ಕುಂಬ್ರ: ಶ್ರೀ ಸದಾಶಿವ ಭಜನಾ ಮಂದಿರದ 31 ನೇ ವಾರ್ಷಿಕೋತ್ಸವ ಸಂಭ್ರಮ – ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಆಶ್ಲೇಷ ಬಲಿ, ಯಕ್ಷಗಾನ ಬಯಲಾಟ

0

ಪುತ್ತೂರು: ಒಳಮೊಗ್ರು ಗ್ರಾಮದ ಸದಾಶಿವನಗರದ ಶ್ರೀ ಸದಾಶಿವ ಭಜನಾ ಮಂದಿರದ 31 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಆಶ್ಲೇಷ ಬಲಿ ಹಾಗೂ ಕಟೀಲು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಫೆ.23 ರಂದು ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಸಂಪ್ಯ ಉದಯ ಭಟ್ ಮತ್ತು ಬಳಗದವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಿಗ್ಗೆ ಗಣಪತಿ ಹೋಮ ನಡೆದು ಬಳಿಕ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಆಶ್ಲೇಷ ಬಲಿ ಆರಂಭಗೊಂಡು ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಊರ ಪರವೂರ ನೂರಾರು ಭಕ್ತರು ಸೇರಿದಂತೆ ನೂರಾರು ಭಕ್ತರು ಶ್ರೀ ದೇವರ ಗಂಧಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು.

ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಆಳ್ವ ಕಲ್ಲಡ್ಕ, ಕಾರ್ಯದರ್ಶಿ ಅಕ್ಷಯ್ ಬಿ.ಎನ್, ಉಪಾಧ್ಯಕ್ಷ ವಿಶ್ವನಾಥ ಕುಲಾಲ್, ಜತೆ ಕಾರ್ಯದರ್ಶಿ ಶಶಾಂಕ್ ರೈ ಹಾಗೂ ಉತ್ಸವ ಸಮಿತಿ ಗೌರವ ಸಲಹೆಗಾರರಾದ ಸೀತಾರಾಮ ರೈ ಚೆಲ್ಯಡ್ಕ ಕೈಕಾರ, ಸೀತಾರಾಮ ರೈ ಇಡಿಂಜಿಲ, ವಸಂತ ಗೌಡ ಉರುವ, ವೆಂಕಪ್ಪ ಗೌಡ ಬೊಳ್ಳಾಡಿ, ದುರ್ಗಾಪ್ರಸಾದ್ ರೈ ಕುಂಬ್ರ, ಬಾರಿಕೆ ನಾರಾಯಣ ರೈ, ಪ್ರೇಮ್‌ರಾಜ್ ರೈ ಪರ್ಪುಂಜ, ಗೌರವ ಅಧ್ಯಕ್ಷರುಗಳಾದ ಮಿತ್ರದಾಸ ರೈ ಡೆಕ್ಕಳ, ಹೊನ್ನಪ್ಪ ಗೌಡ ಇಡಿಂಜಿಲ, ಅಧ್ಯಕ್ಷ ಶ್ರೀನಿವಾಸ ರೈ ಕುಂಬ್ರ, ಕಾರ್ಯದರ್ಶಿಗಳಾದ ಜಯರಾಮ ರೈ ನೀರ್ಪಾಡಿ, ಸುನಿಲ್ ರೈ ಹಾಗೂ ಸಮಿತಿಯ ಸರ್ವ ಪದಾಧಿಕಾರಿಗಳು, ಸದಸ್ಯರುಗಳು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಅಧ್ಯಕ್ಷ ರಮೇಶ್ ಆಳ್ವ ಕಲ್ಲಡ್ಕರವರು ಭಕ್ತಾದಿಗಳನ್ನು ಸ್ವಾಗತಿಸಿ, ದೇವರ ಪ್ರಸಾದ ನೀಡಿ ಸತ್ಕರಿಸಿದರು.


ಯಕ್ಷಗಾನ ಬಯಲಾಟ
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ ನಡೆದ ಯಕ್ಷಗಾನ ಬಯಲಾಟಕ್ಕೆ ಊರಪರವೂರ ನೂರಾರು ಯಕ್ಷಗಾನ ಅಭಿಮಾನಿಗಳು ಆಗಮಿಸಿ ಯಕ್ಷಗಾನ ವೀಕ್ಷಿಸಿದರು.

LEAVE A REPLY

Please enter your comment!
Please enter your name here