- 16 ವಿಭಾಗಗಳಲ್ಲಿ 47 ವೈದ್ಯರಿಂದ ಚಿಕಿತ್ಸೆ
- ಉಚಿತ ಔಷಧಿ ವಿತರಣೆ
- 510 ಮಂದಿಗೆ ಚಿಕಿತ್ಸೆ
- ಗೌರವಾರ್ಪಣೆ ಕಾರ್ಯಕ್ರಮ
ಪುತ್ತೂರು: ದೇವಸ್ಥಾನದ ಭಕ್ತಾದಿಗಳಿಗೆ ದೇವರ ದರ್ಶನ, ಸೇವೆಯ ಜೊತೆಗೆ ವೈದ್ಯಕೀಯ ಚಿಕಿತ್ಸೆ ನೀಡುವ ವಿನೂತನ ಚಿಂತನೆಯೊಂದಿಗೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ 11 ತಿಂಗಳುಗಳಿಂದ ನಿರಂತರವಾಗಿ ಪ್ರತಿ ತಿಂಗಳು ನಡೆಯುತ್ತಾ ಬಂದಿರುವ ‘ಉಚಿತ ವೈದ್ಯಕೀಯ ಶಿಬಿರ’ದ ವಾರ್ಷಿಕೋತ್ಸವ ‘ಸಂಪ್ಯ ಆರೋಗ್ಯ ಮೇಳ’ದಲ್ಲಿ ಆಸ್ಪತ್ರೆಯಲ್ಲಿ ದೊರೆಯುವಂತೆ ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ಮೂಲಕ ಕಾರ್ಯಕ್ರಮ ಅದ್ಬುತ ರೀತಿಯಲ್ಲಿ ಮೂಡಿಬಂದಿದೆ.
ಮಹಾವಿಷ್ಣುಮೂರ್ತಿ ದೇವಸ್ಥಾನ, ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಯೋಗದೊಂದಿಗೆ ನಡೆದ ವಾರ್ಷಿಕ ಶಿಬಿರ ‘ಸಂಪ್ಯ ಆರೋಗ್ಯ ಮೇಳ’ವು ಧನ್ವಂತರಿ ಹವನದೊಂದಿಗೆ ಪ್ರಾರಂಭಗೊಂಡಿತು. ಶಿಬಿರಾರ್ಥಿಗಳ ನೋಂದಾವಣೆ, ನಂತರ ಆರೋಗ್ಯ ಮೇಳದ ಉದ್ಘಾಟನೆಗೊಂಡು ವೈದ್ಯರಿಂದ ತಪಾಸಣೆ, ಚಿಕಿತ್ಸೆ ನಡೆಯಿತು. ಶಿಬಿರಕ್ಕಾಗಿ ದೇವಸ್ಥಾನದ ಆವರಣದಲ್ಲಿ ಪ್ರತ್ಯೇಕವಾಗಿ 16 ಚಿಕಿತ್ಸಾ ವಿಭಾಗಗಳನ್ನು ತೆರೆದು ಅದರಲ್ಲಿ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಪ್ರತಿ ವಿಭಾಗಗಳಲ್ಲಿಯೂ ಪ್ರತ್ಯೇಕ ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ಯಾವುದೇ ರೀತಿಯ ಗೊಂದಲ ಉಂಟಾಗದ ರೀತಿಯಲ್ಲಿ ಶಿಬಿರವನ್ನು ಸಂಯೋಜಿಸಲಾಗಿತ್ತು. ಉಚಿತ ಚಿಕಿತ್ಸೆ, ತಪಾಸಣೆ ಹಾಗೂ ರೋಗಿಗಳ ಅವಶ್ಯಕತೆಗನುಗುಣವಾಗಿ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗಿತ್ತು. ಬೆಳಿಗ್ಗೆ 9.30ಕ್ಕೆ ಪ್ರಾರಂಭಗೊಂಡ ಶಿಬಿರವು ಸಂಜೆ 5 ಗಂಟೆಯ ತನಕ ನಡೆಯಿತು.ಶಿಬಿರದಲ್ಲಿ ಆರೋಗ್ಯ ರಕ್ಷಣೆಯ ಜಾಗೃತಿಯ ಜೊತೆಗೆ ಶಿಬಿರಕ್ಕೆ ಆಗಮಿಸಿದವರಿಗೆ ಮತದಾನ ಜಾಗೃತಿಯನ್ನು ಮೂಡಿಸಿರುವುದು ಶಿಬಿರದ ಇನ್ನೊಂದು ವಿಶೇಷತೆಯಾಗಿತ್ತು.
16 ವಿಭಾಗಗಳಲ್ಲಿ 47 ವೈದ್ಯರಿಂದ ಚಿಕಿತ್ಸೆ: ವಾರ್ಷಿಕ ಶಿಬಿರದಲ್ಲಿ 16 ಪ್ರತ್ಯೇಕ ವಿಭಾಗಗಳಲ್ಲಿ ತಪಾಸಣೆ ನಡೆಸಲಾಗಿದೆ. ಜನರಲ್ ಮೆಡಿಸಿನ್ ವಿಭಾಗದಲ್ಲಿ ಡಾ.ಜೆ.ಸಿ.ಅಡಿಗ, ಡಾ.ಸುರೇಶ್ ಪುತ್ತೂರಾಯ, ಡಾ.ಆದರ್ಶ ಸುಳ್ಯ, ಶಸ್ತ್ರಚಿಕಿತ್ಸೆ ತಪಾಸಣಾ ವಿಭಾಗದಲ್ಲಿ ಡಾ.ಎ.ಕೆ.ರೈ, ಡಾ.ಗೋಪಿನಾಥ್ ಪೈ, ಡಾ.ಅಬ್ದುಲ್ ಹ್ಯಾಕ್ ಸುಳ್ಯ, ಸ್ತ್ರೀರೋಗ ತಜ್ಞ ವಿಭಾಗದಲ್ಲಿ ಡಾ.ರಾಜೇಶ್ವರಿ ಪಡಿವಾಳ್, ಡಾ.ಪೂರ್ಣ ರಾವ್, ಡಾ.ವಿಶ್ವಾಸ್ ಸುಳ್ಯ, ಎಲುಬು ಮತ್ತು ಕೀಲು ವಿಭಾಗದಲ್ಲಿ ಡಾ.ಭಾಸ್ಕರ್ ಎಂ., ಡಾ.ಅಜಿತ್, ಡಾ.ಸಚಿನ್ ಶಂಕರ್ ಹಾರಕೆರೆ, ಚರ್ಮರೋಗ ವಿಭಾಗದಲ್ಲಿ ಡಾ.ಬದ್ರಿನಾಥ್, ಡಾ.ನರಸಿಂಹ ಶರ್ಮ ಕಾನಾವು, ಡಾ.ಸಿಮ್ರಾನ್ ಸಾಲಿಯಾನ್ ಸುಳ್ಯ, ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಡಾ.ಎಂ.ಎಸ್ ಶೆಣೈ, ಡಾ.ಮಂಜುನಾಥ್ ಶೆಟ್ಟಿ, ಡಾ.ಶ್ರೀಕಾಂತ್ ರಾವ್, ಡಾ.ಶ್ರೀದೇವಿ ವಿಕ್ರಂ, ಇಎನ್‌ಟಿ ವಿಭಾಗದಲ್ಲಿ ಡಾ.ಈಶ್ವರಪ್ರಕಾಶ್, ಡಾ.ಹರೀಶ್ ಮಡಿವಾಳ್, ಡಾ.ರಕ್ಷಿತ್ ಸುಳ್ಯ, ಕಣ್ಣಿನ ಚಿಕಿತ್ಸೆ ವಿಭಾಗದಲ್ಲಿ ಡಾ.ಹರಿಕೃಷ್ಣ ಕಾಮತ್, ಡಾ.ಆಶಾ ಪುತ್ತೂರಾಯ, ಡಾ.ಕೃಷ್ಣ ಸುಳ್ಯ, ಶ್ವಾಸಕೋಶ ವಿಭಾಗದಲ್ಲಿ ಡಾ.ಪ್ರೀತಿರಾಜ್ ಬಲ್ಲಾಳ್, ಹೃದ್ರೋಗ ವಿಭಾಗದಲ್ಲಿ ಡಾ.ವಿತೇಶ್ ಮಂಗಳೂರು, ನರರೋಗ ಚಿಕಿತ್ಸಾ ವಿಭಾಗದಲ್ಲಿ ಡಾ.ಅರ್ಪಿತಾ ಮಂಗಳೂರು, ಮೂತ್ರಪಿಂಡ (ಕಿಡ್ನಿ)ಚಿಕಿತ್ಸಾ ವಿಭಾಗದಲ್ಲಿ ಡಾ.ದರ್ಶನ್ ಮಂಗಳೂರು, ಡಾ.ವಿಗ್ನಾಸ್ ಮಂಗಳೂರು, ಉದರ ರೋಗ (ಗ್ಯಾಸ್ಟ್ರೋ) ಚಿಕಿತ್ಸಾ ವಿಭಾಗದಲ್ಲಿ ಡಾ.ಕೌಸ್ತುಭ್ ಮಂಗಳೂರು,ಆಯುರ್ವೇದ ಚಿಕಿತ್ಸಾ ವಿಭಾಗದಲ್ಲಿ ಡಾ.ಹರ್ಷಿತಾ ಎಂ.ಸುಳ್ಯ, ಡಾ. ಭಾಗ್ಯೇಶ್ ಕೆ ಸುಳ್ಯ, ಡಾ.ಅವಿನಾಶ್ ಕೆ.ವಿ ಸುಳ್ಯ, ಡಾ.ಸ್ಮಿತಾ ಹರ್ಷವರ್ಧನ್ ಸುಳ್ಯ, ಡಾ.ಅಂಜುಸುಭಾಶ್ ಸುಳ್ಯ, ಹೋಮಿಯೋಪತಿ ಚಿಕಿತ್ಸಾ ವಿಭಾಗದಲ್ಲಿ ಡಾ.ರಮೇಶ್ ಭಟ್, ಡಾ.ರಾಜೇಶ್, ದಂತ ಚಿಕಿತ್ಸಾ ವಿಭಾಗದಲ್ಲಿ ಡಾ.ಕೃಷ್ಣಪ್ರಸಾದ್, ಡಾ.ಯಶ್ಮೀ,ಮೇಲ್ವಿಚಾರಣೆಯಲ್ಲಿ ಡಾ.ವೇಣುಗೋಪಾಲ್, ಡಾ.ಸಾಯಿಪ್ರಕಾಶ್, ಡಾ.ದೀಕ್ಷಾರವರು ಸಹಕರಿಸಿದರು.
ಒಂದೇ ಸೂರಿನಡಿಯಲ್ಲಿ ಎಲ್ಲಾ ಸೇವೆ !: ದೇವಸ್ಥಾನದ ವಠಾರದಲ್ಲಿ ನಡೆಯುವ ಶಿಬಿರದಲ್ಲಿ ಆಸ್ಪತ್ರೆಯಲ್ಲಿ ದೊರೆಯುವಂತೆ ಎಲ್ಲಾ ಸೌಲಭ್ಯಗಳು ಒಂದೇ ಕಡೆ ಆಯೋಜಿಸಲಾಗಿತ್ತು.ವಿವಿಧ ವಿಭಾಗಗಳಲ್ಲಿ ನುರಿತ ವೈದ್ಯರುಗಳಿಂದ ಪ್ರತ್ಯೇಕ ವಿಭಾಗಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ದೊರೆಯುವಂತ ಎಕ್ಸ್‌ರೇ, ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಚಿಕಿತ್ಸೆ ಶಿಬಿರದಲ್ಲಿ ಒದಗಿಸಲಾಗಿತ್ತು.ತಪಾಸಣೆ ಹಾಗೂ ಔಷಧಿಗಳನ್ನು ಶಿಬಿರದಲ್ಲಿ ಒಂದೇ ಕಡೆ ವಿತರಿಸುವ ಮೂಲಕ ಶಿಬಿರಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಉಚಿತವಾಗಿ ಕಲ್ಪಿಸಲಾಗಿತ್ತು.
510ಮಂದಿಗೆ ಚಿಕಿತ್ಸೆ: ವಿವಿಧ ವಿಭಾಗಳಲ್ಲಿ ಒಟ್ಟು 510 ಮಂದಿ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಇಲ್ಲಿ ಎಲ್ಲವೂ ಉಚಿತ!: ಶಿಬಿರದಲ್ಲಿ ರೋಗಿಗಳ ಅವಶ್ಯಕತೆಗನುಗುಣವಾಗಿ ನಡೆಯುವ ತಪಾಸಣೆ, ಚಿಕಿತ್ಸೆಗಳ ಮಾತ್ರವಲ್ಲದೆ ಅವರಿಗೆ ಒಂದು ತಿಂಗಳಿಗೆ ಅವಶ್ಯಕವಾದ ಔಷಧಿಗಳನ್ನು ಉಚಿತವಾಗಿ ನೀಡಲಾಗಿತ್ತು. ಚಿಕಿತ್ಸೆ, ಔಷಧಿಗಳ ಜೊತೆಗೆ ಶಿಬಿರಾರ್ಥಿಗಳಿಗೆ ಮಧ್ಯಾಹ್ನದ ಊಟ, ಬೆಳಿಗ್ಗೆ ಹಾಗೂ ಸಂಜೆಯ ಉಪಾಹಾರವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿರುವುದು ಶಿಬಿರದ ಇನ್ನೊಂದು ವಿಶೇಷತೆಯಾಗಿತ್ತು.
ಆರೋಗ್ಯದಲ್ಲಿ ಮೇಳದಲ್ಲಿ ಸಹಕರಿಸಿದವರು:
ಶಿಬಿರದಲ್ಲಿ ಪುತ್ತೂರು ತಜ್ಞ ವೈದ್ಯರುಗಳು, ಸುಳ್ಯ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ತಜ್ಞ ವೈದ್ಯರುಗಳು, ಮಂಗಳೂರು ಕೆಎಂಸಿ ಆಸ್ಪತ್ರೆ, ಮಹಾವೀರ ಆಸ್ಪತ್ರೆ ಬೊಳುವಾರು, ಸುಳ್ಯ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಧನ್ವಂತರಿ ಲ್ಯಾಬೋರೇಟರಿ ದರ್ಬೆ, ಐಡಿಯಲ್ ಲ್ಯಾಬೋರೇಟರಿ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಹಲವು ಔಷಧ ಕಂಪನಿಗಳು ಹಾಗೂ ಶಿಬಿರವು ಯಶಸ್ವಿಯಾಗಿ ನೆರವೇರುವಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು, ಧರ್ಮಸ್ಥಳ ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡ ಬಲ್ನಾಡು, ಅಕ್ಷಯ ಕಾಲೇಜು ಸಂಪ್ಯ, ನವಚೇತನ ಯುವಕ ಮಂಡಲ, ಸತ್ಯನಾರಾಯಣ ಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಸಹಕರಿಸಿದ್ದರು.
ಧಾರ್ಮಿಕ ಪುಸ್ತಕ ಕೊಡುಗೆ: ದೇವಸ್ಥಾನದ ಧಾರ್ಮಿಕ ಗ್ರಂಥಾಲಯಕ್ಕೆ ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ವೇಣುಗೋಪಾಲ್‌ರವರು ಧಾರ್ಮಿಕ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಆರೋಗ್ಯ ಮಾಹಿತಿ: ವಾರ್ಷಿಕ ಶಿಬಿರದಲ್ಲಿ ನರ ಮಾನಸಿಕ ತಜ್ಞ ಡಾ.ಗಣೇಶ್ ಪ್ರಸಾದ್ ಮುದ್ರಾಜೆಯವರಿಂದ ‘ಮಾನಸಿಕ ಆರೋಗ್ಯದ ಪ್ರಾಮುಖ್ಯತೆ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಗೌರವಾರ್ಪಣೆ: ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಕಳೆದ 11 ತಿಂಗಳುಗಳಿಂದ ನಡೆಯುತ್ತಿರುವ ವೈದ್ಯಕೀಯ ಶಿಬಿರದಲ್ಲಿ ದೇಣಿಗೆ ನೀಡಿ ಸಹಕರಿಸಿದ ದಾನಿಗಳು, ವೈದ್ಯಕೀಯ ತಪಾಸಣೆ ನಡೆಸಿಕೊಟ್ಟ ವೈದ್ಯರುಗಳನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರಿನ ಉದ್ಯಮಿ ಪ್ರಭಾಕರ ಶೆಟ್ಟಿ ಅಳಕೆ, ಪುತ್ತೂರು ವಿದ್ಯಾಮಾತ ಅಕಾಡೆಮಿಯ ನಿರ್ದೇಶಕ ಭಾಗ್ಯೇಶ್ ಎ.ಕೆ., ನಗರಸಭಾ ಸದಸ್ಯರು, ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಬಡಾವು, ಕಲ್ಲಮ ಶ್ರೀ ರಾಘವೇಂದ್ರ ಮಠದ ಆಡಳಿತ ವ್ಯವಸ್ಥಾಪಕ ಡಾ.ಸೀತಾರಾಮ ಭಟ್ ಕಲ್ಲಮ, ನವಚೇತನ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್ ಕಾರ್ಯಕ್ರಮ ನಿರೂಪಿಸಿದರು.ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ವಂದಿಸಿದರು.