ಪುತ್ತೂರು: ಸಾರ್ವಜನಿಕರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಬಲ್ನಾಡು ರಸ್ತೆಯಲ್ಲಿರುವ ರಾಗಿದಕುಮೇರು ಶಾಲೆಯಲ್ಲಿ ಹಾಗೂ ತಾ.ಪಂ. ಸಭಾಂಗಣದಲ್ಲಿ ಮಾರ್ಚ್ 8ರಂದು ಅಣುಕು ಮತದಾನ ನಡೆಯಲಿದೆ.
ಮತದಾನದ ಸೆಕ್ಟರ್ 12ರ ಅಧಿಕಾರಿಗಳು ಬೆಳಿಗ್ಗೆ 10.30ಕ್ಕೆ ರಾಗಿದಕುಮೇರು ಹಿ.ಪ್ರಾ. ಶಾಲೆಯಲ್ಲಿ ಹಾಗೂ ಮಧ್ಯಾಹ್ನ 11ಕ್ಕೆ ತಾಲೂಕು ಪಂಚಾಯತ್ ಹಿಂಭಾಗದಲ್ಲಿರುವ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಮತದಾನದ ಅಣುಕು ಪ್ರಕ್ರಿಯೆ ನಡೆಯಲಿದೆ.
ಸಾರ್ವಜನಿಕರಿಗೆ ಮತದಾನದ ಡಿಜಿಟಲ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೆಕ್ಟರ್ 12ರ ಅಧಿಕಾರಿ ಎಲ್.ಸಿ. ಸಿಕ್ವೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.