ಪುತ್ತೂರು : ಧರ್ಮ ಗ್ರಂಥಗಳ ಸಾರ ಯಶಸ್ವಿ ಜೀವನಕ್ಕೆ ಭದ್ರಬುನಾದಿ. ಸಂಸ್ಕೃತ ಮತ್ತು ಸಂಸ್ಕೃತಿ ಭಾರತಕ್ಕೆ ವಿಶ್ವಮನ್ನಣೆಯನ್ನು ತಂದು ಕೊಟ್ಟಂತಹ ವಿಷಯಗಳು. ರಾಮಾಯಣ, ಮಹಾಭಾರತ, ಭಗವದ್ಗೀತೆ ಮೊದಲಾದಂತಹ ಗ್ರಂಥಗಳು ಭಾರತೀಯ ಸಂಸ್ಕೃತಿಗೆ ಅಪಾರವಾದ ಕೊಡುಗೆಯನ್ನು ಕೊಟ್ಟಿದೆ. ಜೀವನದ ಬೇಕು ಬೇಡಗಳನ್ನು ಇವುಗಳು ತಿಳಿಸುತ್ತದೆ. ಹೇಗೆ ಆಗಸದಿಂದ ಪತಿತವಾದ ಉದಕವು ಅರ್ಣವಗಳನ್ನು ಸೇರುತ್ತವೋ ಅದೇ ರೀತಿ ನಮ್ಮ ಪ್ರಾರ್ಥನೆ ಒಬ್ಬನೇ ಭಗವಂತನನ್ನು ಸೇರುತ್ತದೆ. ಆತ್ಮಕ್ಕೆ ನಾಶ ಇಲ್ಲ ,ಅದು ಅಜರಾಮರವಾಗಿದೆ. ಶರೀರ ಎಂಬುದು ತಾತ್ಕಾಲಿಕ ಆತ್ಮ ಶಾಶ್ವತವಾಗಿದೆ. ಪ್ರೇತ ಎಂದರೆ ದೇಹವನ್ನು ಬಿಟ್ಟು ಹೋದದ್ದು ಎಂದರ್ಥ. ಶೀಲಾ ಸದಾಚಾರ ನಡತೆ ಇವುಗಳು ಧರ್ಮದ ಅವಿಭಾಜ್ಯ ಅಂಗ.ಮನುಷ್ಯನಿಗೆ ನಡತೆ ಎಂಬುದು ಪ್ರಮುಖವಾದದ್ದು.ದೈವ ಭಕ್ತಿ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನಮಾನವನ್ನು ಹೊಂದಿದೆ ಎಂದರು.
ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಶಿಬಿರಾರ್ಥಿಯಾದ ನವ್ಯಶ್ರೀ ಶಿಬಿರದ ಧ್ಯೇಯ ವಾಕ್ಯವಾಗಿರುವ ‘ಸಾಮಾಜಿಕ ಜಾಲತಾಣದ ಸದ್ಬಳಕೆಯತ್ತ ನಮ್ಮ ಚಿತ್ತ’ ಎಂಬ ಶೀರ್ಷಿಕೆಯಡಿ ಜಲ ಸಂರಕ್ಷಣೆ ವಿಷಯದ ಬಗ್ಗೆ ವಿವರಣೆ ನೀಡಿದರು. ಆನಂತರ ಶಾಲಾ ಮಕ್ಕಳಿಂದ ಹಾಗೂ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಾಲಾ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ರಾಧಾಕೃಷ್ಣ ಭಟ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ವೆಂಕಪ್ಪ ನಾಯ್ಕ ಮತ್ತು ಶ್ರೀಮತಿ ಶಶಿಕಲಾ ,ಶಿಬಿರಾಧಿಕಾರಿಗಳಾದ ಶ್ರೀ ಹರಿಪ್ರಸಾದ್ ಎಸ್ ಹಾಗೂ ಊರವರು, ಶಾಲಾ ವಿದ್ಯಾರ್ಥಿಗಳು, ಘಟಕ ನಾಯಕರುಗಳು, ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಪಂಚಮಿ ಬಿ ಸ್ವಾಗತಿಸಿದರು. ತನುಶ್ರೀ ವಂದಿಸಿದರು. ಅತಿಥಿಯ ಪರಿಚಯ ಕೀರ್ತಿ ಐ ಮಾಡಿದರು. ರಕ್ಷಿತಾ ಕೆ ನಿರೂಪಿಸಿದರು.