ಒಂದೇ ಸೂರಿನಡಿಯಲ್ಲಿ ಉಚಿತ ವೈದ್ಯಕೀಯ ಸೌಲಭ್ಯಗಳ, ಸೇವಾ ಯೋಜನೆಗಳ ‘ರೋಟರಿ ಪುತ್ತೂರು ಸೇವಾ ಉತ್ಸವ್’ ಯಶಸ್ವಿ

0

ಸೇವಾ ಕಾರ್ಯ ಮಾಡಿದಾಗ ಸಮಾಜಕ್ಕೆ ಉತ್ತಮ ಸಂದೇಶ ರವಾನೆ-ಪ್ರಕಾಶ್ ಕಾರಂತ್

ಪುತ್ತೂರು: ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಆತ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕಾಗುತ್ತದೆ. ಈ ಮೂಲಕ ರೋಟರಿ ಸಂಸ್ಥೆಯು ಸಮಾಜದಲ್ಲಿನ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ನೆರವಿನ ಹಸ್ತ ಚಾಚುತ್ತಾ ಸೇವಾ ಕಾರ್ಯ ಮಾಡುವುದರೊಂದಿಗೆ ಅದು ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಬಲ್ಲುದು ಮಾತ್ರವಲ್ಲ ಇತರರಿಗೂ ಪ್ರೇರೇಪಣೆಯಾಗುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.

ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೧, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಮತ್ತು ಪುತ್ತೂರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಇದರ ಜಂಟಿ ಆಶ್ರಯದಲ್ಲಿ ಫೆ.24 ರಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರ ಅಧಿಕೃತ ಭೇಟಿ ಸಂದರ್ಭದಲ್ಲಿ ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿಯಲ್ಲಿ ವಿವಿಧ ವೈದ್ಯಕೀಯ ಸೌಲಭ್ಯಗಳ ಮತ್ತು ಸೇವಾ ಯೋಜನೆಗಳ ‘ರೋಟರಿ ಪುತ್ತೂರು ಸೇವಾ ಉತ್ಸವ್’ ಶ್ರೀ ಲಕ್ಷ್ಮೀ ವೆಂಕಟ್ರಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅವರು ದೀಪಗಿಸುವ ಮೂಲಕ ನೆರವೇರಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ‘ಸೇವೆ’ಗೆ ಹೆಸರುವಾಸಿಯಾಗಿದ್ದು, ಈ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಹಮ್ಮಿಕೊಂಡ ವಿವಿಧ ವೈದ್ಯಕೀಯ ಸೌಲಭ್ಯಗಳು ಮತ್ತು ಸೇವಾ ಯೋಜನೆಗಳ ‘ಸೇವೆ’ ಎಂಬುದನ್ನು ಉನ್ನತೀಕರಿಸಿದ್ದೀರಿ. ಪ್ರತಿಯೋರ್ವ ಮನುಷ್ಯನಿಗೆ ಆರೋಗ್ಯ ಎಂಬುದು ಅತಿ ಮುಖ್ಯ. ಆರೋಗ್ಯವೇ ಭಾಗ್ಯ ಎಂಬಂತೆ ನಾವೆಲ್ಲಾ ನಮ್ಮ ನಮ್ಮ ಆರೋಗ್ಯ ಸುಧಾರಣೆಯತ್ತ ಗಮನ ಕೇಂದ್ರೀಕರಿಸಬೇಕಾಗಿದೆ. ವಿಶೇಷಚೇತನರಿಗೆ ಸಹಾಯಹಸ್ತ ನೀಡುವುದು ಉತ್ತಮ ಕಾರ್ಯಕ್ರಮಗಳಲ್ಲೊಂದಾಗಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ವಿ.ಜೆ ಫೆರ್ನಾಂಡೀಸ್‌ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿಗೆ ೧೧೮ರ ಸಂಭ್ರಮವಾದರೆ ಪುತ್ತೂರು ರೋಟರಿ ಕ್ಲಬ್‌ಗೆ ೫೭ರ ಸಂಭ್ರಮವಾಗಿದೆ. ಈ ೫೭ ವರ್ಷಗಳಲ್ಲಿ ಪುತ್ತೂರು ರೋಟರಿಯು ಜನ ಸೇವೆಯೇ ಸಮಾಜದ ಸೇವೆ ಅಂದುಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ರೋಟರಿಯ ಮಹತ್ವಕಾಂಕ್ಷೆ ಯೋಜನೆಯಾದ ರೋಟರಿ ಬ್ಲಡ್ ಬ್ಯಾಂಕ್ ಅನ್ನು ೧೯೯೮ರಲ್ಲಿ ಸ್ಥಾಪನೆ ಮಾಡಿ, ಮುಂದಿನ ಹನ್ನೆರಡು ವರ್ಷಗಳ ಬಳಿಕ ಗ್ಲೋಬಲ್ ಹಾಗೂ ಮ್ಯಾಚಿಂಗ್ ಗ್ರ್ಯಾಂಟ್ ಮೂಲಕ ಬ್ಲಡ್‌ಬ್ಯಾಂಕ್ ಅನ್ನು ಮೇಲ್ದರ್ಜೆಗೇರಿಸಲಾಯಿತು. ಎರಡು ವರ್ಷದ ಹಿಂದೆ ಮಹಾವೀರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ಸೆಂಟರ್ ಅನ್ನು ಸ್ಥಾಪನೆ ಮಾಡಲಾಯಿತು ಅಲ್ಲದೆ ಬ್ಲಡ್ ಕಲೆಕ್ಷನ್ ಆಂಬುಲೆನ್ಸ್‌ನ ಲೋಕಾರ್ಪಣೆಯೂ ಆಯಿತು. ಹೀಗೆ ಅನೇಕ ಯೋಜನೆಗಳನ್ನು ಕ್ಲಬ್ ಜಾರಿಗೊಳಿಸಿದ್ದು ಇದೀಗ ಕ್ಲಬ್‌ನ ಮತ್ತೊಂದು ಮಹತ್ವಕಾಂಕ್ಷಿ ಯೋಜನೆಯಾದ ಕಣ್ಣಿನ ಆಸ್ಪತ್ರೆಯನ್ನು ಮೇ ತಿಂಗಳಿನಲ್ಲಿ ಲೋಕಾರ್ಪಣೆಗೊಳಿಸುವ ಯೋಜನೆಯೂ ಇದೆ ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್‌ದಾಸ್ ರೈ, ವಲಯ ಸೇನಾನಿ ಪುರಂದರ ರೈ, ಡಿಸ್ಟ್ರಿಕ್ಟ್ ಎಡ್ಮಿನ್ ನಾರಾಯಣ ಹೆಗ್ಡೆ, ಡಿಸ್ಟ್ರಿಕ್ಟ್ ಇವೆಂಟ್ ಸೆಕ್ರೆಟರಿ ಹಾಗೂ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಟ್ರಸ್ಟಿ ಕೆ.ವಿಶ್ವಾಸ್ ಶೆಣೈ, ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ, ಚೇತನಾ ಆಸ್ಪತ್ರೆಯ ಡಾ.ಜೆ.ಸಿ ಆಡಿಗ, ಡಾ.ನಝೀರ್ ಡಯಾಬೆಟ್ಸ್ ಸೆಂಟರ್‌ನ ಡಾ.ನಝೀರ್ ಅಹಮದ್, ಮಹಾವೀರ ಆಸ್ಪತ್ರೆಯ ಡಾ.ಅಶೋಕ್ ಪಡಿವಾಳ್, ರೋಟರಿ ಪುತ್ತೂರು ಮಾಜಿ ಅಧ್ಯಕ್ಷರಾದ ಎಂ.ಜಿ ರಫೀಕ್, ವಾಮನ್ ಪೈ ಸಹಿತ ರೋಟರಿ ಪುತ್ತೂರು ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ ಸ್ವಾಗತಿಸಿ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಝೇವಿಯರ್ ಡಿ’ಸೋಜ ವಂದಿಸಿದರು.


ಉಚಿತ ವೈದ್ಯಕೀಯ ಸೌಲಭ್ಯಗಳು…
-ಕಣ್ಣಿನ ತಪಾಸಣೆ ಹಾಗೂ ಸಲಹೆ
-ದಂತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ
-ರಕ್ತದೊತ್ತಡ, ಮಧುಮೇಹ ತಪಾಸಣೆ
-ಥೈರಾಯಿಡ್ ಹಾರ್ಮೋನ್ ತಪಾಸಣೆ
-ಎಲುಬು ಸಾಂದ್ರತೆ ತಪಾಸಣೆ
-ಮಕ್ಕಳ ಮಧುಮೇಹ ತಪಾಸಣೆ ‘ಮಧುರ ಮಗು’

ಸೇವಾ ಯೋಜನೆಗಳು..
-೪ ಮಂದಿಗೆ ಉಚಿತ ಗಾಲಿ ಕುರ್ಚಿಗಳ ಹಸ್ತಾಂತರ
-೧೬ ಮಂದಿಗೆ ಉಚಿತ ಕೃತಕ ಕಾಲುಗಳ ಹಸ್ತಾಂತರ
-೨೦ ಮಂದಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ವಿತರಣೆ
-೨೫ ಪರ್ಲಡ್ಕ ಪ್ರಾಥಮಿಕ ಶಾಲೆಗೆ ಕುರ್ಚಿಗಳ ವಿತರಣೆ

ಭಾಗವಹಿಸಿದ ಆಸ್ಪತ್ರೆಗಳು/ಕ್ಲಿನಿಕ್..
-ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ
-ಪುತ್ತೂರು ಸಿಟಿ ಆಸ್ಪತ್ರೆ
-ಪ್ರಸಾದ ನೇತ್ರಾಲಯ
-ಚೇತನಾ ಆಸ್ಪತ್ರೆ
-ನಿಟ್ಟೆ ಎ.ಬಿ ಶೆಟ್ಟಿ ಡೆಂಟಲ್ ಸೈನ್ಸ್
-ಡಾ.ನಝೀರ್ ಅಹಮ್ಮದ್ ಕ್ಲಿನಿಕ್

LEAVE A REPLY

Please enter your comment!
Please enter your name here