ಪುತ್ತೂರು: ಕೃಷಿ ಇಲಾಖೆಯ ವತಿಯಿಂದ 2022-23ನೇ ಸಾಲಿನ ಆತ್ಮಯೋಜನೆಯಡಿ ಕಿಸಾನ್ ಗೋಷ್ಠಿ ಮತ್ತು ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದವರಿಗೆ ಸನ್ಮಾನ ಕಾರ್ಯಕ್ರಮ ಬೊಳುವಾರಿನಲ್ಲಿರುವ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತರಾದ ಅನಿತಾ ಎಂ. ಬೆಟ್ಟಂಪಾಡಿ, ಜಿನ್ನಪ್ಪ ಗೌಡ ಬೆಳ್ಳಿಪ್ಪಾಡಿ, ತಾಲೂಕು ಮಟ್ಟದ ಪ್ರಶಸ್ತಿ ವಿಜೇತರಾದ ವಿವೇಕ್ ಆಳ್ವ ಸವಣೂರು, ಅಣ್ಣು ಪೂಜಾರಿ ಸರ್ವೆ, ಸುರೇಶ್ ರೈ ಇರ್ದೆ, ಲಕ್ಷ್ಮಣ ದೇವಾಡಿಗ ಆಲಂಕಾರು ಹಾಗೂ ಎನ್.ಪಿ. ಮಂಜುನಾಥ್ ಭಟ್ ಉಪ್ಪಿನಂಗಡಿರವರನ್ನು ಸನ್ಮಾನಿಸಲಾಯಿತು.
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಮಾತನಾಡಿ ಶುಭಹಾರೈಸಿದರು. ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ್ ತೋಟಗಾರಿಕಾ ಬೆಳೆಗಳ ಮಾಹಿತಿ ನೀಡಿದರು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸಾಯಿನಾಥ್, ಸೀಮಾ ಕೆ.ಎಚ್., ಕೃಷಿಕ ಸಮಾಜದ ಸದಸ್ಯರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ವಂದನಾ ಸಾಮಂತ್ ನೆಕ್ಕರಾಜೆ ಕಾರ್ಯಕ್ರಮ ನಿರೂಪಿಸಿದರು.