ಕೊಡಂಗಾಯಿಯಲ್ಲಿ ನವೀಕೃತ ಮಸೀದಿ ಉದ್ಘಾಟನೆ

0

ಮಸೀದಿಗಳು ಮನಃಶಾಂತಿ ನೀಡುವ ಆಧ್ಯಾತ್ಮಿಕ ತಾಣ-ಪಾಣಕ್ಕಾಡ್ ಶಿಹಾಬ್ ತಂಙಳ್

ಪುತ್ತೂರು: ಮುಸ್ಲಿಮರ ಆರಾಧನಾಲಯಗಳಾದ ಮಸೀದಿಗಳು ಮನುಷ್ಯನಿಗೆ ಮನಃಶಾಂತಿ ನೀಡುವ ಶಾಂತಿ, ಸೌಹಾರ್ದತೆಯ ಆಧ್ಯಾತ್ಮಿಕ ತಾಣವಾಗಿದೆ ಎಂದು ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಹೇಳಿದರು.

ಅವರು ಕೊಡಂಗಾಯಿ ಮುಹ್ಯದ್ದೀನ್ ಜುಮಾ ಮಸೀದಿಯ ನವೀಕೃತ ಮಸ್ಜಿದ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ನವೀಕೃತ ಮಸೀದಿಯ ವಕ್ಫ್ ನಿರ್ವಹಣೆ ನಡೆಸಿ ಮಾತನಾಡಿದ ಉಡುಪಿ ಖಾಝಿ ಮಾಣಿ ಉಸ್ತಾದ್ ಅವರು, ಮಸೀದಿಗಳು ಸೃಷ್ಟಿಕರ್ತನನ್ನು ಆರಾಧಿಸುವ ಪವಿತ್ರ ಸ್ಥಳವಾಗಿದ್ದು ಅದರ ಅಧಿಕಾರ ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುತ್ತದೆ. ಆದ್ದರಿಂದ ಮಸೀದಿಗಳಲ್ಲಿ ಅತ್ಯಂತ ಶಿಸ್ತಿನಿಂದ ಆರಾಧನೆಗಳಲ್ಲಿ ತೊಡಗಿಸಿಕೊಂಡು ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಹೇಳಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮಾತನಾಡಿ ಮುಸ್ಲಿಮರು ಮಸೀದಿ – ಮೊಹಲ್ಲಾಗಳನ್ನು ಕೇಂದ್ರೀಕರಿಸಿ, ಉಲಮಾಗಳ ಮಾರ್ಗದರ್ಶನದಲ್ಲಿ ಸಂಘಟಿತರಾಗಿ ಬಲಿಷ್ಠ ಮತ್ತು ಪರಿಣಾಮಕಾರಿ ವ್ಯವಸ್ಥೆಯ ಮೂಲಕ ಶೈಕ್ಷಣಿಕವಾಗಿ, ರಾಜಕೀಯವಾಗಿಯೂ ಸಬಲೀಕರಣಗೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಭಾಷಣ ಮಾಡಿದ ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮತ್ತು ಉಸ್ತಾದ್ ಉಸ್ಮಾನುಲ್ ಫೈಝಿ ತೋಡಾರ್ ಅವರು ಮಸೀದಿಯ ಮಹತ್ವದ ಬಗ್ಗೆ ವಿವರಿಸಿದರು.

ಮಹಮೂದುಲ್ ಫೈಝಿ ಓಲೆಮುಂಡೋವು, ಕೆ.ಬಿ.ದಾರಿಮಿ ಕೊಡಂಗಾಯಿ, ಅಬೂಬಕ್ಕರ್ ಸಿದ್ದೀಕ್ ಅರ್ಶದಿ, ವಿಟ್ಲ ಪಡ್ನೂರು ಗ್ರಾ.ಪಂ.ಮಾಜಿ ಅಧ್ಯಕ್ಷ ರವೀಶ್ ಶೆಟ್ಟಿ, ಕೊಳ್ನಾಡ್ ಗ್ರಾ.ಪಂ ಉಪಾಧ್ಯಕ್ಷ ಸುಬಾಶ್‌ಚಂದ್ರ ಶೆಟ್ಟಿ, ಗ್ರಾ.ಪಂ.ಸದಸ್ಯ ಸಂದೇಶ್ ಶೆಟ್ಟಿ, ಸಮಾಜ ಸೇವಕ ಶಾಕಿರ್ ಅಳಕೆಮಜಲು, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಮೊದಲಾದವರು ಮಾತನಾಡಿದರು. ಸ್ಥಳೀಯ ಮಸೀದಿ ಗೌರವಾಧ್ಯಕ್ಷ ಸಯ್ಯಿದ್ ಇಬ್ರಾಹಿಂ ಪೂಕುಂಞಿ ತಂಙಳ್ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಸದಸ್ಯರಾದ ನಾಗೇಶ್ ಶೆಟ್ಟಿ, ಹರ್ಶದ್ ಕುಕ್ಕಿಲ, ಮುಹಮ್ಮದ್ ಕಡಂಬು, ಜಮಾಅತ್ ಅಧ್ಯಕ್ಷ ಮುಹಮ್ಮದ್ ಕುಂಞಿ, ಸಯ್ಯಿದ್ ಮೀರ್ ಝಾಹಿದ್ ತಂಙಳ್ ಮಂಜೇಶ್ವರ, ಸಯ್ಯಿದ್ ಶಮೀಂ ತಂಙಳ್ ಟಿಪ್ಪುನಗರ, ಸಯ್ಯಿದ್ ಶಿಯಾಬುದ್ದೀನ್ ತಂಙಳ್ ಮದಕ, ಅಬ್ದುರ್ರಹ್ಮಾನ್ ಫೈಝಿ ಪರ್ತಿಪ್ಪಾಡಿ, ಇಬ್ರಾಹಿಂ ಫೈಝಿ ಕನ್ಯಾನ, ಕೆ.ಕೆ.ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಸಖಾಫಿ, ಅಬ್ದುಲ್ ಗಫೂರ್ ಹನೀಫಿ, ಅಶ್ರಫ್ ಸಅದಿ, ಹಸೈನಾರ್ ಮುಸ್ಲಿಯಾರ್ ರಾಧುಕಟ್ಟೆ, ಇಬ್ರಾಹಿಂ ಝೈನಿ ಕೊಡಂಗಾಯಿ, ಎಂ.ಪಿ. ಉಮರ್ ಮುಸ್ಲಿಯಾರ್ ಟಿಪ್ಪುನಗರ, ಆದಂ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್ ಟಿಪ್ಪುನಗರ, ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್, ವಿ.ಪಿ. ಉಮರ್ ದಾರಿಮಿ, ಹಕೀಂ ಮುಸ್ಲಿಯಾರ್, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಖಲಂದರ್ ಪರ್ತಿಪ್ಪಾಡಿ, ಅಬ್ದುಲ್ಲಾ ಕುಕ್ಕಿಲ, ಇಕ್ಬಾಲ್ ಶೀತಲ್, ಇಬ್ರಾಹಿಂ ಅರಫಾ, ಮೊಯಿದು ಹಾಜಿ ಕಂಬಳಬೆಟ್ಟು, ಹಸೈನಾರ್ ಪಿ.ಕೆ.ಕುಕ್ಕಾಜೆ, ಅಬೂಸಿರಾಜ್ ಕುಕ್ಕಾಜೆ, ಮುಹಮ್ಮದ್ ರಫೀಕ್ ಅಹ್ಸನಿ ಒಕ್ಕೆತ್ತೂರು, ಅಬ್ದುಲ್ಲಾ ಮದನಿ ಸಾಲೆತ್ತೂರು, ಅಬ್ಬಾಸ್ ಮದನಿ ಕುಕ್ಕಿಲ, ಮೊದಲಾದವರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಕನ್ವಿನರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಪ್ರಸ್ತಾವನೆಗೈದು ವಂದಿಸಿದರು. ಅಬ್ಬಾಸ್ ಮದನಿ ಕೊಡಂಗಾಯಿ ಖಿರಾಅತ್ ಪಠಿಸಿದರು. ಜಮಾಅತ್ ಸಮಿತಿಯ ಪದಾಧಿಕಾರಿಗಳಾದ ಸಿ.ಎಚ್.ಅಬ್ದುಲ್ ಖಾದರ್, ಹಕೀಂ ಕೊಡಂಗಾಯಿ ಹುಸೈನ್ ಪಿ, ಹನೀಫ್ ಪಿ, ಸ್ವಾಗತ ಸಮಿತಿ ಪದಾಧಿಕಾರಿಗಳಾದ ರಫೀಕ್, ಅಬ್ದುಲ್ ಮಜೀದ್, ನೂರುದ್ದೀನ್ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ ಧ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಸ್ಜಿದ್ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಬದ್ರಿಯತ್ ಕಮಿಟಿ ಮತ್ತು ನುಸ್ರತುಲ್ ಮಸಾಕೀನ್ ಕುತುಬಿಯತ್ ಕಮಿಟಿ ವತಿಯಿಂದ ಎರಡು ದಿನಗಳ ಮತ ಪ್ರಭಾಷಣ ನಡೆಯಿತು. ಸಯ್ಯಿದ್ ಜಲಾಲುದ್ದೀನ್ ಬುಖಾರಿ ತಂಙಳ್ ಕುನ್ನುಂಗೈ, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಆದೂರು, ಶಾಕಿರ್ ಬಾಖವಿ ಮಂಬಾಡ್, ಅನ್ವರ್ ಅಲಿ ಹುದವಿ ಮಲಪ್ಪುರಂ ಮೊದಲಾದವರು ಧಾರ್ಮಿಕ ಪ್ರಭಾಷಣ ನೀಡಿದರು.

ಸ್ಥಳೀಯ ಯುವಕರ ಒಕ್ಕೂಟದ ವತಿಯಿಂದ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ಸಿರಾಜುಲ್ ಹುದಾ ದಫ್ ಕಮಿಟಿ ಮಣಿಪುರ ಪ್ರಥಮ, ಲಜ್ನತುಲ್ ಅನ್ಸಾರಿಯಾ ದಫ್ ಕಮಿಟಿ ಕೃಷ್ಣಾಪುರ ದ್ವಿತೀಯ, ಅನ್ನಜಾತ್ ದಫ್ ಕಮಿಟಿ ಹಳೇಕಲ ಉಳ್ಳಾಲ ತೃತೀಯ ಹಾಗೂ ಅಲ್ ಜಝೀರಾ ದಫ್ ಕಮಿಟಿ ಅಕ್ಕರೆಕೆರೆ ಉಳ್ಳಾಲ ಚತುರ್ಥ ಸ್ಥಾನ ಪಡೆಯಿತು. ರಫೀಕ್ ಮುಸ್ಲಿಯಾರ್ ಕಡಂಬು, ಇಬ್ರಾಹಿಂ ಕಡಂಬು, ಅಬ್ದುಲತೀಫ್ ಮಾಸ್ಟರ್ ಆತೂರು ಮೊದಲಾದವರು ತೀರ್ಪುಗಾರರಾಗಿ ಸಹಕರಿಸಿದರು. ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here