ಪುಣಚ : ಪುಣಚ ಗ್ರಾಮದ ನೀರುಮಜಲು ಶ್ರೀ ಕೋಟಿ-ಚೆನ್ನಯ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೆರ್ಕಳ ನೇಮೋತ್ಸವ ಮಾ.5 ರಂದು ನಡೆಯಲಿದೆ. ಮಾ.04 ರಂದು ಬೆಳಿಗ್ಗೆ ನಾಗ ತಂಬಿಲ, ರಾತ್ರಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನಡೆಯಲಿದೆ.
ಮಾ.05 ರಂದು ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಶುದ್ಧ ಕಲಶಾದಿ ಹೋಮ, ತಂಬಿಲ ನಡೆದು ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ಜರಗಲಿದೆ.
ರಾತ್ರಿ ಶ್ರೀ ಬೈದರ್ಕಳ ಗರಡಿ ಇಳಿಯುವ ಕಾರ್ಯಕ್ರಮ, ಆಯುಧ ಒಪ್ಪಿಸುವುದು , ಮಾಯಂದಾಳ್ ದೇವಿಯ ಉತ್ಸವ, ಪೂಜಾರಿಗಳ ಸೇಟು, ಬೈದೆರ್ಕಳ ಸೇಟು ನಡೆದು ಮಾ.06 ರಂದು ಮುಂಜಾನೆ ಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗರಡಿಯ ಆಡಳಿತ ಮೋಕ್ತೇಸರುಗಳಾದ ಸಂಕಪ್ಪ ಪೂಜಾರಿ ನೀರುಮಜಲು, ಸೀತಾರಾಮ ಪೂಜಾರಿ ನೀರುಮಜಲು, ನಾರಾಯಣ ಪೂಜಾರಿ ನೀರುಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.