ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಪ್ರಗತಿ ಪರಿಶೀಲನಾ ಸಭೆ

0

ಪುತ್ತೂರು: ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ 23 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೇಂದ್ರ ಕಛೇರಿಯಲ್ಲಿ ಸೊಸೈಟಿಯ ಸಿಬ್ಬಂದಿಗಳ ಮತ್ತು ಪ್ರಗತಿ ಪರಿಶೀಲನಾ ಸಭೆ ಫೆ.25ರಂದು ಜರಗಿತು.

2022-2023ನೇ ಸಾಲಿಗೆ ಸಂಬಂಧಿಸಿದಂತೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಶಾಖಾವಾರು ಠೇವಣಿ, ಸಾಲ ಬಟವಾಡೆ, ಸಾಲ ವಸೂಲಾತಿಗಳ ಬಗ್ಗೆ ಆಯಾಯಾ ಶಾಖೆಗಳ ವ್ಯವಸ್ಥಾಪಕರೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಾಲಾ ಅಖೈರಿಗೆ ಒಂದು ತಿಂಗಳು ಮಾತ್ರ ಇರುವುದರಿಂದ ಸಾಲ ಬಟವಾಡೆ, ಸಾಲ ವಸೂಲಾತಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಅಧ್ಯಕ್ಷ ಸಂತೋಷ್ ಕುಮಾರ್ ಎ.ರವರು ಸಿಬ್ಬಂದಿ ವರ್ಗದವರಿಗೆ ಸೂಚಿಸಿದರು.

ಉಪಾಧ್ಯಕ್ಷ ಶಂಕರ ನಾಯ್ಕ್ ಕೆ. ಮಾತನಾಡಿ ಸೊಸೈಟಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಸಿಬ್ಬಂದಿ ವರ್ಗದವರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಸಿಬ್ಬಂದಿ ವರ್ಗದವರು ಮತ್ತು ನಿತ್ಯನಿಧಿ ಸಂಗ್ರಹಕಾರರ ಸಲ್ಲಿಸಿದ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದೆಂದು ಆಡಳಿತ ಮಂಡಳಿ ಸದಸ್ಯರು ಉತ್ತರಿಸಿದರು. ಪುತ್ತೂರು, ಕಡಬ, ಮಂಗಳೂರು, ಕೊಕ್ಕಡ, ಸುಳ್ಯ ಶಾಖೆಗಳ ಸಿಬ್ಬಂದಿ ವರ್ಗದವರು ಮತ್ತು ನಿತ್ಯ ನಿಧಿ ಸಂಗ್ರಹಕಾರರು ಉಪಸ್ಥಿತರಿದ್ದರು.

ನಿರ್ದೇಶಕರಾದ ಕೆ. ರತ್ನಾಕರ ನಾಯ್ಕ್, ಗೋಪಾಲ ನಾಯ್ಕ್, ಸುದೇಶ್ ಕುಮಾರ್, ಸದಾಶಿವ ನಾಯ್ಕ್, ಟಿ. ರಾಕೇಶ್ ಕುಮಾರ್, ಸತೀಶ್ ನಾಯ್ಕ್, ಹೇಮಲತಾ ಎಸ್. ನಾಯ್ಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ., ಪುತ್ತೂರು ಕೇಂದ್ರ ಕಛೇರಿಯ ಸಿಬ್ಬಂದಿಗಳಾದ ಜಯಲಕ್ಷ್ಮೀ, ಶುತಿಕಾ ಕೆ., ಪ್ರೇಮಾನಂದ ನಾಯ್ಕ್, ಕಾರ್ತಿಕ್, ನಂದನ್ ಕುಮಾರ್, ಮಂಗಳೂರು ಶಾಖಾ ವ್ಯವಸ್ಥಾಪಕಿ ಜಲಜಾಕ್ಷಿ, ಸಿಬ್ಬಂದಿ ಧೀರಜ್ ಎ. ನಾಯ್ಕ್, ಕಡಬ ಶಾಖಾ ವ್ಯವಸ್ಥಾಪಕಿ ಪ್ರತಿಭಾ, ಸಿಬ್ಬಂದಿಗಳಾದ ಶ್ರುತಿ ಯು. ನಾಯ್ಕ್, ಅವಿನಾಶ್, ಕೊಕ್ಕಡ ಶಾಖಾ ವ್ಯವಸ್ಥಾಪಕ ಸಂದೇಶ್, ಸಿಬ್ಬಂದಿ ಪ್ರದೀತ್, ಸುಳ್ಯ ಶಾಖಾವ್ಯವಸ್ಥಾಪಕ ಪ್ರೀತಮ್ ಎನ್, ಸಿಬ್ಬಂದಿ ತನುಜಾ, ನಿತ್ಯನಿಧಿ ಸಂಗ್ರಹಕಾರ ರಾಜೇಶ್ ಯು, ಪ್ರವೀಣ್ ಕುಮಾರ್, ಮನೋರಮ, ಬಬಿತಾ, ಹೇಮಲತಾ, ಗೀತಾ ಉಪಸ್ಥಿತರಿದ್ದರು. ನಿರ್ದೇಶಕರಾದ ಹೇಮಲತಾ ಎಸ್.ನಾಯ್ಕ್, ಪ್ರಾರ್ಥಿಸಿದರು. ಶ್ರುತಿಕಾ ಸ್ವಾಗತಿಸಿದರು. ಜಯಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here