‘ ಕೊಡುವುದರಲ್ಲಿರೋ ಖುಷಿಯೂ ಇನ್ನಾವುದರಲ್ಲಿಯೂ ಇಲ್ಲ’:ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿ ಡಾ. ಗೌರಿ ಪೈ ಅನಿಸಿಕೆ

0

ಪುತ್ತೂರು : ಕೊಡುಗೆ ನೀಡುವುದರಲ್ಲಿರೋ ಖುಷಿಯೇ ಬೇರೆ. ನೀಡಿದ್ದು ಪ್ರಚಾರವಾಗಬಾರದು ಮತ್ತು ಹಾಗೇನೆ ಮರೆತು ಬಿಡಬೇಕೆಂದೂ ಸಮಾಜ ಸೇವಕಿ ಹಾಗೂ ಆನಂದ ಆಶ್ರಮ ಸೇವಾ ಟ್ರಸ್ಟ್ ಇದರ ಮುಖ್ಯಸ್ಥೆ ಆಗಿರುವಂಥ ಡಾ.ಗೌರಿ ಪೈ ಅನಿಸಿಕೆ ವ್ಯಕ್ತಪಡಿಸಿದರು. ಸ.ಹಿ.ಪ್ರಾ.ಶಾಲೆ ಸಾಮೆತ್ತಡ್ಕ ಇಲ್ಲಿನ ಮಕ್ಕಳಿಗೆ ತಾವು ಕೊಡುಗೆ ಯಾಗಿ ನೀಡಿರುವಂತಹ ಗಣಕಯಂತ್ರ ಇದರ ಉದ್ಘಾಟನೆಯನ್ನು ,ದೀಪ ಪ್ರಜ್ವಲನೆ ಮೂಲಕ ನೆರವೇರಿಸಿ ,ಪುಟಾಣಿಗಳಿಗೆ ಶುಭ ಹಾರೈಸಿ , ಇಲ್ಲಿನ ಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆ ಮಾಡಿ , ಸಾಧನೆ ಮಾಡುವ ಮೂಲಕ ತಮ್ಮ ಹೆಸರು ಇನ್ನೊಬ್ಬರು ಹೇಳುವಂತೆ ತಾವು ಬೆಳೆದು ನಿಲ್ಲಬೇಕು. ಮುಂದಿನ ದಿನಗಳಲ್ಲಿ ಈ ಶಾಲೆಗೊಂದು ಕೊಠಡಿಯನ್ನು ಕೊಡುಗೆ ನೀಡುವ ಕಾರ್ಯವನ್ನು ಕೂಡ ಮಾಡುತ್ತೇನೆಂದು ಅವರು ವಾಗ್ದಾನ ನೀಡಿದರು.


ಯೆಳ್ತಿಮಾರ್ ಇಂಡಸ್ಟ್ರೀಸ್ ಮಾಲಕಿ ವಿಜಯಲಕ್ಷ್ಮೀ , ಉದ್ಯಮಿ ಪ್ರಸನ್ನ ಶೆಟ್ಟಿ ಸಿಝ್ಲರ್ , ಇನ್ನೋರ್ವ ಉದ್ಯಮಿ ರೋಶನ್ ರೆಬೆಲ್ಲೋ ,
ಎಸ್ಡಿಎಂಸಿ ಅಧ್ಯಕ್ಷ ಪ್ರಸಾದ್ , ನಮ್ಮ ಶಾಲೆಯ ಸಾಮೆತ್ತಡ್ಕ ಟ್ರಸ್ಟಿಗಳಾದ ಮಹಾಲಿಂಗೇಶ್ವರ ಭಟ್ ಹಾಗೂ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬಳಿಕ ಡಾ.ಗೌರಿ ಪೈ ಇವರನ್ನು ಶಾಲಾ ಸಮಿತಿಗಳ ಪರವಾಗಿ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಿಸಲಾಯಿತು. ಸದಾಶಿವ ಪೈ ,
ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ದಿನೇಶ್ ಕಾಮತ್ , ಪಂಚಾಕ್ಷರಿ , ಎಸ್ಡಿಎಂಸಿ ಉಪಾಧ್ಯಕ್ಷೆ ಪವಿತ್ರ , ನಮ್ಮ ಶಾಲೆ ಸಾಮೆತ್ತಡ್ಕ ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್ , ಸಾಮೆತ್ತಡ್ಕ ಯುವಕ ಮಂಡಲ ಇದರ ಜೊತೆ ಕಾರ್ಯದರ್ಶಿ ಸಿರಾಜ್ , ಲೋಹಿತ್ , ಶಿಕ್ಷಕಿಯಾರಾದ ನಿಖಿತಾ ,
ಮೀನಾಕ್ಷಿ ,ವೇದಾವತಿ ,ಸುಮಲತಾ , ತೇಜಸ್ವಿ , ಎಸ್ಡಿಎಂಸಿ ಸದಸ್ಯೆಯರಾದ ಪುಪ್ಪಾಲತಾ ಹಾಗೂ ಶೈಲಾ , ಹಿರಿಯ ವಿದ್ಯಾರ್ಥಿ ಮಹಮ್ಮದ್ ಫಾಯಿಝ್ ಉಪಸ್ಥಿತರಿದ್ದರು.


ಹಿರಿಯ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಶಾಲಾ ಪ್ರಭಾರ ಮುಖ್ಯಗುರು ಮರಿಯಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ದಿನೇಶ್ ಕಾಮತ್ ವಂದಿಸಿದರು.

ಶಾಲೆಗೊಂದು ಕೊಠಡಿ ಕೊಡುಗೆ – ಡಾ.ಗೌರಿ ಪೈ

ಮುಂದಿನ ದಿನಗಳಲ್ಲಿ ಈ ಮುದ್ದು ಪುಟಾಣಿಗಳಿಗಾಗಿಯೇ ಸುಂದರ ಕೊಠಡಿಯೊಂದನ್ನು ಕೊಡುಗೆ ಕೊಡುವೆಯೆಂದು ಸಮಾಜ ಸೇವಕಿ ಡಾ. ಗೌರಿ ಪೈ ವೇದಿಕೆಯಲ್ಲಿ ಘೋಷಣೆ ಮಾಡಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಗಣ್ಯರ ಸಹಿತ ಎಲ್ಲರೂ ಚಪ್ಪಾಳೆ ತಟ್ಟಿ ಅವರನ್ನು ಶ್ಲಾಘಿಸಿ , ಬೆಂಬಲಿಸಿದರು.

LEAVE A REPLY

Please enter your comment!
Please enter your name here