ಪುತ್ತೂರು: ಉಪ್ಪಿನಂಗಡಿ ವೇದಶಂಕರನಗರದಲ್ಲಿರುವ ಶ್ರೀರಾಮ ಶಾಲೆಯಲ್ಲಿ 23ರಂದು ಐದನೆಯ ಮತ್ತು ಎಂಟನೆಯ ತರಗತಿಯ ವಿದ್ಯಾರ್ಥಿಗಳ ಪೋಷಕರಿಗೆ ಮೌಲ್ಯಾಂಕನದ ಬಗ್ಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ದೇವಿಕಾ ಬನ್ನೂರು ಮಾತನಾಡಿ, ಪ್ರಶ್ನೆ ಪತ್ರಿಕೆಯವಿಶ್ಲೇಷಣೆಯ ಜೊತೆಗೆ ಮಕ್ಕಳನ್ನು ಯಾವ ರೀತಿಯಾಗಿ ಮಾನಸಿಕವಾಗಿ ಪರೀಕ್ಷೆಗೆ ತಯಾರುಗೊಳಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಪೋಷಕರು ಅನೇಕ ಪ್ರಶ್ನೆಗಳ ಮೂಲಕ ತಮಗಿದ್ದ ಗೊಂದಲಗಳನ್ನು ಪರಿಹರಿಸಿಕೊಂಡರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷಸುನಿಲ್ ಅಣವು, ಸಂಚಾಲಕ ಯು.ಜಿ ರಾಧ, ಉಪಾಧ್ಯಕ್ಷೆ ಅನುರಾಧ ಆರ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯ ಗುರು ವಿಮಲ ಮಾತಾಜಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಅರ್ಚನಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಪ್ರೌಢ ವಿಭಾಗದ ಮುಖ್ಯಗುರು ರಘುರಾಮ ಭಟ್ ಸಿ. ವಂದಿಸಿದರು.