ಪತ್ನಿ ಎಲಿಜಬೆತ್ ಪಿ.ವಿ, ಪುತ್ರರಾದ ಅರ್ಲಿನ್ ಜೋವಿಯಲ್, ಅಲನ್ ಜೋಶ್ಟಲ್ ರವರೊಂದಿಗೆ ದರ್ಬೆ ಎಂಬಲ್ಲಿ ವಾಸವಾಗಿದ್ದಾರೆ.