ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರದ ಉಪ್ಪಿನಂಗಡಿ ಹಾಗೂ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ.ಮತ್ತು ಉಡುಪಿ ಜಿಲ್ಲೆಯ ಇದರ ಜಂಟಿ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯ ಕುರಿತು ಕಾರ್ಯಾಗಾರ ಅರಫಾ ವಿದ್ಯಾಕೇಂದ್ರದಲ್ಲಿ ನಡೆಯಿತು.
ಅರಫಾ ವಿದ್ಯಾಕೇಂದ್ರದ ಅಧ್ಯಕ್ಷ ಕೆ.ಪಿ.ಎ.ಸಿದ್ದೀಕ್ ಹಾಜಿ ಅವರು ಕಾರ್ಯಾಗಾರ ಉದ್ಘಾಟಿಸಿದರು. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ.ಎಂ.ಮುಸ್ತಫಾ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರೊ.ರಾಜೇಂದ್ರ ಭಟ್‌ರವರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸರಳ ಕಲಿಕಾ ಕಲೆಗಳ ಬಗ್ಗೆ ವಿವರಿಸಿದರು.
ಅರಫಾ ವಿದ್ಯಾಕೇಂದ್ರದ ಸಂಚಾಲಕ ಶರೀಕ್, ಪ್ರಾಂಶುಪಾಲ ಹಬೀಬ್ ರಹ್ಮಾನ್ ಅಗ್ನಾಡಿ, ಮನ್‌ಶರ್ ಪ್ರಾಂಶುಪಾಲ ಹೈದರ್ ಮರ್ದಾಳ, ಅರಫಾ ಶಾಬೀಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದ ಕನ್ವೀನರ್ ಶೇಕ್ ರಹ್ಮತುಲ್ಲಾಹ್ ಬುರೂಜ್ ಸ್ವಾಗತಿಸಿ, ಮ್ಯಾನೇಜರ್ ಮುಹಮ್ಮದ್ ಸವಾದ್ ವಂದಿಸಿದರು. ಶಿಕ್ಷಕಿ ಆರೀಫಾ ಕಾರ್ಯಕ್ರಮ ನಿರೂಪಿಸಿದರು.